ಪ್ರಭಾವಿಗಳಿಂದ ಅಕ್ರಮ ಭೂ ಒತ್ತುವರಿ: ಸ್ಪಷ್ಟನೆ

7

ಪ್ರಭಾವಿಗಳಿಂದ ಅಕ್ರಮ ಭೂ ಒತ್ತುವರಿ: ಸ್ಪಷ್ಟನೆ

Published:
Updated:

ದೊಡ್ಡಬಳ್ಳಾಪುರ: ತೋಟಗಾರಿಕೆ ಇಲಾಖೆಗೆ ಸೇರಿರುವ ಭೂಮಿಯಲ್ಲಿ ಅಕ್ರಮವಾಗಿ ಶ್ರೀಮಂತ ವ್ಯಕ್ತಿಗಳೆ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.ನಗರದ ರೋಜೀಪುರದ ಸರ್ವೆ ನಂ.112ರಲ್ಲಿ ಕೋರ್ಟ್ ರಸ್ತೆ ಬದಿಯಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳು ಸ್ಥಳದಲ್ಲಿ 1.5 ಎಕರೆ ಭೂಮಿ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿದೆ ಎಂದು ತಾಲ್ಲೂಕು ಸರ್ವೆ ಇಲಾಖೆ ಅಧಿಕಾರಿಗಳು ನಡೆಸಿರುವ ಸರ್ವೆಯಲ್ಲಿ ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆಗೆ ಸೇರಿರುವ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿರುವ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.ಜಿಲ್ಲಾಧಿಕಾರಿಗಳ ಆದೇಶದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್ ಬಿ.ಸಂಪತ್‌ಕುಮಾರ್ ಎರಡನೇ ಬಾರಿಗೆ ಸರ್ವೆ ನಡೆಸಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಗುರುತು ಹಾಕಿಸಿದರು. ತೋಟಗಾರಿಕೆ ಇಲಾಖೆಗೆ ಸೇರಿರುವ 1.5 ಎಕರೆ ಒತ್ತುವರಿಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಹಸೀಲ್ದಾರ್ ಬಿ.ಸಂಪತ್‌ಕುಮಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry