ಸೋಮವಾರ, ಮೇ 23, 2022
21 °C

ಪ್ರಮಾಣಪತ್ರ ಪಡೆಯಲು ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕಲೇಶಪುರ: ಕಂದಾಯ ಇಲಾಖೆ ತೆರೆದಿರುವ `ನೆಮ್ಮದಿ ಕೇಂದ್ರ~ ಜನರ ನೆಮ್ಮದಿಗೆ ಭಂಗ ತಂದಿದೆ. ನಿತ್ಯ 30 ಸಾವಿರಕ್ಕೂ ಹೆಚ್ಚು ವಾಹನ ಓಡಾಡುವ, ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕ, ಖಾಸಗಿ ಅಂಗಡಿ ಮುಂಗಟ್ಟುಗಳ ಮಧ್ಯದಲ್ಲಿ ಈ ಕೇಂದ್ರ ತೆರೆಯಲಾಗಿದೆ. ಇದೇ ಸಮಸ್ಯೆಗೆ ಮೂಲ ಕಾರಣ.

ನೆಮ್ಮದಿ ಕೇಂದ್ರದ ಮುಂದೆ ಸರಿಯಾಗಿ 8 ಜನರೂ ಕೂಡ ನಿಂತುಕೊಳ್ಳುವುದಕ್ಕೂ ಸಹ ಸಾಧ್ಯವಿಲ್ಲ.ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸುವಾಗ, ಜಾತಿ ದೃಢೀಕರಣ, ಆದಾಯ ದೃಢೀಕರಣ, ವಾಸದ ದೃಢಿಕರಣ ಪತ್ರ, ವ್ಯವಸಾಯಗಾರರ ದೃಢೀಕರಣ, ವ್ಯವಸಾಯಗಾರರ ಸದಸ್ಯರ ಕುಟುಂಬದ ದೃಢೀಕರಣ, ಜೀವಂತ ಸದಸ್ಯರ ದೃಢೀಕರಣ, ಕೃಷಿ ಕೂಲಿ ಕಾರ್ಮಿಕರ ದೃಢೀಕರಣ, ಸೇರಿದಂತೆ  ಒಟ್ಟು 20 ದೃಢಿ ೀಕರಣ ಪತ್ರಗಳನ್ನು ಈ ನೆಮ್ಮದಿ ಕೇಂದ್ರದ ಮೂಲಕವೇ ಪಡೆಯಬೇಕು.

 

ದೃಢೀಕರ ಣಗಳಿಗಾಗಿ ಅರ್ಜಿ ಹಿಡಿದು ನಿತ್ಯ ನೂರಾರು ಮಂದಿ ಈ ಕೇಂದ್ರಕ್ಕೆ ಬರುತ್ತಾರೆ. ನಿಲ್ಲುವುದಕ್ಕೆ ಅಲ್ಲಿ ಸ್ಥಳವಿಲ್ಲ. ಬಿ.ಎಂ. ರಸ್ತೆಯ ಪಕ್ಕದಲ್ಲಿ ಅಂಗಡಿ ಮುಂಗಟ್ಟುಗಳ ಮುಂದೆ ಸಾಲುಗಟ್ಟಿ ನಿಲ್ಲಬೇಕು. ಅಂಗಡಿಗಳ ಮುಂದೆ ನಿಂತರೆ ಗ್ರಾಹಕರು ಅಂಗಡಿಗೆ ಬರುವುದಕ್ಕೆ ತೊಂದರೆ ಆಗುತ್ತಿದೆ. ಮಹಿಳೆಯರು, ವಯಸ್ಸಾದವರು, ವಿದ್ಯಾರ್ಥಿಗಳು ಗಂಟೆಗಟ್ಟಲೆ ಫುಟ್‌ಪಾತ್ ಮೇಲೆ ನಿಲ್ಲುವುದೇ ದೊಡ್ಡ ಸಮಸ್ಯೆಯಾಗಿದೆ.`ಗಂಟೆಗಟ್ಟಲೆ ಬಿಸಿಲು, ಮಳೆ, ಚಳಿಯಲ್ಲಿ ಸಾಲುಗಟ್ಟಿ ನಿಂತು ದೃಢೀಕರಣ ಪತ್ರಪಡೆಯಲು ಹೋದರೆ, `ವಿದ್ಯುತ್ ಇಲ್ಲ, ಸರ್ವರ್ ಡೌನ್ ಆಗಿದೆ, ನಾಳೆ ಬನ್ನಿ~ ಎಂಬ ಉತ್ತರ ಕೇಳಿಕೊಂಡು ಬರಿಗೈಯಲ್ಲಿ ಹಿಂದಕ್ಕೆ ಬರಬೇಕಾಗಿದೆ. 40ರಿಂದ 50 ಕಿ.ಮೀ. ದೂರದ ತಾಲ್ಲೂಕಿನ ಕಟ್ಟ ಕಡೆಯ ಗ್ರಾಮಗಳಿಂದ ಬರುವಂತಹ ಬಡವರು, ಕೂಲಿ ಕಾರ್ಮಿಕರು, ರೈತರಿಗಂತೂ ನೆಮ್ಮದಿ ಕೇಂದ್ರ ನರಕದ ಕೇಂದ್ರವಾಗಿದೆ~ ಎಂದು ಮಗಜಹಳ್ಳಿ ಗ್ರಾಮದ ರೈತ ಶಾಂತಕುಮಾರ್~ `ಪ್ರಜಾವಾಣಿ~ ತಿಳಿಸಿದರು.ಇಲ್ಲಿಯ ನೆಮ್ಮದಿ ಕೇಂದ್ರ ನಿರ್ವಹಣೆ ಯನ್ನು ಮೈಸೂರು ಐಟಿ ಸೆಲೂಷನ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. ಈ ಸಂಸ್ಥೆ ಅರ್ಜಿ ದಾಖಲಿಸಲು ಕಂಪ್ಯೂಟರ್ ಆಪರೇ ಟರ್ ನೇಮಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದ್ದು, ಸಮಸ್ಯೆ ಇನ್ನೂ ಬಿಗಡಾಯಿಸಲು ಕಾರಣವಾಗಿದೆ.ಕೇಂದ್ರವನ್ನು ತಾಲ್ಲೂಕು ಕಚೇರಿ ಕಟ್ಟಡಕ್ಕೆ ಸ್ಥಳಾಂತರ ಮಾಡುವಂತೆ ತಹಸಿಲ್ದಾರ್ ಚಂದ್ರಮ್ಮ ಅವರು ಹತ್ತಾರು ಬಾರಿ ಮುಖ್ಯಸ್ಥರಿಗೆ ಮೌಖಿಕ ವಾಗಿ ಹಾಗೂ ಲಿಖಿತವಾಗಿ ಆದೇಶ ಮಾಡಿದರೂ ಪ್ರಯೋಜನವಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.