ಪ್ರಶಸ್ತಿ ಬಾಚಿಕೊಂಡ ಸಾಂಡ್ರಾ, ಟಿಂಬರ್ಲೇಕ್‌

7

ಪ್ರಶಸ್ತಿ ಬಾಚಿಕೊಂಡ ಸಾಂಡ್ರಾ, ಟಿಂಬರ್ಲೇಕ್‌

Published:
Updated:

ಲಾಸ್‌ ಎಂಜಲೀಸ್‌ (ಪಿಟಿಐ): ನಿಯತ­­­ಕಾ­ಲಿಕೆಯೊಂದು ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ಸಾಂಡ್ರಾ ಬುಲಕ್‌, ಗಾಯಕಿಯರಾದ ಜಸ್ಟಿನ್‌ ಟಿಂಬ­­ರ್ಲೇಕ್‌ ಹಾಗೂ ಕೆಟಿ ಪೆರಿ ಅವರು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿ­ಕೊಂಡರು.‘ಪ್ರೇಕ್ಷಕರ ವರ್ಷದ ಆಯ್ಕೆ–2014’ ಸ್ಪರ್ಧೆಯಲ್ಲಿ ನಾಮಾಂಕಿತಗೊಂಡ ಎಲ್ಲ ವಿಭಾಗಗಳಲ್ಲೂ ಸಾಂಡ್ರಾ ಪ್ರಶಸ್ತಿ ಪಡೆದು­ಕೊಂಡಿದ್ದಾರೆ.ನೆಚ್ಚಿನ ಚಿತ್ರ ನಟಿ, ನೆಚ್ಚಿನ ಹಾಸ್ಯ ನಟಿ, ನೆಚ್ಚಿನ ನಾಟಕೀಯ ಚಿತ್ರ ನಟಿ ಪ್ರಶಸ್ತಿ ಅಲ್ಲದೆ ಜಾರ್ಜ್‌ ಕ್ಲೂನೆ ಜತೆ ‘ಜನಪ್ರಿಯ ಜೋಡಿ’ ಪ್ರಶಸ್ತಿಯನ್ನೂ ಸಾಂಡ್ರಾ ಜಂಟಿಯಾಗಿ ಹಂಚಿಕೊಂಡರು.ವಿಶೇಷ ಎಂದರೆ ಬ್ರಿಟ್ನಿ ಸ್ಪಿಯರ್‌ ಅವರು ನೆಚ್ಚಿನ ಪಾಪ್‌ ಕಲಾವಿದೆ ಗೌರವಕ್ಕೆ ಪಾತ್ರರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry