ಗುರುವಾರ , ಆಗಸ್ಟ್ 6, 2020
24 °C

ಪ್ರವಾಹದ ಅಲೆಯಲ್ಲಿ ತೇಲಿದ ಸಾಹಸಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರವಾಹದ ಅಲೆಯಲ್ಲಿ ತೇಲಿದ ಸಾಹಸಿ!

ಶಿವಮೊಗ್ಗ: ನಗರದ ಸಾಹಸಿ ಅ.ನಾ.ವಿಜಯೇಂದ್ರರಾವ್ ಈಚೆಗೆ ಸುರಿಯುವ ಮಳೆಯಲ್ಲಿ, ಪ್ರವಾಹದ ಅಲೆಯಲ್ಲಿ ತುಂಗಾ ನದಿಯಲ್ಲಿ ಕೆಲಕಾಲ ತೇಲಿದರು.ನಗರದ ಬೈಪಾಸ್ ರಸ್ತೆ ಸೇತುವೆ ಬಳಿಯಿಂದ ಗಾಳಿ ತುಂಬಿದ ಟ್ಯೂಬ್‌ನಲ್ಲಿ ತೇಲಿ ಬಂದ ಅವರು, ಬೆಕ್ಕಿನಕಲ್ಮಠದ ಬಳಿ ದಡ ಹತ್ತಿದರು.`ಹಿಂದಿಗಿಂತ ಈ ಬಾರಿ ತುಂಗೆ ರಭಸದಿಂದ ಹರಿಯುತ್ತಿದ್ದು, ನದಿಯ ದಡದ ಪಕ್ಕದಲ್ಲಿ ವಾಸಿಸುವ ಜನರು ಈಗಲೇ ಎಚ್ಚರಿಕೆ ವಹಿಸಿದರೆ ಒಳ್ಳೆಯದು. ನೀರಿನ ಸೆಳೆತಕ್ಕೆ ಈ ಬಾರಿ ಹೊಸ ಸೇತುವೆಯಿಂದ ಮಂಟಪಕ್ಕೆ ಬರಲಾಗದೆ ಬೆಕ್ಕಿನಕಲ್ಮಠಕ್ಕೆ ಹೋಗಿ ದಡ ಸೇರಬೇಕಾಯಿತು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.`ನದಿಪಾತ್ರದಲ್ಲಿ ಅತಿಯಾದ ಮರಳುಗಾರಿಕೆ ಮಾಡಿರುವುದು. ಅಲ್ಲಿರುವ ಬಂಡೆಕಲ್ಲುಗಳನ್ನು ಸ್ಫೋಟಿಸಿರುವುದರಿಂದ ನದಿ ಈಗ ಬಹಳ ವೇಗವಾಗಿ ಹರಿಯುತ್ತಿದೆ. ನದಿಗೆ ಯಾರೇ ಇಳಿಯಬೇಕಾದರೆ ಸುರಕ್ಷಿತ ಕ್ರಮಗಳನ್ನು ಕೈಗೊಂಡೇ ಇಳಿಯಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ಬಾರಿ ತೇಲಿ ಬಂದೆ' ಎನ್ನುತ್ತಾರೆ ಅವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.