ಶುಕ್ರವಾರ, ಏಪ್ರಿಲ್ 16, 2021
31 °C

ಪ್ರಯಾಣ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದೇ 11, 12 ಮತ್ತು 13ರಂದು ಬೆಳಗಾವಿಯಲ್ಲಿ ನಡೆಯಲಿರುವ ಎರಡನೆಯ ವಿಶ್ವ ಕನ್ನಡ ಸಮ್ಮೇಳನಕ್ಕೆ ತೆರಳುವವರ ಅನುಕೂಲಕ್ಕಾಗಿ ವಿಶೇಷ ಬಸ್ಸು, ರೈಲು ಮತ್ತು ವಿಮಾನ ಸೌಲಭ್ಯಗಳು ಲಭ್ಯವಾಗಲಿವೆ.ಸಮ್ಮೇಳನದಲ್ಲಿ ಪಾಲ್ಗೊಳ್ಳುವವರಿಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ ವಿಶೇಷ ಬಸ್ಸುಗಳ ಸೌಲಭ್ಯ ಒದಗಿಸಲಿದೆ. ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಂದ ಬೆಳಗಾವಿಗೆ ಇದೇ 10ರಿಂದ 14ರ ವರೆಗೆ ವಿಶೇಷ ಸಾರಿಗೆ ಸೌಲಭ್ಯವನ್ನು ಸಂಚಾರ ಒತ್ತಡಕ್ಕೆ ಅನುಗುಣವಾಗಿ ಒದಗಿಸಲಾಗುವುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.ವಿಶೇಷ ವಿಮಾನ: ಸಮ್ಮೇಳನಕ್ಕೆ ಬೆಳಗಾವಿಗೆ ತೆರಳುವವರಿಗಾಗಿ ರಾಜ್ಯ ಸರ್ಕಾರ ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಿದೆ ಎಂದು ವಿಶ್ವ ಕನ್ನಡ ಸಮ್ಮೇಳನದ ವಿಶೇಷ ಅಧಿಕಾರಿ ಐ.ಎಂ. ವಿಠಲಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಿಶೇಷ ವಿಮಾನವು ಮಾ. 11 ರಂದು ಬೆಳಿಗ್ಗೆ 10.40ಕ್ಕೆ ಬೆಂಗಳೂರಿನಿಂದ ಹೊರಟು, ಮಧ್ಯಾಹ್ನ 12.10ಕ್ಕೆ ಬೆಳಗಾವಿ ತಲುಪಲಿದೆ.ಮಾ. 13 ರಂದು ರಾತ್ರಿ 8.50ಕ್ಕೆ ಬೆಳಗಾವಿಯಿಂದ ಹೊರಟು ರಾತ್ರಿ 10.30ಕ್ಕೆ ಬೆಂಗಳೂರು ತಲುಪಲಿದೆ.ವಿಶೇಷ ರೈಲು: ಬೆಂಗಳೂರಿನಿಂದ ಬೆಳಗಾವಿಗೆ ತೆರಳಲಿರುವ ವಿಶೇಷ ರೈಲು ಮಾ. 10 ರಂದು ರಾತ್ರಿ 8 ಗಂಟೆಗೆ ಯಶವಂತಪುರ ರೈಲು ನಿಲ್ದಾಣದಿಂದ ಹೊರಡಲಿದ್ದು ಮಾ. 11ರ ಬೆಳಿಗ್ಗೆ 8 ಗಂಟೆಗೆ ಬೆಳಗಾವಿ ತಲುಪಲಿದೆ.ಮಾ. 13 ರಂದು ರಾತ್ರಿ 9.30ಕ್ಕೆ ಬೆಳಗಾವಿಯಿಂದ ಹೊರಡಲಿರುವ ವಿಶೇಷ ರೈಲು ಮಾ. 14 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.ಶೇ 30ರಷ್ಟು ರಿಯಾಯಿತಿ: ಹವಾನಿಯಂತ್ರಿತ, ಎರಡನೇ ದರ್ಜೆ, ಮೂರನೇ ದರ್ಜೆ ಹಾಗೂ ಸಾಮಾನ್ಯ ದರ್ಜೆ ಬೋಗಿ ಸೇರಿದಂತೆ ಒಟ್ಟು 18 ಬೋಗಿಗಳನ್ನು ಬೆಳಗಾವಿಗೆ ತೆರಳುವ ವಿಶೇಷ ರೈಲು ಒಳಗೊಂಡಿರುತ್ತದೆ.ವಿಶೇಷ ರೈಲಿನಲ್ಲಿ ಪ್ರಯಾಣಿಸುವ ವಿಶ್ವ ಕನ್ನಡ ಸಮ್ಮೇಳನದ ನೋಂದಾಯಿತ ಪ್ರತಿನಿಧಿಗಳಿಗೆ ರಾಜ್ಯ ಸರ್ಕಾರ ರೈಲಿನ ಎಲ್ಲ ದರ್ಜೆಗಳ ಪ್ರಯಾಣ ದರದಲ್ಲಿ ಶೇ 30ರಷ್ಟು ರಿಯಾಯಿತಿ ಘೋಷಿಸಿದೆ. ಟಿಕೆಟ್‌ಗಳನ್ನು ಬೆಂಗಳೂರಿನ ನರಸಿಂಹರಾಜ ವೃತ್ತದ ಬಾದಾಮಿ ಹೌಸ್‌ನಲ್ಲಿರುವ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಕಾಯ್ದಿರಿಸಬಹುದು.ಹೆಚ್ಚಿನ ವಿವರಗಳಿಗೆ ಕಚೇರಿಯ ದೂರವಾಣಿ: 080-4334 4334, 080-4346 4346 ಹಾಗೂ 89706 50070 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.