ಭಾನುವಾರ, ಅಕ್ಟೋಬರ್ 20, 2019
27 °C

ಪ್ರಯಾಣಿಕರ ಹಡಗು ದುರಂತ: ಎಂಟು ಸಾವು

Published:
Updated:

ಮಾಸ್ಕೊ (ಐಎಎನ್‌ಎಸ್/ಆರ್‌ಐಎ ರಿವೊಸ್ತಿ): ಇಟಲಿಯ ಗಿಗ್ಲಿಯೊ ದ್ವೀಪದ ಬಳಿ ಮೆಡಿರೇನಿಯನ್ ಸಮುದ್ರದಲ್ಲಿ ಶನಿವಾರ ಬೆಳಿಗ್ಗೆ ಪ್ರಯಾಣಿಕರ ವೈಭವೋಪೇತ ಬೃಹತ್ ಹಡಗೊಂದು ದುರಂತಕ್ಕೆ ಈಡಾಗಿದ್ದು ಎಂಟು ಜನರು ಮೃತಪಟ್ಟಿದ್ದಾರೆ.

ಹಡಗಿನಲ್ಲಿ ಒಟ್ಟು 3200 ಜನರು ಪ್ರಯಾಣಿಸುತ್ತಿದ್ದರು. ಇವರೆಲ್ಲಾ ಇಟಲಿ, ಜರ್ಮನಿ ಮತ್ತು ಫ್ರಾನ್ಸ್‌ನ ಪ್ರಜೆಗಳಾಗಿದ್ದಾರೆ. ಇಟಲಿಯ ಒಂದು ಸಾವಿರ ಪ್ರಯಾಣಿಕರು ಇದರಲ್ಲಿದ್ದರೆಂದು ವರದಿಗಳು ತಿಳಿಸಿವೆ.

ಪ್ರತ್ಯಕ್ಷದರ್ಶಿಗಳ  ಪ್ರಕಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 8 ಗಂಟೆಗೆ ಹಡಗಿನಲ್ಲಿ ವಿದ್ಯುತ್ ಅವಘಡ ಸಂಭವಿಸಿತು. ಪರಿಣಾಮ 290 ಮೀಟರ್‌ಗಳಷ್ಟು ಉದ್ದದ ಬೃಹತ್ ಹಡಗು ನೀರಿನಲ್ಲಿ ಹಂತಹಂತವಾಗಿ ಮುಳುಗಲು ಆರಂಭಿಸಿತು ಎಂದು ಹೇಳಲಾಗಿದೆ.

ದುರಂತದ ಆಘಾತ ತಡೆಯಲಾರದೆ ಕೊರೆಯುವ ತಣ್ಣನೆಯ ನೀರಿಗೆ ಹಾರಿದ 70 ವರ್ಷದ ವೃದ್ಧರೊಬ್ಬರು ಹೃದಯಾಘಾತಕ್ಕೆ ಒಳಗಾಗಿ ಸತ್ತಿದ್ದಾರೆ. ಹಡಗಿನಲ್ಲಿ ಇನ್ನೂ 200 ಜನರಿದ್ದಾರೆ. ಹೆಲಿಕಾಪ್ಟರ್‌ಗಳ  ಮುಖಾಂತರ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

Post Comments (+)