ಮಂಗಳವಾರ, ನವೆಂಬರ್ 19, 2019
29 °C

ಪ್ರವೀಣ್ ಸೂದ್‌ಗೆ ಹೆಚ್ಚುವರಿ ಹೊಣೆ: ಆದೇಶಕ್ಕೆ ತಡೆ

Published:
Updated:

ಬೆಂಗಳೂರು: ಪೊಲೀಸ್ ಕಂಪ್ಯೂಟರ್ ವಿಭಾಗದ ಎಡಿಜಿಪಿ ಪ್ರವೀಣ್ ಸೂದ್ ಅವರಿಗೆ ಹೆಚ್ಚುವರಿಯಾಗಿ ರಾಜ್ಯ ಪೊಲೀಸ್ ಆಡಳಿತ ವಿಭಾಗದ ಎಡಿಜಿಪಿ ಹೊಣೆ ನೀಡಿ ಹೊರಡಿಸಿದ್ದ ಆದೇಶವನ್ನು ತಡೆ ಹಿಡಿಯಲಾಗಿದೆ.ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಬಿಪಿನ್ ಗೋಪಾಲಕೃಷ್ಣ ಅವರಿಗೆ ಹೆಚ್ಚುವರಿಯಾಗಿ ಆಡಳಿತ ವಿಭಾಗದ ಹೊಣೆ ಹೊರಿಸಲಾಗಿತ್ತು ಚುನಾವಣಾ ಸಮಯವಾದ ಕಾರಣ ಎರಡೂ ಹುದ್ದೆಗಳನ್ನು ನಿರ್ವಹಿಸುವುದು ಕಷ್ಟ ಎಂದು ಗೊತ್ತಾದ ಕಾರಣ ಅವರ ಬದಲಾಗಿ ಸೂದ್ ಅವರಿಗೆ ಆ ಜವಾಬ್ದಾರಿ ವಹಿಸಲು ಸರ್ಕಾರ ತೀರ್ಮಾನಿಸಿತ್ತು.ಈ ಕುರಿತ ಆದೇಶ ಶನಿವಾರ ಹೊರಬಿದ್ದ ನಂತರ ತಡೆಹಿಡಿದಿದ್ದು, ಚುನಾವಣಾ ಆಯೋಗದ ಒಪ್ಪಿಗೆ ಸಿಕ್ಕ ನಂತರ ಅದನ್ನು ಜಾರಿ ಮಾಡಲು ನಿರ್ಧರಿಸಲಾಗಿದೆ.

ಪ್ರತಿಕ್ರಿಯಿಸಿ (+)