ಪ್ರಬೀರ್ `ಈಡನ್ ಬಾಸ್' ಎಂದ ದೋನಿ

7

ಪ್ರಬೀರ್ `ಈಡನ್ ಬಾಸ್' ಎಂದ ದೋನಿ

Published:
Updated:

ಕೋಲ್ಕತ್ತ: ಮಹೇಂದ್ರ ಸಿಂಗ್ ದೋನಿ ಹಾಗೂ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಕ್ಯೂರೇಟರ್ ಪ್ರಬೀರ್ ಮುಖರ್ಜಿ ನಡುವೆ ಪಿಚ್ ಸಂಬಂಧ ಉದ್ಭವಿಸಿದ್ದ ವಿವಾದ ಸದ್ಯದ ಮಟ್ಟಿಗೆ ತಣ್ಣಗಾಗಿರುವಂತೆ ಕಾಣುತ್ತಿದೆ.ಬುಧವಾರ ಇಂಗ್ಲೆಂಡ್ ವಿರುದ್ಧ ಆರಂಭವಾದ ಟೆ ಸ್ಟ್ ಕ್ರಿಕೆಟ್ ಪಂದ್ಯಕ್ಕೆ ಟಾಸ್ ಹಾಕಿದ ಬಳಿಕ ದೋನಿ 83 ವರ್ಷ ವಯಸ್ಸಿನ ಪ್ರಬೀರ್ ಅವರ ಹೆಗಲ ಮೇಲೆ ಕೈ ಹಾಕಿ ನಗುನಗುತ್ತಾ ಮಾತನಾಡಿದರು.`ದೋನಿ ನನ್ನನ್ನು ಈಡನ್ ಗಾರ್ಡನ್ಸ್‌ನ ಬಾಸ್ ಎಂದು ಕರೆದರು' ಎಂಬ ವಿಷಯವನ್ನು ಪ್ರಬೀರ್ ತಿಳಿಸಿದರು. `ತಿರುವು ನೀಡುವ ಪಿಚ್ ಬೇಕು' ಎಂಬ ದೋನಿ ಹೇಳಿಕೆಗೆ ಪ್ರಬೀರ್ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕಾರಣ ದೋನಿ ಮಂಗಳವಾರ ಪಿಚ್ ಪರಿಶೀಲನೆ ವೇಳೆ ಪ್ರಬೀರ್ ಅವರನ್ನು ಮಾತನಾಡಿಸಿರಲಿಲ್ಲ.ಟೆಸ್ಟ್‌ನಲ್ಲಿ ಫ್ಲಡ್‌ಲೈಟ್ಸ್!: ಮಂದ ಬೆಳಕಿನ ಕಾರಣ ಮೊದಲ ದಿನದಾಟದ ಅಂತ್ಯಕ್ಕೆ ಫ್ಲಡ್‌ಲೈಟ್ಸ್ ಬಳಸಲಾಯಿತು. ಪಂದ್ಯ ಮುಗಿಯಲು 20 ನಿಮಿಷಗಳಿರುವಾಗ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಸಿಬ್ಬಂದಿ ಈ ಕ್ರಮಕ್ಕೆ ಮುಂದಾದರು.ಇದೇ ಕಾರಣಕ್ಕೆ ಈ ಅಂಗಳದಲ್ಲಿ ಟೆಸ್ಟ್ ಪಂದ್ಯದ ದಿನದಾಟವನ್ನು ನಿಗದಿತ ಅವಧಿಗಿಂತ ಅರ್ಧ ಗಂಟೆ ಮೊದಲೇ ಆರಂಭಿಸಲಾಗುತ್ತದೆ. ಉಳಿದ ಕಡೆ ಪಂದ್ಯಗಳು ಬೆಳಿಗ್ಗೆ 9.30ಕ್ಕೆ ಆರಂಭವಾದರೆ, ಇಲ್ಲಿ 9 ಗಂಟೆಗೆ ಶುರುವಾಗುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry