ಸೋಮವಾರ, ಅಕ್ಟೋಬರ್ 14, 2019
28 °C

ಪ್ರವಾಸೋದ್ಯಮ ಅಭಿವೃದ್ಧಿ ಅಗತ್ಯ

Published:
Updated:

ಚಿಕ್ಕನಾಯಕನಹಳ್ಳಿ: ಆರ್ಥಿಕಾಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಪೂರಕವಾಗಿ ಪ್ರವಾಸೋದ್ಯಮ ವನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ತಿಳಿಸಿದರು.ಇಲ್ಲಿನ ನವೋದಯ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬುಧವಾರ  ಕಾಲೇಜಿನ ಇತಿಹಾಸ  ವಿಭಾಗ, ಯುಜಿಸಿ ಹಾಗೂ ತುಮಕೂರು ವಿಶ್ವವಿದ್ಯಾ ನಿಲಯ ಆಶ್ರಯದಲ್ಲಿ ನಡೆದ ಪ್ರವಾಸೋ ದ್ಯಮ ನೆಲೆಯಾಗಿ ಕರ್ನಾಟಕ- ಸಾಧ್ಯತೆಗಳು ಹಾಗೂ ಸವಾಲುಗಳು ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ದೇಶದ ಇತಿಹಾಸ ದರ್ಶನ, ವೈವಿದ್ಯ ಮಯ ಕಲೆ, ಸಂಸ್ಕೃತಿ, ವಾಸ್ತುಶಿಲ್ಪಿ, ಧರ್ಮ, ಪ್ರಕೃತಿ, ಪರಂಪರೆಗಳ ಪರಿಚಯ ಪ್ರವಾಸೋದ್ಯಮದಿಂದ ದೊರೆಯಲಿದೆ ಎಂದರು.ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಥಾಯ್‌ಲ್ಯಾಂಡ್ ಹಾಗೂ ಸಿಂಗಪೂರ್ ಪ್ರವಾ ಸೋದ್ಯಮ ಆಧಾರದಲ್ಲೆ ಅಭಿವೃದ್ಧಿ ಸಾಧಿಸಿವೆ. ವಿಫುಲ ಅವಕಾಶವಿರುವ ನಮ್ಮ ದೇಶದಲ್ಲಿ ಈ ಕ್ಷೇತ್ರವನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ ಎಂದರು.ವಿದ್ಯಾಸಂಸ್ಥೆ ಉಪಾಧ್ಯಕ್ಷ ಎಂ. ರೇಣುಕಾರ್ಯ, ಕಾರ್ಯದರ್ಶಿ ಬಿ.ಕೆ. ಚಂದ್ರಶೇಖರ್, ಪ್ರಾಂಶುಪಾಲರಾದ ಪ್ರೊ.ಕೆ.ಸಿ.ಬಸಪ್ಪ, ಪ್ರಾಧ್ಯಾಪಕ ಡಾ. ಎಸ್.ಷಡಕ್ಷರಯ್ಯ ಮಾತನಾಡಿದರು. ಗೋಷ್ಠಿಗಳಲ್ಲಿ ಚನ್ನೈನ ಮದ್ರಾಸ್ ವಿಶ್ವವಿದ್ಯಾನಿಲಯ ಇತಿಹಾಸ ವಿಭಾಗದ ಮುಖ್ಯಸ್ಥ ಜಿ.ವೆಂಕಟರಾಮನ್, ಎಸ್. ನಿಜಲಿಂಗಪ್ಪ ಕಾಲೇಜು ಮುಖ್ಯಸ್ಥ ಎ.ಬಿ.ರಾಜಣ್ಣ ಭಾಗವಹಿಸಿದ್ದರು.

 

Post Comments (+)