ಪ್ರಶಸ್ತಿಗೆ ಇಂಗ್ಲೆಂಡ್-ಆಸೀಸ್ ಪೈಪೋಟಿ

7

ಪ್ರಶಸ್ತಿಗೆ ಇಂಗ್ಲೆಂಡ್-ಆಸೀಸ್ ಪೈಪೋಟಿ

Published:
Updated:

ಕೊಲಂಬೊ (ಐಎಎನ್‌ಎಸ್): ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ಗಳು ತಂಡಗಳು ಮಹಿಳಾ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾನುವಾರ ಪೈಪೋಟಿ ನಡೆಸಲಿವೆ.ಲೀಗ್ ಹಂತದಲ್ಲಿಯೇ ಈ ತಂಡಗಳು ಮುಖಾಮುಖಿಯಾಗಿದ್ದವು. ಆಗ ಇಂಗ್ಲೆಂಡ್ ಏಳು ವಿಕೆಟ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತ್ತು. ಆ ಸೇಡು ತೀರಿಸಿಕೊಳ್ಳಲು ಕಾಂಗರೂ ಬಳಗ ಈಗ ಕಾಯುತ್ತಿದೆ.ಇಂಗ್ಲೆಂಡ್ ಈ ಟೂರ್ನಿಯಲ್ಲಿ ಸೋಲೇ ಕಂಡಿಲ್ಲ. ಈ ತಂಡದ ಎಡ್ವರ್ಡ್ಸ್ ಹಾಗೂ ಲಾರಾ ಮಾರ್ಷ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲರ್‌ಗಳಾದ ಡೇನಿಲೆ ವ್ಯಾಟ್ ಹಾಗೂ ಹೋಲಿ ಕೋಲ್ವಿನ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾಗಾಗಿ ಆಸ್ಟ್ರೇಲಿಯಾ ಮುಂದೆ ಭಾರಿ ಸವಾಲಿದೆ. ಆದರೆ ಈ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದಿರುವ ಈ ತಂಡದ ಜೂಲಿ ಹಂಟರ್ ಪಂದ್ಯದ ಗತಿಯನ್ನು ಬದಲಾಯಿಸುವ ತಾಕತ್ತು ಹೊಂದಿದ್ದಾರೆ. ಪುರುಷರ ಫೈನಲ್‌ಗೆ ಮುನ್ನವೇ ಈ ಪಂದ್ಯ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry