ಗುರುವಾರ , ಮೇ 6, 2021
32 °C

ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ದೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು `ಟೈಮ್~ ನಿಯತಕಾಲಿಕೆ ಹೆಸರಿಸಿದೆ.`ಇತರರಿಗೆ ಸ್ಫೂರ್ತಿ ನೀಡುವ,  ಸವಾಲು ಒಡ್ಡುವ ಮತ್ತು ವಿಶ್ವದಲ್ಲಿ ಬದಲಾವಣೆ ತರುವ~ 100 ಪ್ರಭಾವಿ ವ್ಯಕ್ತಿಗಳನ್ನು ನಿಯತಕಾಲಿಕೆ ಪಟ್ಟಿ ಮಾಡಿದೆ. ಇದರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಕೋಟ್ಯಧೀಶ ವಾರೆನ್ ಬಫೆಟ್, ಪಾಕಿಸ್ತಾನದ ಮೊತ್ತಮೊದಲ ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಶರ್ಮೀನ್ ಒಬೈದ್ ಚಿನಾಯ್, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಅಂತರ್ಜಾಲ ಸಾಮಾಜಿಕ ಜಾಲ ತಾಣ `ಫೇಸ್‌ಬುಕ್~ ಮುಖ್ಯಸ್ಥ ಶೆರಿಲ್ ಸ್ಯಾಂಡ್‌ಬರ್ಗ್ ಇದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.