ಶನಿವಾರ, ಅಕ್ಟೋಬರ್ 19, 2019
27 °C

ಪ್ರಯಾಣಿಕರ ರಕ್ಷಣೆ: ರೈಲ್ವೆಯಿಂದ ಸಹಾಯವಾಣಿ ಆರಂಭ

Published:
Updated:

ನವದೆಹಲಿ (ಪಿಟಿಐ): ರೈಲು ಪ್ರಯಾಣದ ವೇಳೆ ತೊಂದರೆಗೆ ಒಳಗಾಗುವವರ ರಕ್ಷಣೆಗಾಗಿ ಸಹಾಯವಾಣಿ ಸೌಲಭ್ಯವನ್ನು ರೈಲ್ವೆ ಇಲಾಖೆ ಆರಂಭಿಸಿದೆ.`ಅಖಿಲ ಭಾರತ ಪ್ರಯಾಣಿಕರ ಭದ್ರತಾ ಸಹಾಯವಾಣಿ ಸೇವೆ ದೇಶದ ಉದ್ದಗಲದ ಪ್ರಯಾಣಕ್ಕೂ ಲಭ್ಯವಿದ್ದು, ದಿನದ 24 ಗಂಟೆಯೂ ಸಹಾಯವಾಣಿ ತೆರೆದಿರುತ್ತದೆ. ಸಂಖ್ಯೆ 135 ಅನ್ನು ಸಂಪರ್ಕಿಸಿ ಈ ಸೌಲಭ್ಯ ಪಡೆದುಕೊಳ್ಳಬಹುದು~ ಎಂದು ರೈಲ್ವೆ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.`ಸಹಾಯವಾಣಿ ಉಸ್ತುವಾರಿಯನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ನೋಡಿಕೊಳ್ಳಲಿದೆ. ಇದಕ್ಕಾಗಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ದಿನವಿಡೀ ದೂರು ಸ್ವೀಕರಿಸಲಾಗುವುದು. ರಕ್ಷಣೆಗೆ ಸಂಬಂಧಿಸಿದಂತೆ ಪ್ರಯಾಣಿಕರು ಯಾವುದೇ ಬಗೆಯ ದೂರುಗಳನ್ನು ನೀಡಬಹುದು~ ಎಂದು ಅಧಿಕಾರಿ ತಿಳಿಸಿದ್ದಾರೆ.ಈ ಕಾಲ್ ಸೆಂಟರ್ ಕೆಲಸಕ್ಕೆಂದೇ ಆರ್‌ಪಿಎಫ್ 250 ಸಿಬ್ಬಂದಿಗೆ ತರಬೇತಿ ನೀಡಲಿದೆ. ಜೊತೆಗೆ ದೂರುಗಳನ್ನು ಸ್ವೀಕರಿಸುವ ಸಲುವಾಗಿ 30  ಸಿಬ್ಬಂದಿಯನ್ನು ನಿಯಂತ್ರಣ ಕೊಠಡಿಯಲ್ಲಿ ನೇಮಿಸಲು ತೀರ್ಮಾನಿಸಲಾಗಿದೆ.

 

Post Comments (+)