ಪ್ರವೀಣ್ ಕುಮಾರ್, ಯೋಗೇಶ್‌ಗೆ ಸ್ವರ್ಣ ಡಬಲ್

7
ಡೆಕ್ಕನ್ ಅಥ್ಲೆಟಿಕ್ ಕ್ಲಬ್‌ನ ವಾರಾಂತ್ಯ ಸ್ಪರ್ಧಾಕೂಟ

ಪ್ರವೀಣ್ ಕುಮಾರ್, ಯೋಗೇಶ್‌ಗೆ ಸ್ವರ್ಣ ಡಬಲ್

Published:
Updated:

ಬೆಂಗಳೂರು: ಮ್ಯಾಕ್ಸ್‌ಮುಲ್ಲರ್ ಪಬ್ಲಿಕ್ ಸ್ಕೂಲ್‌ನ ಎಸ್.ಪ್ರವೀಣ್ ಕುಮಾರ್ `ಪ್ರಜಾವಾಣಿ' `ಡೆಕ್ಕನ್ ಹೆರಾಲ್ಡ್' ಪತ್ರಿಕಾ ಗುಂಪಿನ ಪ್ರಾಯೋಜಕತ್ವದ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದ 24ನೇ ವಾರ್ಷಿಕ `ವಾರಾಂತ್ಯ ಅಥ್ಲೆಟಿಕ್ ಕೂಟ'ದ ಎರಡನೇ ವಾರಾಂತ್ಯ ಅಥ್ಲೆಟಿಕ್ ಕೂಟದ 16 ವರ್ಷ ವಯಸ್ಸಿನೊಳಗಿನ ಬಾಲಕರ ವಿಭಾಗದ ದೂರ ಓಟದಲ್ಲಿ ಎರಡು ಚಿನ್ನದ ಪದಕಗಳನ್ನು ಗಳಿಸಿದರು.



ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಈ ಕೂಟದ 800ಮೀಟರ್ಸ್ ಓಟವನ್ನು 2ನಿಮಿಷ 15.1ಸೆಕೆಂಡುಗಳಲ್ಲಿ ಕ್ರಮಿಸಿ ಎಲ್ಲರಿಗಿಂತ ಮೊದಲು ಗುರಿ ಮುಟ್ಟಿದ ಪ್ರವೀಣ್ ಕುಮಾರ್ 3,000ಮೀಟರ್ಸ್ ಓಟದಲ್ಲಿಯೂ ಮೊದಲ ಸ್ಥಾನ ಗಳಿಸಿದರು.



ವಿಎಲ್‌ಎಸ್ ವಿದ್ಯಾಸಾಗರ ಕನ್ನಡ ಹೈಸ್ಕೂಲಿನ ಸಿ.ಜಿ.ಯೋಗೇಶ್ 100ಮೀಟರ್ಸ್ ಓಟದಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದ್ದಲ್ಲದೆ, 80  ಮೀಟರ್ಸ್ ಹರ್ಡಲ್ಸ್‌ನಲ್ಲಿಯೂ ಅಗ್ರಸ್ಥಾನ  ಪಡೆದು ಗಮನ ಸೆಳೆದರು.



ಬಾಲಕರ ವಿಭಾಗದ ಫಲಿತಾಂಶಗಳು ಇಂತಿವೆ.

13ವರ್ಷದೊಳಗಿನವರ ವಿಭಾಗ:


100ಮೀ. ಓಟ: ಸಿ.ಜಿ. ಯೋಗೇಶ್ (ವಿ.ಎಲ್.ಎಸ್. ವಿದ್ಯಾಸಾಗರ್ ಕನ್ನಡ ಹೈಸ್ಕೂಲು) (ಕಾಲ: 13.1ಸೆ.)-1, ಸಾಗರ್ ಅಭಿಷೇಕ್ -2, ಅನೀಶ್ ಯಾದವ್-3 (ಇಬ್ಬರೂ ಆರ್ಮಿ ಪಬ್ಲಿಕ್ ಸ್ಕೂಲ್). 800ಮೀ. ಓಟ: ಡಿ.ಸಾಗರ್ (ವಿ.ಎಲ್.ಎಸ್.ವಿದ್ಯಾಸಾಗರ್ ಕನ್ನಡ ಹೈಸ್ಕೂಲು) (ಕಾಲ: 2ನಿ.32.3ಸೆ.)-1, ನಿಂಗರಾಜು-2, ದಿಲೀಪ್-3 (ಇಬ್ಬರೂ ಸೇಂಟ್ ಯಶ್ ಪಬ್ಲಿಕ್ ಸ್ಕೂಲ್). 3000 ಮೀ. ಓಟ: ದೇವರಾಜ (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್) (ಕಾಲ: 11ನಿ.12.3ಸೆ.)-1, ಎಲ್.ಎಸ್.ಹರಿಕೃಷ್ಣ (ಸೇಂಟ್ ಜೋಸೆಫ್ಸ್ ಇಂಡಿಯನ್ ಸ್ಕೂಲ್)-2, ಅಕ್ಷಯ್-3 (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್), 80ಮೀ.ಹರ್ಡಲ್ಸ್: ಸಿ.ಜಿ.ಯೋಗೇಶ್ (ವಿದ್ಯಾಸಾಗರ್ ಕನ್ನಡ ಸ್ಕೂಲ್) (ಕಾಲ: 15.1ಸೆ.)-1, ಎಸ್.ಹರಿಕೃಷ್ಣ (ಸೇಂಟ್ ಜೋಸೆಫ್ಸ್ ಇಂಡಿಯನ್ ಸ್ಕೂಲ್)-2, ಎಸ್.ಶ್ರೀನಿವಾಸ್ (ಶೇಷಾದ್ರಿಪುರಂ ಹಿರಿಯ ಪ್ರಾಥಮಿಕ ಶಾಲೆ)-3.



ಲಾಂಗ್‌ಜಂಪ್: ಅನೀಶ್ ಯಾದವ್ (ಆರ್ಮಿ ಪಬ್ಲಿಕ್ ಸ್ಕೂಲ್) (5.21ಮೀ.)-1, ಸಂಜೀತ್ ಕುಮಾರ್ (ಸಿಲಿಕಾನ್ ಸಿಟಿ ಎ.ಎಸ್.ಎಜ್ಯುಕೇಶನ್)-2, ಸಾಗರ್ ಅಭಿಷೇಕ್ (ಆರ್ಮಿ ಪಬ್ಲಿಕ್ ಸ್ಕೂಲ್)-3, ಟ್ರಿಪಲ್‌ಜಂಪ್: ಸುಜಯ್ ಸುಬ್ರಹ್ಮಣ್ಯಂ (ಕುಮಾರನ್ ಚಿಲ್ಡ್ರನ್ಸ್ ಹೋಮ್) (ದೂರ: 9.35ಮೀ.), ಯಾಜಿತ್ ಕುಮಾರ್ (ಕೇಂದ್ರೀಯ ವಿದ್ಯಾಲಯ)-2, ಕುಶಾಲ್ ಎನ್ ರಾಜಾ (ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲ್)-3, ಹೈಜಂಪ್: ರಾಹುಲ್‌ರಘು (ವಿದ್ಯಾನಿಕೇತನ ಸ್ಕೂಲ್) (ಎತ್ತರ:1.39ಮೀ.)-1, ಆರ್.ಚಂದನ್ (ದೇವಮಾತಾ ಸೆಂಟ್ರಲ್ ಸ್ಕೂಲ್)-2, ಜಸ್ಟಿನ್ ಜೋನ್ಸ್ (ಸೇಂಟ್ ಜೋಸೆಫ್ಸ್ ಇಂಡಿಯನ್ ಸ್ಕೂಲ್)-3. ಶಾಟ್‌ಪಟ್: ಡಿ.ಸಾಗರ್ (ವಿ.ಎಲ್.ಎಸ್.ವಿದ್ಯಾಸಾಗರ್ ಕನ್ನಡ ಹೈಸ್ಕೂಲು) (ದೂರ: 9.99ಮೀ.)-1, ವರುಣ್ ಅದಿತಿ ಡಿ.ಎಸ್.(ದೇವಮಾತಾ ಸೆಂಟ್ರಲ್ ಸ್ಕೂಲ್)-2, ರೋಹಿತ್ ಜಹಗೀರ್‌ದಾರ್ (ವಿದ್ಯಾನಿಕೇತನ ಸ್ಕೂಲ್)-3.



16ವರ್ಷದೊಳಗಿನವರ ವಿಭಾಗ:

100ಮೀ. ಓಟ: ಎಂ.ಪ್ರವೀಣ್ ಕುಮಾರ್ (ಇಂದಿರಾನಗರ ಹೈಸ್ಕೂಲು) (ಕಾಲ: 12.2ಸೆ.)-1, ಎ.ಮನೋಜ್ (ಫ್ಲಾರೆನ್ಸ್ ಹೈಸ್ಕೂಲು)-2, ನಿಖಿಲ್ ರೋಹನ್ (ದೇವಮಾತಾ ಸೆಂಟ್ರಲ್ ಸ್ಕೂಲ್)-3, 800ಮೀ. ಓಟ: ಎಸ್.ಪ್ರವೀಣ್ ಕುಮಾರ್ (ಮ್ಯಾಕ್ಸ್‌ಮುಲ್ಲರ್ ಪಬ್ಲಿಕ್ ಸ್ಕೂಲ್) (ಕಾಲ: 2ನಿ.15.1ಸೆ.)-1, ಎನ್.ರಕ್ಷಿತಾ ಗೌಡ (ಫ್ಲಾರೆನ್ಸ್ ಹೈಸ್ಕೂಲು)-2, ಸುರೇಶ್ ಓರಾನ್-3 (ಕೇಂದ್ರೀಯ ವಿದ್ಯಾಲಯ), 3,000ಮೀ. ಓಟ: ಎಸ್.ಪ್ರವೀಣ್ ಕುಮಾರ್ (ಮ್ಯಾಕ್ಸ್ ಮುಲ್ಲರ್ ಪಬ್ಲಿಕ್ ಸ್ಕೂಲ್) (ಕಾಲ: 10ನಿ.36.8ಸೆ.)-1, ಎಸ್.ಶರತ್-2, ಸ್ಟಾಲಿನ್ ಅಭಿಲಾಷ್-3 (ಇಬ್ಬರೂ ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲು), 110ಮೀ. ಹರ್ಡಲ್ಸ್: ನಿಖಿಲ್ ರೋಹನ್ (ದೇವಮಾತಾ ಸೆಂಟ್ರಲ್ ಸ್ಕೂಲ್) (ಕಾಲ: 19.8ಸೆ.)-1, ಎನ್.ಹರ್ಷ (ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲ್)-2, ಎನ್.ಡಿ.ಕೃಷ್ಣಪ್ರಸಾದ್ (ಇಂದಿರಾನಗರ ಹೈಸ್ಕೂಲು)-3,



ಲಾಂಗ್‌ಜಂಪ್: ಎಸ್.ಜೀವನ್ (ಸಿಲಿಕಾನ್ ಸಿಟಿ ಅಕಾಡೆಮಿ ಆಫ್ ಸೆಕೆಂಡರಿ ಎಜುಕೇಶನ್) (ದೂರ: 5.86ಮೀ.)-1, ಡಿ.ಶಂಕರ್‌ಶನ್ (ಡೆಲ್ಲಿ ಪಬ್ಲಿಕ್ ಸ್ಕೂಲ್)-2, ಬಿ.ಜಿ.ಆಕಾಶ್ (ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್)-3, ಟ್ರಿಪಲ್‌ಜಂಪ್: ಬಿ.ಸಚಿನ್‌ಗೌಡ (ಅಕಾಯ್ ಪಬ್ಲಿಕ್ ಸ್ಕೂಲ್ (ದೂರ: 10.63ಮೀ.)-1, ಕಿರಣ್ ಗೌಡ-2, ಎ.ಸಿಬಿ ಪ್ರಣವ್-3 (ಇಬ್ಬರೂ ದೇವಮಾತಾ ಸೆಂಟ್ರಲ್ ಸ್ಕೂಲ್), ಹೈಜಂಪ್: ಅಭಿರಾಮ್ ನಟರಾಜನ್ (ರ‌್ಯಾನ್ ಸ್ಕೂಲ್) (ಎತ್ತರ: 1.60ಮೀ.)-1, ಬಿ.ಜಿ.ಆಕಾಶ್-2, ಪ್ರೇರಣ್ ಮಂಜುನಾಥ್ -3 (ಇಬ್ಬರೂ ವಿದ್ಯಾನಿಕೇತನಾ ಪಬ್ಲಿಕ್ ಸ್ಕೂಲ್), ಶಾಟ್‌ಪಟ್: ವಿ.ಶೇಹಿತ್‌ಗೌಡ (ಇಂದಿರಾನಗರ ಹೈಸ್ಕೂಲು) (ದೂರ: 10.36ಮೀ.)-1, ವೇದ್ ಬಿದ್ರಿ (ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್)-2, ನಮನ್ ಟಿ.ಎ.ಗೌಡ (ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲ್)-3.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry