ಪ್ರಭಾಕರನ್ ತಾಯಿ ಪಾರ್ವತಿ ಪಿಳ್ಳೈ ನಿಧನ

7

ಪ್ರಭಾಕರನ್ ತಾಯಿ ಪಾರ್ವತಿ ಪಿಳ್ಳೈ ನಿಧನ

Published:
Updated:

ಕೊಲಂಬೊ (ಐಎಎನ್‌ಎಸ್): ಎಲ್‌ಟಿಟಿಇ ನಾಯಕ ದಿವಂಗತ ವೇಲುಪಿಳ್ಳೈ ಪ್ರಭಾಕರನ್ ತಾಯಿ ಪಾರ್ವತಿ ಪಿಳ್ಳೈ ಭಾನುವಾರ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 81 ವರ್ಷ ವಯಸ್ಸಾಗಿತ್ತು. ಹೃದ್ರೋಗವೂ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಕಳೆದ ಒಂದು ತಿಂಗಳ ಹಿಂದೆ ಇಲ್ಲಿನ ವಾಲ್ವೆತಿತುರೈ ಆಸ್ಪತ್ರೆಗೆ ದಾಖಲಾಗಿದ್ದರು. ಕಡೆಗೂ ಗುಣಮುಖರಾಗದ ಅವರು ಭಾನುವಾರ ಕೊನೆಯುಸಿರೆಳೆದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry