ಶನಿವಾರ, ಮೇ 8, 2021
26 °C

ಪ್ರವಾಹ ಎದುರಿಸಲು ತಾಲ್ಲೂಕು ಆಡಳಿತ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ: ಮಳೆಗಾಲ ಆರಂಭವಾಗಿ ಮೂರು ತಿಂಗಳ ನಂತರ ಭೀಮಾ ನದಿಗೆ ಪ್ರವಾಹ ಭೀತಿ ಉಂಟಾಗಿದ್ದು, ಅದನ್ನು ನಿಭಾಯಿಸಲು ಮಂಗಳವಾರ ತಹಸೀಲ್ದಾರ ಹಾಗೂ ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ತಹಸೀಲ್ದಾರ ಕಚೇರಿಯಲ್ಲಿ ಸಭೆ ನಡೆಸಲಾಯಿತು.ಮಹಾರಾಷ್ಟ್ರದ ಉಜನಿ ಹಾಗೂ ವೀರಭಟ್ಕಳ ಜಲಾಶಯಗಳಿಂದ ಭೀಮಾ ನದಿಗೆ 2.23 ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ನದಿಯಲ್ಲಿ ಮಂಗಳವಾರ ವರೆಗೆ 8.7 ಮೀಟರ್ ನೀರು ಇದೆ 9 ಮೀಟರ್ ನೀರು ಬಂದರೆ ಅನಾನುಕೂಲವಾಗಲಿದೆ. ಸಧ್ಯಕ್ಕೆ ಮಹಾರಾಷ್ಟ್ರದಿಂದ ಬಿಟ್ಟಿರುವ ನೀರಿನಿಂದ ಯಾವುದೆ ಅಪಾಯವಿಲ್ಲ.ಆದರೂ ಮುನ್ನಚ್ಚರಿಕೆಯಾಗಿ 14 ಗ್ರಾಮಗಳಲ್ಲಿ ಕಾರ್ಯದರ್ಶಿಗಳು, ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಲೆಕ್ಕಿಗರು ಬಿಡಾರ ಹೂಡುವಂತೆ ಆದೇಶ ಮಾಡಲಾಗಿದೆ ಎಂದು ಅವರು ಸಭೆಯಲ್ಲಿ ತಿಳಿಸಿದರು.ಅವಶ್ಯಕತೆ ಇರುವ ಗ್ರಾಮಗಳಲ್ಲಿ ಗಂಜಿ ಕೇಂದ್ರ ಆರಂಭಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಂಬಂಧಪಟ್ಟ ಗ್ರಾಮದ ಅಧಿಕಾರಿಗಳು ತಮ್ಮ ಮೊಬಾಯಿಲ್‌ಗಳನ್ನು ಸ್ವೀಚ್‌ಆಫ್ ಮಾಡಬಾರದು ಸಭೆಯಲ್ಲಿ ತಿಳಿಸಲಾಯಿತು. ನೋಡಲ್ ಅಧಿಕಾರಿಯಾಗಿರುವ ಮಂಜುನಾಥ ಹಾಗೂ ತಹಸೀಲ್ದಾರ ಪಿ.ಜಿ ಪವಾರ್ ಪ್ರವಾಹ ಮುನ್ನಚ್ಚರಿಕೆ ಮಾಹಿತಿಗಳನ್ನು ಸಭೆಗೆ ತಿಳಿಸಲಾಯಿತು.ಉಜನಿ ಹಾಗೂ ವೀರಭಟ್ಕಳ್ ಜಲಾಶಯಗಳಿಂದ 2.23 ಲಕ್ಷ ಕ್ಯೂಸೆಕ್ ನೀರು ಭೀಮಾ ನದಿಗೆ ಬಿಡಲಾಗಿದ್ದು, ಅದೇ ಪ್ರಮಾಣದಲ್ಲಿ ಭೀಮಾ ಬ್ಯಾರೇಜ್‌ನ 24 ಗೇಟ್‌ಗಳ ಮುಖಾಂತರ ನೀರು ಹೊರಗೆ ಬಿಡಲಾಗುತ್ತದೆ. 92 ಸಾವಿರ ಕ್ಯೂಸೆಕ್ ನೀರು ಬಿಡುವದಾಗಿ ಮಹಾರಾಷ್ಟ್ರ ಸರ್ಕಾರ ಮಾಹಿತಿ ನೀಡಿತ್ತು ಆದರೆ 2.23 ಲಕ್ಷ ಕ್ಯೂಸೆಕ್ ನೀರು ಬಿಟ್ಟಿದೆ ಎಂದು ಭೀಮಾ ನೀರಾವರಿ ಯೋಜನೆ ಕಾರ್ಯಪಾಲಕ ಎಂಜನಿಯರ್ ಎಸ್‌ಜಿ ಬಿರಾದಾರ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.