ಸೋಮವಾರ, ಜೂನ್ 21, 2021
30 °C

ಪ್ರವಾಸಿಗರ ಆಕರ್ಷಣೆಗೆ ಸೂಕ್ತ ಕ್ರಮ: ಕೌನ್ಸೆಲರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಪ್ರವಾಸಿ ವೀಸಾ ಬಗ್ಗೆ ಮಾಹಿತಿ ನೀಡಲು ಅಮೆರಿಕದ ವಾಣಿಜ್ಯ ಇಲಾಖೆಯ ವಾಣಿಜ್ಯ ಸೇವೆ ವಿಭಾಗವು ನಗರದಲ್ಲಿ ಸೋಮವಾರ `ಪ್ರವಾಸ ಮತ್ತು ವ್ಯಾಪಾರ~ ವಿಚಾರ ಸಂಕಿರಣ ಏರ್ಪಡಿಸಿತ್ತು. ದೇಶದ ವಿವಿಧ ಭಾಗಗಳ ಟ್ರಾವೆಲ್ ಏಜೆನ್ಸಿಗಳ ಪ್ರತಿನಿಧಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.`ಪ್ರವಾಸಿಗರನ್ನು ಆಕರ್ಷಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವಾಸಿಗರಿಗೆ ಮುಖ್ಯವಾಗಿ ವೀಸಾ ಪಡೆಯುವಲ್ಲಿ ತೊಂದರೆ ಆಗುತ್ತದೆ. ಈ ಬಗ್ಗೆ ಯಾವುದೇ ತೊಂದರೆ ಇದ್ದರೆ ಕಾನ್ಸುಲೇಟ್ ಕಚೇರಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು. ವೀಸಾ ಪಡೆಯುವ ಸಲುವಾಗಿ ನಕಲಿ ದಾಖಲೆಗಳನ್ನು ಯಾವುದೇ ಕಾರಣಕ್ಕೂ ಸಲ್ಲಿಸಬೇಡಿ~ ಎಂದು ಕೌನ್ಸೆಲರ್ ಅಧಿಕಾರಿ ಅಬಿಜಯಲ್ ಅರೋಸನ್ ಹೇಳಿದರು.ಮೂರು ಬಾರಿ ಅಮೆರಿಕ ವೀಸಾ ನಿರಾಕರಿಸಲಾಗಿದೆ ಎಂದು ಗ್ರಾಹಕರೊಬ್ಬರು ನನ್ನ ಬಳಿ ಬಂದಿದ್ದಾರೆ. ವೀಸಾ ಏಕೆ ನಿರಾಕರಿಸಲಾಗುತ್ತದೆ ಎಂದು ತಿಳಿದುಕೊಳ್ಳಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಬಿಜಯಲ್, `ವೀಸಾ ನೀಡುವ ವಿಧಾನ ಒಂದೇ ರೀತಿ ಇರುತ್ತದೆ. ಕೆಲ ಪ್ರಕ್ರಿಯೆಗಳು ಕ್ರಮಬದ್ಧವಾಗಿ ಪೂರ್ಣಗೊಂಡರೆ ವೀಸಾ ನಿರಾಕರಣೆಯ ಪ್ರಶ್ನೆ ಉದ್ಭವಿಸದು~ ಎಂದು ಅವರು ವಿವರಣೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.