ಮಂಗಳವಾರ, ಏಪ್ರಿಲ್ 13, 2021
32 °C

ಪ್ರಯಾಣಿಕರ ಸಮಸ್ಯೆಗೆ ಪರಿಹಾರದ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಣ್ಣಿಗೇರಿ: ಬಸ್ ಪ್ರಯಾಣಿಕರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿ ಶಶಿಧರ ಭರವಸೆ ನೀಡಿದರು.ಅಣ್ಣಿಗೇರಿ ಬಸ್ ನಿಲ್ದಾಣವನ್ನು ಸಂಸ್ಥೆಯ ಗದಗ ವಿಭಾಗದಿಂದ ಬೇರ್ಪಡಿಸಿ ಹುಬ್ಬಳ್ಳಿ ವಿಭಾಗಕ್ಕೆ ಸೇರಿಸಿದ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸಿದ್ದ ಸಾರಿಗೆ ಸಂಸ್ಥೆ ಅಧಿಕಾರಿ ಶಶಿಧರ, ವಿದ್ಯಾರ್ಥಿ ಸಮುದಾಯದ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು.ಬಸ್ ಪಾಸ್ ನೀಡುವಲ್ಲಿ ಅವ್ಯವಸ್ಥೆ ಕಂಡು ತಕ್ಷಣ ಅದಕ್ಕೆ ಸಿಬ್ಬಂದಿಯೊಬ್ಬರನ್ನು ನಿಯೋಜಿಸಲು ಸೂಚಿಸಿದರು. ಹುಬ್ಬಳ್ಳಿ ನಗರಕ್ಕೆ ಹೋಗಲು ಬೆಳಗ್ಗಿನ ಆರು ಗಂಟೆ ಸುಮಾರಿಗೆ ಇಲ್ಲಿಂದ ಯಾವುದೇ ಬಸ್ ಇಲ್ಲದೆ ಹಲವು ವರ್ಷಗಳಿಂದ ಪರಿತಪಿಸುತ್ತಿರುವ ವಿದ್ಯಾರ್ಥಿ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಬಿಡಲು ತಕ್ಷಣ ವ್ಯವಸ್ಥೆ ಮಾಡುವುದಾಗಿ ಅವರು ತಿಳಿಸಿದರು.ಬಸ್ ನಿಲ್ದಾಣ ಮುಂಭಾಗದ ಆವರಣ ಗೋಡೆ ತೆಗೆದು ಹಾಕಿ ಆ ಭಾಗದಲ್ಲಿ ನವಲಗುಂದ-ಗದಗ ಪಟ್ಟಣಗಳಿಗೆ ಹೋಗಿ ಬರುವ ಬಸ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ನಿಲ್ದಾಣದ ಬಲ ಭಾಗದಲ್ಲಿ ಆ ಭಾಗದ ಹಳ್ಳಿಗಳಿಗೆ ಸಂಚರಿಸುವ ಬಸ್‌ಗಳ ನಿಲುಗಡೆ ಮಾಡಲಾಗುವುದು, ಬಸ್ ನಿಲ್ದಾಣದ ನಾಮಫಲಕದ ಲೋಪವನ್ನು ಸರಿಪಡಿಸಲಾಗುವುದು ಎಂದರು.ಕಲ್ಯಾಣ ರಾಜ್ಯ ವೇದಿಕೆಯ ಅಧ್ಯಕ್ಷ ವೀರೇಶ ಶಾನುಭೋಗರ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನಿಂಗಪ್ಪ ಯಳವತ್ತಿ ಮತ್ತಿತರರು ಪ್ರಯಾಣಿಕರ ಹಲವಾರು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಬಸ್‌ಗಳ ನಾಮಫಲಕದಲ್ಲಿ ಅಣ್ಣಿಗೇರಿ ಹೆಸರನ್ನು ಕಡ್ಡಾಯವಾಗಿ ಬರೆಯುವಂತೆ ಪಟ್ಟಣದ ಹಿರಿಯ ಪ್ರಯಾಣಿಕ ಮಹಾದೇವಪ್ಪ ಒತ್ತಾಯಿಸಿದರು.ಶ್ರೀರಾಮುಲುಗಾಗಿ ಪ್ರಾರ್ಥನೆ

ನವಲಗುಂದ: 
ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿ ಶಾಂತಾದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ  ಜರುಗಿದ ರಥೋತ್ಸವದಲ್ಲಿ ತಾಲ್ಲೂಕಿನ ಬಿಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮುಲು ಸಂಕಷ್ಟ ನಿವಾರಿಸುವಂತೆ ಶಾಂತಾದುರ್ಗಾದೇವಿಗೆ ಮೊರೆಯಿಟ್ಟರು.ಆಚಾರ್ಯ ಶಂಕರಭಟ್ ಜೋಶಿ, ಧುರೀಣರಾದ ಮಲ್ಲಯ್ಯೊ ಚರಂತಿಮಠ, ಅಬ್ದುಲ್ ಫಾರೂಕ್ ನದಾಫ, ಹನುಮಂತ ಕುಕನೂರ, ಶಿವರಾಜು ಲಕ್ಕುಂಡಿ, ಗಂಗಾದರ ಕೋತಿನ, ಮಹಾಂತೇಶ ಕಂಬಿಮಠ, ಶಿವು ಕಂಬಾರ, ಕಳಸಪ್ಪ ಲಕ್ಕುಂಡಿ. ಈರಪ್ಪ ಕಾಲವಾಡ ಮೊದಲಾದವರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.