ಪ್ರವೇಶ ಪರೀಕ್ಷಾ ಗೊಂದಲ ನಿವಾರಿಸಿ

ಗುರುವಾರ , ಜೂಲೈ 18, 2019
29 °C

ಪ್ರವೇಶ ಪರೀಕ್ಷಾ ಗೊಂದಲ ನಿವಾರಿಸಿ

Published:
Updated:

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಿರೀಕ್ಷೆಯಂತೆ ಈ ಬಾರಿಯೂ ಸ್ನಾತಕೋತ್ತರ ಪದವಿಗೆ (ಎಂ ಬಿ ಎ, ಎಂ.ಇ, ಎಂ.ಟೆಕ್) ಆಗಸ್ಟ್ 7ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಈ ಪ್ರವೇಶ ಪರೀಕ್ಷೆಯನ್ನು ಈ ಬಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ ಅದೇ ದಿನದಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಸೋಸಿಯೇಷನ್ ಬ್ಯಾಂಕ್‌ಗಳ ಪ್ರೊಬೇಷನರಿ ಆಫಿಸರ್ಸ್ ಹುದ್ದೆಗಳಿಗೂ ಸಹ ಪರೀಕ್ಷೆಗಳು ನಡೆಯುವ ದಿನವನ್ನು ಗೊತ್ತುಪಡಿಸಲಾಗಿದೆ.ಆದ್ದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಬಂಧಪಟ್ಟ ಅಧಿಕಾರಿಗಳು ಚರ್ಚಿಸಿ ಯವುದಾದರು ಒಂದು ಪರೀಕ್ಷೆಯನ್ನುಮುಂದೂಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry