ಶುಕ್ರವಾರ, ಮೇ 7, 2021
23 °C

ಪ್ರವಾಹ : ಸಂಚಾರ ಸಂಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಗುಂದ: ಮಲಪ್ರಭಾ ನದಿಯಲ್ಲಿ ಶುಕ್ರವಾರವೂ ಪ್ರವಾಹ ಮುಂದು ವರಿದಿದ್ದು ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ  ಮತ್ತೆ ಅಡ್ಡಿಯಾಗಿದೆ. ಇದರಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು ವಾಹನ ಗಳು ರಾಮದುರ್ಗ, ತಡಕೋಡ ಮಾರ್ಗದ ಮೂಲಕ  ಬಾಗಲಕೋಟೆ ಹಾಗೂ ವಿಜಾಪುರ ಕಡೆಗಳಿಗೆ ಹೋಗುತ್ತಿವೆ.    ನವಿಲುತೀರ್ಥ ಜಲಾಶಯ ಭರ್ತಿ ಯಾದ ಕಾರಣ ಗುರುವಾರ ಸಂಜೆ  12 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಹೊರಬಿಡಲಾಗಿತ್ತು. ಇದರಿಂದಾಗಿ ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯ ವರೆಗೂ ಪರಿಸ್ಥಿತಿ ಗಂಭೀರವಾಗಿಯೇ ಮುಂದುವರಿಯಿತು.  ಪ್ರವಾಹದಿಂದಾಗಿ  ಲಕಮಾಪುರ ಗ್ರಾಮಕ್ಕೆ ನೀರು ನುಗ್ಗಿದ್ದು ಜನರು ಆತಂಕಗೊಂಡಿದ್ದಾರೆ. ಮಲಪ್ರಭೆ ಹೊಳೆ ದಂಡೆಯ ಬೂದಿಹಾಳ,  ವಾಸನ ಹಾಗೂ ಕೊಣ್ಣೂರು ಗ್ರಾಮಗಳಲ್ಲಿ ನೀರು  ಆವರಿಸಿದೆ.  ಸುತ್ತಲಿನ ಸಹ ಸ್ರಾರು ಎಕರೆ ಜಮೀನುಗಳಿಗೆ ನೀರು ನುಗ್ಗಿದ್ದು ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ, ಈರುಳ್ಳಿ, ಬಾಳೆ,  ಕಬ್ಬು, ಮೆಣಸಿನಕಾಯಿ ಮತ್ತಿರ ಬೆಳೆ ಹಾನಿಯಾಗಿದೆ, ಹೊಳೆದಂಡೆಯಲ್ಲಿದ್ದ  200ಕ್ಕೂ ಹೆಚ್ಚು  ಪಂಪ್‌ಸೆಟ್‌ಗಳು  ನೀರಿನಲ್ಲಿ ಮುಳುಗಿವೆ.  ಗುರುವಾರವೇ  ಸಂಚಾರ ಸ್ಥಗಿತ ಗೊಂಡಿದ್ದರಿಂದ  ಟ್ರಕ್ ಹಾಗೂ ಬಾರಿ ವಾಹನಗಳು ಕೊಣ್ಣೂರು-ಹುಬ್ಬಳ್ಳಿ  ರಾಷ್ಟ್ರೀಯ ಹೆದ್ದಾರಿ ಮೇಲೆ ನಿಂತಿದ್ದವು. ಗೋವನಕೊಪ್ಪ ಹಾಗೂ ಕುಳಗೇರಿ ಕ್ರಾಸ್‌ನಿಂದ ನರಗುಂದದ ಶಾಲೆಗೆ ಬರುವ ಮಕ್ಕಳು ಇದರಿಂದ ತೀವ್ರ ತೊಂದರೆಗೊಳಗಾದರು.ಆಕ್ರೋಶ: ಪ್ರವಾಹ ಬಂದಾಗ ಮಾತ್ರ ಆಧಿಕಾರಿಗಳು ಬರುತ್ತಾರೆ. ಉಳಿದ ದಿನಗಳಲ್ಲಿ ಇತ್ತ ಸುಳಿಯುವುದೇ ಇಲ್ಲ ಎಂದು ಲಕಮಾಪೂರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ದಶಕಗಳಿಂದಲೂ ತಡಗೋಡೆ ನಿರ್ಮಿ ಸುವಂತೆ ಮನವಿ ಸಲ್ಲಿಸಿದರೂ ಯಾರೂ ಗಮನ ಹರಿಸುತ್ತಿಲ್ಲ ಎಂದು  ಎಲ್.ಆರ್.ಪಾಟೀಲ, ವೈ.ವಿ ನಡುವಿನಮನಿ ಮೊದಲಾದವರು ದೂರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.