ಪ್ರವರ್ಗ 1ರ ಆದಾಯ ಮಿತಿ ರದ್ದು

7

ಪ್ರವರ್ಗ 1ರ ಆದಾಯ ಮಿತಿ ರದ್ದು

Published:
Updated:

ಶಿವಮೊಗ್ಗ: ಪ್ರವರ್ಗ 1ಕ್ಕೆ ನಿಗದಿಪಡಿಸಿದ್ದ ರೂ 1ಲಕ್ಷ ಆದಾಯ ಮಿತಿಯನ್ನು ರದ್ದು ಮಾಡಲಾಗುವುದು, ಪ್ರವರ್ಗ 1ಕ್ಕೆ ಸೇರಿದ ಸಮುದಾಯಗಳಿಗೆ ಆದಾಯ ಪ್ರಮಾಣಪತ್ರ ಪಡೆಯಲು ಈ ಹಿಂದೆ ಇದ್ದಂತಹ ನೀತಿಯನ್ನೆ ಮುಂದುವರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಘೋಷಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಉಪ್ಪಾರ ಸಂಘ ಭಾನುವಾರ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಉಪ್ಪಾರ ವಿದ್ಯಾರ್ಥಿನಿಲಯದ ದುರಸ್ತಿಗೆ ಮತ್ತು ಸಮುದಾಯ ಭವನಕ್ಕೆ ಅವಶ್ಯಕತೆ ಇರುವ ರೂ  2ಕೋಟಿ ಹಣದಲ್ಲಿ ಶೇಕಡ 70ರಷ್ಟು ಹಣವನ್ನು ಸರ್ಕಾರದಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.ಸ್ವಾಮೀಜಿಗಳ ನಡುವಿನ ತಾರತ್ಯಮ ಕುರಿತು ಪ್ರಸ್ತಾವಿಸಿದ ಅವರು, ಸ್ವಾಮೀಜಿಗಳಿಗೆ ತಾವೇ ಮೇಲು ಎಂಬ ಭಾವನೆ ಇರುತ್ತದೆ. ಇತರ ಸಾಮೀಜಿಗಳೂ ಸಮಾನರು ಎಂದು ಸಹ ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಸ್ವಾಮೀಜಿಗಳು ತಾವೇ ಶ್ರೇಷ್ಠ ಎಂದು ಪ್ರತಿಪಾದಿಸುತ್ತಾರೆ ಎಂದು ಅವರು ಹೇಳಿದರು.ನಗರಸಭೆ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಉಪ್ಪಾರ ಸಮುದಾಯ ಭವನ ನಿರ್ಮಾಣಕ್ಕೆ ನಗರಸಭೆಯಿಂದ ರೂ 2ಲಕ್ಷ ಅನುದಾನ ನೀಡುವುದಾಗಿ ಹೇಳಿದರು.ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಉಪ್ಪಾರ ಸಮಾಜದ ಮೂಲ ಪುರುಷ ಸಗರ ಮಹಾರಾಜ ಮಹಾಕ್ಷತ್ರೀಯನನ್ನು ಹೊಂದಿದ ಸಮಾಜ, ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ ಎಂದು ಹೇಳಿ ಭಗೀರಥನ ಹಿನ್ನೆಲೆ ತಿಳಿಸಿದರು.ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಮಾತನಾಡಿ, ಸಮಾಜ ಸಂಘಟನೆಗೊಳ್ಳಬೇಕು. ಸಂಘಟನೆಯ ಶಕ್ತಿಯಿಂದ ಯಾವುದೇ ಕಾರ್ಯ ಮಾಡಬಹುದು. ಸಮಾಜದ ಯುವಕರು ಸಂಘಟನೆಗೊಳ್ಳಿ ಎಂದು ಹೇಳಿದರು.ಹೊಸದುರ್ಗ ಭಗೀರಥ ಪೀಠದ ಪುರುಷೋತ್ತ ಮಾನಂದಪುರಿ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಉಪಸ್ಥಿತರಿದ್ದರು. ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಕೆ. ದೇವೇಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry