ಗುರುವಾರ , ಜೂನ್ 17, 2021
21 °C

ಪ್ರಮುಖ ಮುಖಂಡರ ಏಳು-ಬೀಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಮುಖ ಮುಖಂಡರ ಏಳು-ಬೀಳು

ನವದೆಹಲಿ (ಪಿಟಿಐ): ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶವು ಹಲವು ಅಚ್ಚರಿಯ ಅಂಶಗಳಿಗೆ ಕಾರಣವಾಗಿದೆ. ಜನರಿಗೆ ಹೆಚ್ಚು ಪರಿಚಿತರಲ್ಲದ ಅಭ್ಯರ್ಥಿಗಳು ಘಟಾನುಘಟಿಗಳನ್ನು ಸೋಲಿಸುವ ಮೂಲಕ ಭಾರಿ ಆಘಾತ ನೀಡಿದ್ದಾರೆ. ಈ ಚುನಾವಣೆಯಲ್ಲಿ ಸೋತ ಮತ್ತು ಗೆದ್ದ ಪ್ರಮುಖರ ವಿವರ ಕೆಳಗಿನಂತಿದೆ.ಉತ್ತರಪ್ರದೇಶ: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಎಸ್‌ಪಿ ಅಭ್ಯರ್ಥಿ ಶಿವಪಾಲ್ ಯಾದವ್ ಅವರು ಜಸ್ವಂತ ನಗರದಲ್ಲಿ ಬಿಎಸ್‌ಪಿಯ ಮನಿಶ್ ಯಾದವ್ ಅವರನ್ನು 81,084 ಮತಗಳ ಭಾರಿ ಅಂತರದಿಂದ ಸೋಲಿಸಿದ್ದಾರೆ.ಕಾಂಗ್ರೆಸ್ ಶಾಸಕ ಅಮಿತ್ ಸಿಂಗ್ ಅವರು ಎಸ್‌ಪಿ ಅಭ್ಯರ್ಥಿ ಗಾಯತ್ರಿ ಪ್ರಸಾದ್ ಪ್ರಜಾಪತಿ ಅವರ ಎದುರು ಏಳು ಸಾವಿರ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಶಿದ್ ಅವರ ಪತ್ನಿ ಲೂಯಿಸ್ ಖುರ್ಷಿದ್ ಫರೂಕಾಬಾದ್‌ನಲ್ಲಿ ಸೋತಿದ್ದಾರೆ. ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ವಿಜಯ್ ಸಿಂಗ್ ಅವರು ಬಿಜೆಪಿಯ ಸುನಿಲ್ ದತ್ ದ್ವಿವೇದಿ ಅವರನ್ನು ಕೇವಲ 147 ಮತಗಳ ಅಂತರದಿಂದ ಸೋಲಿಸಿದ್ದಾರೆ.ಪಕ್ಷೇತರ ಶಾಸಕ ಮುಕ್ತಾರ್ ಅನ್ಸಾರಿ ಅವರು ಖ್ವಾಮಿ ಏಕತಾ ದಳದ ಟಿಕೆಟ್ ಪಡೆದು ಬಿಎಸ್‌ಪಿಯ ಭೀಮ್ ರಾಜಭರ್ ಅವರನ್ನು ಸೋಲಿಸಿದ್ದಾರೆ.ಪಂಜಾಬ್: ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಲಂಬಿ ಕ್ಷೇತ್ರದಲ್ಲಿ ಪುನರಾಯ್ಕೆಗೊಂಡಿದ್ದಾರೆ. ಅವರು ತಮ್ಮ ಸಹೋದರ ಸಂಬಂಧಿ ಮಹೇಶ್ ಇಂದರ್ ಸಿಂಗ್ ಬಾದಲ್ ಅವರನ್ನು 24,739 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಅವರು ಜಲಾಲಾಬಾದ್‌ನಲ್ಲಿ ಪುನರಾಯ್ಕೆಗೊಂಡಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿಗಿಂತ 50, 289 ಹೆಚ್ಚು ಮತಗಳನ್ನು ಪಡೆದಿದ್ದಾರೆ.ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರಿಂದರ್ ಸಿಂಗ್ ಅವರು ಪಟಿಯಾಲ ಕ್ಷೇತ್ರದಲ್ಲಿ ಪುನರಾಯ್ಕೆಯಾಗಿದ್ದಾರೆ. ಆದರೆ ಅವರ ಪುತ್ರ ರಣಿಂದರ್ ಸಿಂಗ್ ಅವರು ಸಾಮನಾ ಕ್ಷೇತ್ರದಲ್ಲಿ ಸೋತಿದ್ದಾರೆ.ಅಮೃತಸರ ಪೂರ್ವ ಕ್ಷೇತ್ರದಲ್ಲಿ ನವಜೋತ್ ಸಿಂಗ್ ಸಿದ್ಧು ಅವರ ಪತ್ನಿ ನವಜೋತ್ ಕೌರ್ ಅವರು ಆಯ್ಕೆಯಾಗಿದ್ದಾರೆ. ಜಲಂಧರ ದಂಡು ಪ್ರದೇಶದಲ್ಲಿ ಮಾಜಿ ಹಾಕಿ ಆಟಗಾರ ಮತ್ತು ಅಕಾಲಿದಳ ಅಭ್ಯರ್ಥಿ ಪ್ರಗತ್ ಸಿಂಗ್ ಅವರು ಕಾಂಗ್ರೆಸ್‌ನ ಜಗಬೀರ್ ಸಿಂಗ್ ಬ್ರಾರ್ ಅವರನ್ನು ಸೋಲಿಸಿದ್ದಾರೆ.ಪಠಾಣಕೋಟ್ ಕ್ಷೇತ್ರದಲ್ಲಿ ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮ ಅವರು ಕಾಂಗ್ರೆಸ್‌ನ ರಮನ್ ಬಲ್ಲಾ ಅವರನ್ನು ಸೋಲಿಸಿದ್ದಾರೆ.ಉತ್ತರಾಖಂಡ: ದಿದಿಹಾತ್ ಕ್ಷೇತ್ರದಲ್ಲಿ ಬಿಜೆಪಿ ಅಧ್ಯಕ್ಷ ಬಿಶನ್ ಸಿಂಗ್ ಅವರು ಕಾಂಗ್ರೆಸ್‌ನ ರೇವತಿ ಜೋಶಿ ಅವರನ್ನು ಪರಾಭವಗೊಳಿಸಿದ್ದಾರೆ.ಉತ್ತರಾಖಂಡ ಕಾಂಗ್ರೆಸ್ ಮುಖ್ಯಸ್ಥ ಯಶಪಾಲ್ ಆರ್ಯ ಅವರು ಬಾಜಪುರ್‌ನಲ್ಲಿ ಬಿಜೆಪಿಯ ರಾಜಕುಮಾರ್ ಅವರನ್ನು ಸೋಲಿಸಿದ್ದಾರೆ.ರಾಣಿಕೇತ್‌ನಲ್ಲಿ ಆರೋಗ್ಯ ಖಾತೆ ಮಾಜಿ ಸಚಿವ ಬಿಜೆಪಿಯ ಅಜಯ್ ಭಟ್ ಅವರು ಕಾಂಗ್ರೆಸ್‌ನ ಕರಣ್ ಮೆಹರಾ ಎದುರಿನಲ್ಲಿ ಸೋತಿದ್ದಾರೆ.ಪ್ರವಾಸೋದ್ಯಮ ಸಚಿವ ಮದನ್ ಕೌಶಿಕ್ ಹರಿದ್ವಾರದಲ್ಲಿ ಗೆದ್ದಿದ್ದಾರೆ. ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಇಂದಿರಾ ಹೃದಯೇಶ್ ಬಿಜೆಪಿಯ ಎರುಣು ಅಧಿಕಾರಿ ಅವರನ್ನು ಸೋಲಿಸಿದ್ದಾರೆ.ಗೋವಾ: ಕಾಂಗ್ರೆಸ್‌ನ ಜೋಕಿಂ ಅಲೆಮಾವೊ ಅವರು ಬಿಜೆಪಿಯ ಸುಭಾಷ್ ನಾಯ್ಕ ವಿರುದ್ಧ ಸೋತಿದ್ದಾರೆ. ಅಲ್ಡೊನಾದಲ್ಲಿ ಬಿಜೆಪಿಯ ಗ್ಲೆನ್ ಟಿಕ್ಲೊ ಗೆದ್ದಿದ್ದಾರೆ.ಶಿರೋಡಾ ಕ್ಷೇತ್ರದಲ್ಲಿ ಗೋವಾ ಕಾಂಗ್ರೆಸ್ ಮುಖ್ಯಸ್ಥ ಸುಭಾಷ್ ಶಿರೋಡ್ಕರ್ ಅವರು ಬಿಜೆಪಿಯ ಮಹಾದೇವ್ ನಾಯ್ಕ ವಿರುದ್ಧ ಸೋತಿದ್ದಾರೆ. ಕಲಂಗುಟ್ ಕ್ಷೇತ್ರದಲ್ಲಿ ಬಿಜೆಪಿಯ ಮೈಕೆಲ್ ಲೋಬೊ ಅವರು ಕಾಂಗ್ರೆಸ್‌ನ ಅಣಜಿಲೊ ಫರ್ನಾಂಡಿಸ್ ವಿರುದ್ಧ ಜಯ ಸಾಧಿಸಿದ್ದಾರೆ.ಹಾಲಿ ಶಾಸಕ ನಿಖಂತ್ ಹಲ್ಮೇಕರ್ ಅವರು ಮಹಾರಾಷ್ಟ್ರ ಗೋಮಾಂತಕ ಪಕ್ಷದ ಕಿರಣ್ ಕಂಡೋಲ್ಕರ್ ಅವರ ಎದುರಿನಲ್ಲಿ ಸೋತಿದ್ದಾರೆ.ಪ್ರವಾಸೋದ್ಯಮ ಇಲಾಖೆಯ ಮಾಜಿ ಸಚಿವ ಮತ್ತು ಗೋವಾ ವಿಕಾಸ ಪಕ್ಷದ ಫ್ರಾನ್ಸಿಸ್ಕೊ ಪಚಾವೊ ಅವರು ನುವೆಮ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಲೆಕ್ಸೊ ಸಿಕ್ವೇರಾ ಅವರನ್ನು ಪರಾಭವಗೊಳಿಸಿದ್ದಾರೆ.ಕಾಂಗ್ರೆಸ್‌ನ ಚರ್ಚಿಲ್ ಅಲೆಮಾವೊ, ಅವರ ಸಹೋದರ ಜೋಕಿಂ ಮತ್ತು ಮಗಳು ವೆಲಂಕಾ ಅವರು ಪರಾಭವಗೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.