ಬುಧವಾರ, ಆಗಸ್ಟ್ 21, 2019
27 °C
ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ

ಪ್ರಶಸ್ತಿ ಮುಡಿಗೇರಿಸಿಕೊಂಡ ಬ್ಯಾಕೋಡ

Published:
Updated:

ಬೆಂಗಳೂರು: ಹವ್ಯಾಸಿ ಛಾಯಾಗ್ರಾಹಕರಾದ `ಪ್ರಜಾವಾಣಿ'ಯ ಮಹದೇವಪುರ ಅರೆಕಾಲಿಕ ವರದಿಗಾರ ಹ.ಸ.ಬ್ಯಾಕೋಡ ಅವರಿಗೆ 16ನೇ ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಎರಡು ಪ್ರಶಸ್ತಿಗಳು ಲಭಿಸಿವೆ.ಕೊಲೊಂಬೊದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ರಿವರ್‌ಟರ್ನ್ ಹಕ್ಕಿಗಳ ಮಿಲನ ನಡೆಸುತ್ತಿರುವ ಚಿತ್ರಕ್ಕೆ ನ್ಯಾಷನಲ್ ಫೋಟೊಗ್ರಾಫಿಕ್ ಆರ್ಟ್ ಸೊಸೈಟಿ ಆಫ್ ಶ್ರೀಲಂಕಾ (ಎನ್‌ಪಿಎಎಸ್) ರಜತ ಪ್ರಶಸ್ತಿ ಹಾಗೂ ಕ್ಲೊರೊಪ್ಸಿಸ್ ಹಕ್ಕಿಯು ತನ್ನ ಮರಿಗೆ ಗುಟುಕು ತಿನ್ನಿಸುತ್ತಿರುವ ಚಿತ್ರಕ್ಕೆ ಫೆಡರೇಷನ್ ಆಫ್ ಡೇ ಆರ್ಟ್ ಫೋಟೊಗ್ರಾಫಿಕ್ (ಎಫ್‌ಐಎಪಿ) ಗೌರವ ಪ್ರಶಸ್ತಿ ಲಭಿಸಿದೆ.

Post Comments (+)