ಗುರುವಾರ , ಮೇ 13, 2021
32 °C

`ಪ್ರವಾಸೋದ್ಯಮಕ್ಕೆ ಜೀವವೈವಿಧ್ಯ ಬಳಸಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕೋಲಾ: `ಜೀವ ವೈವಿಧ್ಯವನ್ನು ಹಾನಿಮಾಡದೇ ಅವುಗಳನ್ನು ಪ್ರವಾಸೋದ್ಯಮಕ್ಕಾಗಿ ಬಳಸಿಕೊಂಡಾಗ ಜನರ ಜೀವನಮಟ್ಟ ಸುಧಾರಿಸುತ್ತದೆ. ಹಾಗಾಗಿ ಎಲ್ಲಾ ದಿನಗಳನ್ನು ವಿಶ್ವ ಪರಿಸರ ದಿನ ಎಂದೇ ಆಚರಿಸಬೇಕು' ಹೀಗೆಂದು ಹಿರಿಯ ಸಂಶೋಧನಾ ವಿಜ್ಞಾನಿ, ಜೀವ ವೈವಿಧ್ಯ ಮಂಡಳಿಯ ಸದಸ್ಯ ಡಾ. ಎಂ.ಡಿ. ಸುಭಾಶ್‌ಚಂದ್ರನ್ ಸಲಹೆ ನೀಡಿದರು.ಕೆಎಲ್‌ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ, ಕೌಟುಂಬಿಕ ಸಲಹಾ ಕೇಂದ್ರ ಅಂಕೋಲಾ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬೆಂಗಳೂರಿನ ಆಶ್ರಯದಲ್ಲಿ ಪಟ್ಟಣದಲ್ಲಿ ಬುಧವಾರ ಜರುಗಿದ ಜೀವ ವೈವಿಧ್ಯ ಸಂರಕ್ಷಣೆ  ಕುರಿತ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಗಿಡನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಾಗರ ಜೀವಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ವಿ.ಎನ್. ನಾಯಕ, `ಜೀವ ವೈವಿಧ್ಯಗಳನ್ನು ನಾಶ ಮಾಡದೇ ಮುಂದಿನ ಭವಿಷ್ಯತ್ತಿಗಾಗಿ ಸುಸ್ಥಿರ ಪರಿಸರ ನಿರ್ಮಾಣ ಮಾಡಬೇಕು' ಎಂದರು. ಕಾರ್ಯಕ್ರಮದ ವೀಕ್ಷಕರಾಗಿ ಆಗಮಿಸಿದ ಸಿದ್ದಾಪುರದ ಧನ್ವಂತರಿ ಆಯುರ್ವೇದ ಕಾಲೇಜಿನ ಪ್ರೊ.ಎಲ್. ರಾಘವೇಂದ್ರ, `ಪ್ರತಿಯೊಂದು ಆಚರಣೆಗಳ ದಿನ ಸಸಿ ನೆಟ್ಟು ಸಂರಕ್ಷಿಸುವ ಪರಂಪರೆ ಪ್ರಾರಂಭವಾಗಲಿ' ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ವಿಜಯ ಆರ್. ಸೂರ್ಯವಂಶಿ, `ಜೀವ ವೈವಿಧ್ಯ ಸಂರಕ್ಷಣೆ ಜಾಗತಿ ಆಂದೋಲನ ಸಮರೋಪಾದಿಯಲ್ಲಿ ನಡೆಯಬೇಕಾಗಿದೆ. ಇಲ್ಲವಾದಲ್ಲಿ ಮಾನವನ ಜೀವನವೇ ಸಮಸ್ಯೆಗೆ ಸಿಲುಕುವುದು ಖಚಿತ' ಎಂದರು. ಕೆಎಲ್‌ಇ ಕೌಟುಂಬಿಕ ಸಲಹಾ ಕೇಂದ್ರದ ಸಲಹೆಗಾರರಾದ ತಿಮ್ಮಣ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಜೀವ ವೈವಿಧ್ಯಗಳ ಕುರಿತು ಶಿಕ್ಷಕ ವಿದ್ಯಾರ್ಥಿಗಳು ಬರೆದ ಲೇಖನಗಳ ಪುಸ್ತಕವನ್ನು ಬಿಡುಗಡೆಮಾಡಲಾಯಿತು.

ಭವ್ಯ ಸಂಗಡಿಗರು ಪ್ರಾರ್ಥನೆ ಹಾಡಿದರು. ಜೀವ ವಿಜ್ಞಾನ ಉಪನ್ಯಾಸಕ ಸುಬ್ರಹ್ಮಣ್ಯ ಭಟ್ಟ ಸ್ವಾಗತಿಸಿದರು. ವಿಜ್ಞಾನ ಸಂಘದ ಕಾರ್ಯದರ್ಶಿ ಅಂಕಿತಾ ಶೇಣ್ವಿ ವಂದಿಸಿದರು. ಕುಮಾರಿ ಸೀಮಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.ಬೇಲೇಕೇರಿಯಲ್ಲಿ ಪರಿಸರ ಸ್ವಚ್ಛತಾ ಕಾರ್ಯಕ್ರಮ: ಕಸ್ತೂರಿ ಕನ್ನಡ ಎಚ್.ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದ ಅಂಕೋಲಾ ಘಟಕದ ವತಿಯಿಂದ ಬೇಲೇಕೇರಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು. ಗ್ರಾಮದ ಮುಖ್ಯರಸ್ತೆಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ವಸ್ತುಗಳನ್ನು ಗ್ರಾಮಸ್ಥರು ಸಂಗ್ರಹಿಸಿ ಸ್ವಚ್ಛಗೊಳಿಸಿದರು.ಈ ಸಂದರ್ಭದಲ್ಲಿ ಬಳಗದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆರ್. ನಾಯಕ, ಪ್ಲಾಸ್ಟಿಕ್‌ನ ಅತಿಯಾದ ಬಳಕೆಯ ದುಷ್ಪರಿಣಾಮದ ಕುರಿತು ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಚಂದ್ರಕಾಂತ ಎನ್. ನಾಯಕ, `ನಮ್ಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತೇವೆ' ಎಂದರು. ಪರಿಸರಪ್ರೇಮಿ ಕೇಶವ ಬಿ. ನಾಯಕ, ರಾಮಚಂದ್ರ ಹೆಗಡೆ ಮುಂತಾದವರು ಆಗಮಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.