ಪ್ರವಾಹ: ಮುಂಜಾಗ್ರತೆ ವಹಿಸಲು ಮನವಿ

ಗುರುವಾರ , ಜೂಲೈ 18, 2019
27 °C

ಪ್ರವಾಹ: ಮುಂಜಾಗ್ರತೆ ವಹಿಸಲು ಮನವಿ

Published:
Updated:

ಹೂವಿನಹಡಗಲಿ: ಮುಂಗಾರು ಹಂಗಾಮು ಆರಂಭವಾಗಿರುವುದರಿಂದ ನದಿತೀರದ ಪ್ರದೇಶದ ಹಳ್ಳಿಗಳಿಗೆ ಯಾವುದೇ ಸಂದರ್ಭದಲ್ಲಿ ಅತಿವೃಷ್ಠಿ ಯಾಗುವ ಸಂಭವವಿದೆ. ಜಿಲ್ಲಾಧಿಕಾರಿ ಗಳ ಸೂಚನೆಯ ಮೇರೆಗೆ ಯಾವುದೇ ರೀತಿಯ ಅಪಾಯ ಸಂಭವಿಸದಂತೆ ಮುಂಜಾಗ್ರತೆ ವಹಿಸಬೇಕು. ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು ಕೇಂದ್ರ ಸ್ಥಳ ದಲ್ಲಿ ಕಾರ್ಯನಿರ್ವಹಿಸುವಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಲ್.ಸಿದ್ದೆೀಶ್ವರ ಸೂಚಿಸಿದರು.ತಾ.ಪಂ. ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷರಾದ ಬಿ.ಹುಲುಗಪ್ಪನವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ದಿನದಿಂದ ದಿನಕ್ಕೆ ತುಂಗಭದ್ರಾ ನದಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು ನದಿತೀರದ ವಾಸಿಸುವ ಗ್ರಾಮಗಳ ಜನತೆಯ ಸುರಕ್ಷತೆಯ ದೃಷ್ಠಿಯಿಂದ ತಾಲ್ಲೂಕಿನ ನದಿಯ ಒಳಹರಿವು ಹೆಚ್ಚಾಗಿದ್ದು ಪ್ರವಾಹ ಬರಬಹುದು ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು ಜವಾಬ್ದಾರಿ ಯಿಂದ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದರು.ಆರೋಗ್ಯ ಇಲಾಖೆ ವೈದ್ಯರು, ಸಹಾ ಯಕ ದಂತ ಶಸ್ತ್ರ ಚಿಕಿತ್ಸಕರು, ಫಾರ‌್ಮ ಸಿಸ್ಟ್, ಹಿರಿಯ ಆರೋಗ್ಯ ಸಹಾಯ ಕರು, ಸ್ಟಾಫನರ್ಸ್, ಹಿರಿಯ ಆರೋಗ್ಯ ಸಹಾಯಕರು, ಹಿರಿಯ ಆರೋಗ್ಯ ಸಹಾಯಕರು, ಬ್ಲಾಕ್ ಹೆಲ್ತ ಎಜು ಕೇಟರ್, ಕಿರಿಯ ಆರೋಗ್ಯ ಸಹಾಯ ಕರು, ಕಿರಿಯ ಪ್ರಯೋಗಾ ಲಯ ತಂತ್ರಜ್ಞರು, ಕಿರಿಯ ಆರೋಗ್ಯ ಸಹಾಯಕರು, ಡಿ ಗ್ರೂಪ್, ಚಾಲಕರು ಸೇರಿದಂತೆ ಒಟ್ಟು 53 ಹುದ್ದೆಗಳ ಖಾಲಿ ಇರುವುದಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪಿ.ಬಿ.ನಾಯ್ಕ ಸಭೆಗೆ ತಿಳಿಸಿದರು.2010-11ನೇ ಸಾಲಿನಲ್ಲಿ ಇಲಾಖೆ ವತಿಯಿಂದ ರೈತರಿಗೆ ಉಚಿತ ತರಕಾರಿ ಬೀಜಗಳನ್ನು ವಿತರಿಸಿದ್ದು ಉಚಿತವಾಗಿ ರೈತರು ಪಹಣಿ ಮತ್ತು ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ ಎಂದು ತೋಟ ಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ರಾದ ಶಂಕರ್ ತಿಳಿಸಿದರು.ತಾಲ್ಲೂಕಿನ ಸೋಗಿ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತರೊಬ್ಬರು ಅಂಗನವಾಡಿ ಕೇಂದ್ರದ ಮುಂದಿರುವ ಬಯಲು ಜಾಗದಲ್ಲಿ ವಾಸಿಸಲು ಮನೆ ಮಾಡಿಕೊಂಡು ಮಕ್ಕಳಿಗೆ ಆಟ ವಾಡಲು ಸ್ಥಳಾವಕಾಶವಿಲ್ಲದಂತೆ ಮಾಡಿದ್ದು ಈ ಬಗ್ಗೆ ಗ್ರಾ.ಪಂ.ಯಿಂದ ನೋಟೀಸ್ ನೀಡಿದೆ ಎಂದು   ಸೋಗಿ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಪತ್ರೆಪ್ಪ ಸಭೆಯ ಗಮನ ಸೆಳೆದರು.ಶಿಶು ಅಭಿವೃದ್ದಿ ಯೋಜನಾಧಿಕಾರಿ ಗಳು ಖುದ್ದಾಗಿ ಭೇಟಿನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರು. ಶಿಶು ಅಭಿವೃದ್ದಿ ಯೋಜನಾಧಿಕಾರಿ ಗಳು ಕೇಂದ್ರಕ್ಕೆ ತಕ್ಷಣ ಭೇಟಿ ನೀಡಿ ಪರಿ ಶೀಲಿಸುವುದಾಗಿ ಸಭೆಗೆ ಹೇಳಿದರು.4.1 ಲಕ್ಷ ರೂ ವೆಚ್ಚದಲ್ಲಿ 3 ವಿದ್ಯಾರ್ಥಿ ನಿಲಯಗಳ ಕಟ್ಟಡ ಕಾಮ ಗಾರಿ ನಡೆಯುತ್ತಿದ್ದು, ಜೂನ್ 1 ರಿಂದ ವಿದ್ಯಾರ್ಥಿ ನಿಲಯಗಳು ಆರಂಭ ವಾಗ ಲಿವೆ. 3 ಮೊರಾರ್ಜಿ ವಸತಿ ನಿಲಯ ಗಳೂ ಆರಂಭವಾಗಿದ್ದು, ವಿದ್ಯಾರ್ಥಿ ಗಳಿಗೆ ಪಠ್ಯ ಪುಸ್ತಕ ಹಾಗೂ ನೋಟ್‌ಬುಕ್ ಬಂದಿರುವುದಾಗಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಎಂ. ದ್ಯಾಮಪ್ಪ ಸಭೆಗೆ ವಿವರಿಸಿದರು.ರೇಷ್ಮೆ, ಭೂ ಸೇನಾ ನಿಗಮ, ಜಿ.ಪಂ. ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ, ಜೆಸ್ಕಾಂ, ಅಧಿಕಾರಿಗಳು ಇಲಾ ಖಾವಾರು ಪ್ರಗತಿವರದಿ ಸಲ್ಲಿಸಿದರು. ಉಪಾಧ್ಯಕ್ಷೆ ಮಂಗಳಾ ಹಾಲೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry