ಪ್ರಳಯ ಸುಳ್ಳು ಸುದ್ದಿ ಹಬ್ಬಿಸುವವರೆ ಪ್ರಳಯಾಂತಕರು

7

ಪ್ರಳಯ ಸುಳ್ಳು ಸುದ್ದಿ ಹಬ್ಬಿಸುವವರೆ ಪ್ರಳಯಾಂತಕರು

Published:
Updated:

ಗುರುಮಠಕಲ್: ಪ್ರಳಯ ಆಗುವುದು ಎಂಬ ಮಾಹಿತಿಯನ್ನು ಜನರಲ್ಲಿ ಹಬ್ಬುವಂತೆ ಮಾಡಿದ್ದು ದೃಶ್ಯ ಮಾಧ್ಯಮಗಳು. ಇದರಿಂದ ಜನರಲ್ಲಿ ಭೀತಿಯ ವಾತಾವರಣ ನಿರ್ಮಾವಾಗಿದೆ ಇದು ಸುಳ್ಳು ಎಂಬ ಮಾಹಿತಿಯನ್ನು ಮಾಧ್ಯಮದವರೇ ಪ್ರಚಾರ ಮಾಡುತ್ತಿದ್ದಾರೆ.ಆದರೆ ಜನರಲ್ಲಿ ಒಮ್ಮೆ ಭೀತಿ ಹುಟ್ಟಿತೆಂದರೆ ಅದು ಮನದಲ್ಲಿ ಮನೆ ಮಾಡುತ್ತದೆ. ಪ್ರಳಯ ಆಗುವುದಿಲ್ಲಾ ಪ್ರಳಯ ಆಗುತ್ತದೆ ಎಂದು ಹೇಳುವವರೆ ಪ್ರಳಯಾಂತಕರು ಎಂದು ಶಹಾಪುರ ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವರಾಧ್ಯ ಸತ್ಯಂಪೇಟ ಹೇಳಿದರು.ಅವರು ಮಂಗಳವಾರ ಪಟ್ಟಣದ ಖಾಸಾಮಠದ ಆವರಣದಲ್ಲಿ ಖಾಸಾಮಠ, ಯಾದಗಿರಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಯಾದಗಿರಿ ಅನಿಕೇತನ ಟ್ರಸ್ಟ್, ಶಹಾಪುರ ಬಸವಮಾರ್ಗ ಪ್ರತಿಷ್ಠಾನ ಹಾಗೂ ಸುರಪುರದ ಸಗರನಾಡು ಸೇವಾ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪ್ರಳಯ - ಪ್ರಳಯಾಂತಕರು ಕುರಿತಾದ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.ಭೂಮಿಯ ಅಸ್ತಿತ್ವ ನಮಗೆ ನಿಖರವಾಗಿ ತಿಳಿಯದು, ಹವಮಾನ, ಪರಿಸರದಲ್ಲಾಗುವ ಬದಲಾವಣೆಯಿಂದ ಭೂಮಿಯಲ್ಲಿ ಏರು ಪೇರುಗಳು ಆಗುವುದು ಸಹಜ. ಪ್ರಕೃತಿಯ ವಿರುದ್ಧ ಹೋಗಬಾರದು. ಪ್ರಾನ್ಸಿ ಲೈಡರ್ ಎಂಬಾಕೆ ವೆಬ್‌ಸೈಟ್ ಮೂಲಕ ಪ್ರಳಯದ ಸುಳ್ಳು ಸುದ್ದಿ ಹಬ್ಬಿಸಿದ್ದಳೆಂಬುದು ತಿಳಿದು ಬಂದಿದೆ. ಇದು ಸುಳ್ಳು ಸುದ್ದಿ. ಶಾಲೆಯ ಮಕ್ಕಳಲ್ಲಿ ಪ್ರಳಯ ಆಗುವುದಿಲ್ಲಾ ಇದನ್ನು ನಿಮ್ಮ ಪಾಲಕರಿಗೂ ತಿಳಿಸಿ ಹೇಳಬೇಕು, ಪ್ರಳಯ ಆಗುವವುದು ಎಂದು ಹೇಳುವವರು ಪ್ರಳಯಾಂತಕರು ಎಂದು ತಿಳಿಸಬೇಕು. ಮೂಢ ನಂಬಿಕೆಗಳನ್ನು ಬಿಡಬೇಕು ಎಂದು ಹೇಳಿದರು.ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು ಸಾನಿಧ್ಯವಹಿಸಿ ಆಶಿರ್ವಚನ ನೀಡಿದರು. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಮರೆಮ್ಮ ಶಂಕ್ರಪ್ಪ ಶ್ಯಾಣೆನೋರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯುವ ಸಾಹಿತಿ ಗಾಳೆಪ್ಪ ಪೂಜಾರಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ವೇದಿಕೆಯಲ್ಲಿದ್ದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಅಖಂಡೇಶ್ವರ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಶಾಲೆಯ ಸಿಬ್ಬಂದ್ದಿವರ್ಗ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry