ಪ್ರವಾಸಿ ತಾಣ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್

7

ಪ್ರವಾಸಿ ತಾಣ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್

Published:
Updated:

ಗದಗ: ಹೊಯ್ಸಳ ದೊರೆ ಬಿಟ್ಟಿದೇವ ಕಟ್ಟಿಸಿದ ವೀರನಾರಾಯಣ ದೇವಸ್ಥಾನ ಸೇರಿದಂತೆ ಜಿಲ್ಲೆಯ 60 ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ `ಮಾಸ್ಟರ್ ಪ್ಲಾನ್~ ಸಿದ್ಧಪಡಿಸಲಾಗಿದೆ.ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ 239 ಲಕ್ಷ ರೂಪಾಯಿ ಪ್ರಸ್ತಾವ ಸಲ್ಲಿಸಿತ್ತು. ಸರ್ಕಾರ ಮೊದಲ ಹಂತವಾಗಿ ರೂ. 80 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ.ವೀರನಾರಾಯಣ ದೇವಸ್ಥಾನ ಬಳಿ ಶೌಚಾಲಯ ನಿರ್ಮಾಣ ಮತ್ತು ಕುಡಿಯುವ ನೀರಿನ ಸೌಲಭ್ಯಕ್ಕೆ ರೂ. 15 ಲಕ್ಷ, ನರಗುಂದ ತಾಲ್ಲೂಕಿನ ಬಳಗ ನೂರು ಗ್ರಾಮದ ಬಳಿ ಯಾತ್ರಿ ನಿವಾಸ ನಿರ್ಮಾಣಕ್ಕೆ ರೂ. 20 ಲಕ್ಷ, ಮುಂಡರಗಿ ನಗರದ ಅನ್ನದಾನೇಶ್ವರ ಮಠದ ಸಮೀಪ ಯಾತ್ರಿ ನಿವಾಸಕ್ಕೆ ರೂ. 30 ಲಕ್ಷ ಹಾಗೂ ಶಿರಹಟ್ಟಿ ತಾಲ್ಲೂಕಿನ ದೇವಿಹಾಳ ಗ್ರಾಮದ ಹೊಳಲಮ್ಮದೇವಿ ದೇವಸ್ಥಾನದ ಬಳಿ ಯಾತ್ರಿ ನಿವಾಸ ನಿರ್ಮಾಣಕ್ಕೆ ರೂ. 20 ಲಕ್ಷ ಬಿಡುಗಡೆ ಮಾಡಿದೆ.ಈಗಾಗಲೇ 1. 94 ಕೋಟಿ ವೆಚ್ಚ ದಲ್ಲಿ ಐತಿಹಾಸಿಕ ಲಕ್ಕುಂಡಿ ಕೆರೆ ಅಭಿ ವೃದ್ಧಿ ಪಡಿಸುವ ಕಾರ್ಯ ಭರದಿಂದ ಸಾಗಿದ್ದು, ಶೇ. 90 ಕಾಮಗಾರಿ ಪೂರ್ಣ ಗೊಂಡಿದೆ.`ಗದುಗಿನ ಮಹಾಭಾರತ~ ಬರೆ ಯಲು ಕವಿ ಕುಮಾರವ್ಯಾಸನಿಗೆ ಸ್ಪೂರ್ತಿ ನೀಡಿದ ವೀರನಾರಾಯಣ ಗುಡಿಗೆ ದೇಶ, ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಕುಡಿಯುವ ನೀರು, ಶೌಚಾಲಯದ ಸಮಸ್ಯೆಯಿಂದ ಪ್ರವಾಸಿಗರು ತೊಂದರೆ ಅನುಭವಿ ಸುತ್ತಿದ್ದರು. ಈಗಲೂ ದೇಗುಲದ ಎದುರು ಕುಡಿಯುವ ನೀರಿಗೆ ಕೊಡಗಳ ಸಾಲು ನೋಡಬಹುದು. ಇದನ್ನು ಮನಗಂಡು ಶೌಚಾಲಯ ಮತ್ತು ನೀರಿನ ಸೌಲಭ್ಯ ಒದಗಿಸಲು ನಿರ್ಧರಿ ಸಲಾಗಿದೆ.ಅದೇ ರೀತಿ ರೋಣ ತಾಲ್ಲೂಕಿನ ಸೂಡಿ ಗ್ರಾಮದ ಮಲ್ಲಿಕಾರ್ಜನ ದೇವಸ್ಥಾನ ರಸ್ತೆಗಳ ಅಭಿವೃದ್ಧಿಗೆ ರೂ. 50 ಲಕ್ಷ ಹಾಗೂ ಸವಡಿ ಗ್ರಾಮದ ಪ್ರಾಚೀನ ದೇವಾಲಯಗಳ ರಸ್ತೆ ಅಭಿವೃದ್ಧಿಗೆ 45 ಲಕ್ಷ ರೂಪಾಯಿ ಪ್ರಸ್ತಾವ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯಾಗಬೇಕಿದೆ.`ಪ್ರಮುಖ ಪ್ರವಾಸಿ ತಾಣಗಳನ್ನು ಪಟ್ಟಿ ಮಾಡಿ ಅವುಗಳ ಅಭಿವೃದ್ಧಿಗೆ ಸರ್ಕಾರಕ್ಕೆ ರೂ. 239 ಲಕ್ಷ ಪ್ರಸ್ತಾವ ಸಲ್ಲಿಸಲಾಗಿತ್ತು. ಆದ್ಯತೆ ಮೇರೆಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳ ಲಾಗುತ್ತಿದೆ. ಮೊದಲ ಹಂತವಾಗಿ 80 ಲಕ್ಷ ಬಿಡುಗಡೆ ಮಾಡಿದೆ. ಶೀಘ್ರ ದಲ್ಲಿಯೇ ಟೆಂಡರ್ ಕರೆದು ಕಾಮ ಗಾರಿಗಳನ್ನು ಆರಂಭಿಸ ಲಾಗುವುದು. ಶೌಚಾಲಯ ನಿರ್ಮಾಣಕ್ಕೆ ದೇಗುಲದ ಟ್ರಸ್ಟ್‌ನವರು ಜಾಗ ಹಾಗೂ ಒಪ್ಪಿಗೆ ಪತ್ರ ನೀಡಬೇಕು. ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಅವುಗಳ ನಿರ್ವಹಣೆಯನ್ನು    ಟ್ರಸ್ಟ್‌ಗೆ ವಹಿಸ ಲಾಗುವುದು~ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಜು `ಪ್ರಜಾವಾಣಿ~ಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry