ಸೋಮವಾರ, ನವೆಂಬರ್ 18, 2019
22 °C

ಪ್ರಯಾಗ್‌ಗೆ ಬಂಗಾರ

Published:
Updated:

ನವದೆಹಲಿ (ಪಿಟಿಐ): ಭಾರತದ ಪ್ರಯಾಗ್ ಚೌಹಾಣ್ ಕಜಕಸ್ತಾನದಲ್ಲಿ ನಡೆಯುತ್ತಿರುವ `ಎಎಸ್‌ಬಿಸಿ ಕಾನ್‌ಫೆಡರೇಷನ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಷಿಪ್'ನ ಪುರುಷರ 60 ಕೆ.ಜಿ ವಿಭಾಗದಲ್ಲಿ ಸೋಮವಾರ ಬಂಗಾರದ ಪದಕ ಗೆದ್ದುಕೊಂಡರು.16ರ ಹರೆಯದ ಪ್ರಯಾಗ್ ಕಜಕಸ್ತಾನದ ಅಜತ್ ಇಲ್ಯುಬಯೇವ್ ಅವರನ್ನು ಸೋಲಿಸಿದರು. ಫೈನಲ್‌ನಲ್ಲಿ ಪ್ರಯಾಗ್ ಅತ್ಯಂತ ಚುರುಕಿನ ಆಟ ಪ್ರದರ್ಶಿಸುವ ಮೂಲಕ ಪ್ರತಿಸ್ಪರ್ಧಿಯ ವಿರುದ್ಧ ಮೇಲುಗೈ ಸಾಧಿಸಿದರು.ರಾಷ್ಟ್ರೀಯ ಸಬ್ ಜೂನಿಯರ್ ಚಾಂಪಿಯನ್ ಆದಿತ್ಯ ಮಾನ್ ಪುರುಷರ 66 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು. ಜಮ್ಮು ಕಾಶ್ಮೀರದ 15ರ ಹರೆಯದ ಆದಿತ್ಯ,  ನಾಲ್ಕರ ಘಟ್ಟದಲ್ಲಿ ಉಜ್ಬೆಕಿಸ್ತಾನದ ಮೆರಿಜನೇವ್ ಎಲ್ದಾರ್ ವಿರುದ್ಧ ಸೋಲು ಕಂಡರು.ಭಾರತದ ಮತ್ತೊಬ್ಬ ಸ್ಪರ್ಧಿ ಪ್ರದೀಪ್, ಪುರುಷರ 63 ಕೆ.ಜಿ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದರು.  ಟೂರ್ನಿಯಲ್ಲಿ ಒಂದು ಬಂಗಾರ ಮತ್ತು ಮೂರು ಕಂಚಿನ ಪದಕ ಗೆದ್ದುಕೊಂಡ ಭಾರತ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಿತು.): ಭಾರತದ ಪ್ರಯಾಗ್ ಚೌಹಾಣ್ ಕಜಕಸ್ತಾನದಲ್ಲಿ ನಡೆಯುತ್ತಿರುವ `ಎಎಸ್‌ಬಿಸಿ ಕಾನ್‌ಫೆಡರೇಷನ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಷಿಪ್'ನ ಪುರುಷರ 60 ಕೆ.ಜಿ ವಿಭಾಗದಲ್ಲಿ ಸೋಮವಾರ ಬಂಗಾರದ ಪದಕ ಗೆದ್ದುಕೊಂಡರು.16ರ ಹರೆಯದ ಪ್ರಯಾಗ್ ಕಜಕಸ್ತಾನದ ಅಜತ್ ಇಲ್ಯುಬಯೇವ್ ಅವರನ್ನು ಸೋಲಿಸಿದರು. ಫೈನಲ್‌ನಲ್ಲಿ ಪ್ರಯಾಗ್ ಅತ್ಯಂತ ಚುರುಕಿನ ಆಟ ಪ್ರದರ್ಶಿಸುವ ಮೂಲಕ ಪ್ರತಿಸ್ಪರ್ಧಿಯ ವಿರುದ್ಧ ಮೇಲುಗೈ ಸಾಧಿಸಿದರು.ರಾಷ್ಟ್ರೀಯ ಸಬ್ ಜೂನಿಯರ್ ಚಾಂಪಿಯನ್ ಆದಿತ್ಯ ಮಾನ್ ಪುರುಷರ 66 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು. ಜಮ್ಮು ಕಾಶ್ಮೀರದ 15ರ ಹರೆಯದ ಆದಿತ್ಯ,  ನಾಲ್ಕರ ಘಟ್ಟದಲ್ಲಿ ಉಜ್ಬೆಕಿಸ್ತಾನದ ಮೆರಿಜನೇವ್ ಎಲ್ದಾರ್ ವಿರುದ್ಧ ಸೋಲು ಕಂಡರು.ಭಾರತದ ಮತ್ತೊಬ್ಬ ಸ್ಪರ್ಧಿ ಪ್ರದೀಪ್, ಪುರುಷರ 63 ಕೆ.ಜಿ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದರು.  ಟೂರ್ನಿಯಲ್ಲಿ ಒಂದು ಬಂಗಾರ ಮತ್ತು ಮೂರು ಕಂಚಿನ ಪದಕ ಗೆದ್ದುಕೊಂಡ ಭಾರತ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಿತು.

ಪ್ರತಿಕ್ರಿಯಿಸಿ (+)