ಗುರುವಾರ , ನವೆಂಬರ್ 21, 2019
26 °C

ಪ್ರಭಾಕರ ರೆಡ್ಡಿಯಿಂದ ರೂ 5.73 ಕೋಟಿ ಆದಾಯ ತೆರಿಗೆ ಬಾಕಿ

Published:
Updated:

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಆರ್.ಪ್ರಭಾಕರ ರೆಡ್ಡಿ ಅವರು 2011-12ನೇ ಸಾಲಿನಲ್ಲಿ ಸರ್ಕಾರಕ್ಕೆ ಪಾವತಿಸಬೇಕಾಗಿದ್ದ ಆದಾಯ ತೆರಿಗೆಯರೂ5.73 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ.42 ವರ್ಷದ ಆರ್.ಪ್ರಭಾಕರ ರೆಡ್ಡಿ ಅವರು ನಾಮಪತ್ರದ ಜತೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ವಾರ್ಷಿಕ ರೂ9.89 ಕೋಟಿ ಆದಾಯ ಇರುವುದಾಗಿ ಅವರು ಘೋಷಿಸಿಕೊಂಡಿದ್ದಾರೆ.ಅವರ ಬಳಿರೂ22.12 ಲಕ್ಷದ ಮೌಲ್ಯದ 750 ಗ್ರಾಂ ಚಿನ್ನ,ರೂ11 ಲಕ್ಷ ಮೌಲ್ಯದ 20 ಕೆಜಿ ಬೆಳ್ಳಿ,ರೂ15 ಲಕ್ಷ ಮೌಲ್ಯದ 250 ಗ್ರಾಂ ವಜ್ರ ಹಾಗೂರೂ65 ಲಕ್ಷ ಮೌಲ್ಯದ ರೊಲೆಕ್ಸ್ ವಾಚ್ ಇದೆ. ಪತ್ನಿ ದೀಪಾ ಅವರು ರೂ 66.37 ಲಕ್ಷ ಮೌಲ್ಯದ 2,250 ಗ್ರಾಂ ಚಿನ್ನ,ರೂ15 ಲಕ್ಷ ಮೌಲ್ಯದ 250 ಗ್ರಾಂ ವಜ್ರ ಹೊಂದಿದ್ದಾರೆ.ಪ್ರಭಾಕರ ರೆಡ್ಡಿ ಬಳಿ ಹುಂಡೈ ಸಾಂಡ್ರೊ, ಹುಂಡೈ ಎಸೆಂಟ್, ಸ್ಕೋಡಾ ರೈಡರ್, ಬಿಎಂಡಬ್ಲ್ಯೂ, ಮರ್ಸೆಡಿಸ್ ಬೆಂನ್ಸ್ ಸೇರಿದಂತೆ 7 ಕಾರುಗಳಿವೆ.  ವ್ಯವಹಾರಿಕ ಚಟುವಟಿಕೆಗಳಲ್ಲಿ ತೊಡಗಿಸಿದರೂ125 ಕೋಟಿ ಮೊತ್ತದ ಆಸ್ತಿ ಸೇರಿದಂತೆ ಒಟ್ಟು ರೂ165 ಕೋಟಿ ಮೊತ್ತದ ಚರಾಸ್ತಿ ಹೊಂದಿದ್ದಾರೆ. ಪತ್ನಿಯ ಬಳಿರೂ1.40 ಕೋಟಿ ಮೌಲ್ಯದ ರೇಂಜ್ ರೋವರ್ ಸೇರಿದಂತೆ 2 ಕಾರಿದೆ. ಅವರು ರೂ  2.38 ಕೋಟಿ ಮೊತ್ತದ ಚರಾಸ್ತಿ ಹೊಂದಿದ್ದಾರೆ.  ಪ್ರಭಾಕರ ರೆಡ್ಡಿ ಅವರುರೂ18.16 ಕೋಟಿಯ ಕೃಷಿ ಭೂಮಿ ಮತ್ತು ರೂ 9.25 ಕೋಟಿಯ ವಾಣಿಜ್ಯ ಕಟ್ಟಡಗಳನ್ನು, ಅವರ ಪತ್ನಿ ರೂ 3.42 ಕೋಟಿಯ ಕೃಷಿ ಭೂಮಿ ಹೊಂದಿದ್ದಾರೆ. ಪ್ರಭಾಕರ ರೆಡ್ಡಿ ಅವರು ರೂ 191.69 ಕೋಟಿ ಹಾಗೂ ಪತ್ನಿ ರೂ 2.04 ಕೋಟಿ ಸಾಲ ಹೊಂದಿರುವುದಾಗಿ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)