ಪ್ರಶಸ್ತಿ ಮೇಲೆ ವಾವ್ರಿಂಕಾ ಕಣ್ಣು

7

ಪ್ರಶಸ್ತಿ ಮೇಲೆ ವಾವ್ರಿಂಕಾ ಕಣ್ಣು

Published:
Updated:

ಚೆನ್ನೈ (ಐಎಎನ್‌ಎಸ್): ಹಾಲಿ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕಾ ಇಲ್ಲಿ ನಡೆಯಲಿರುವ ಚೆನ್ನೈ ಓಪನ್ ಟೆನಿಸ್ ಟೂರ್ನಿಯಲ್ಲಿ ಮತ್ತೊಂದು ಪ್ರಶಸ್ತಿ ಗೆಲ್ಲುವತ್ತ ಕಣ್ಣಿಟ್ಟಿದ್ದಾರೆ.

ಕಳೆದ ವರ್ಷ ಇಲ್ಲಿ ಪ್ರಶಸ್ತಿ ಜಯಿಸಿದ್ದ ಸ್ವಿಟ್ಜರ್‌ಲೆಂಡ್‌ನ ಈ ಆಟಗಾರ ಮೂರನೇ ಸಲ ಎಟಿಪಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಈ ಟೂರ್ನಿ 31ರಿಂದ ಜನವರಿ 6ರ ವರೆಗೆ ನಡೆಯಲಿದೆ.`ಚೆನ್ನೈ ಓಪನ್‌ನಲ್ಲಿ ಆಡುವುದಂದರೆ ಸಂತಸ ಕೊಡುತ್ತದೆ. ಇಲ್ಲಿನ ಅಭಿಮಾನಿಗಳು ನನಗೆ ನೀಡುವ ಬೆಂಬಲವೇ ಇಲ್ಲಿ ಆಡಲು ಕಾರಣ. ಸೋಲು ಗೆಲುವುಗಳ ಬಗ್ಗೆ ಚಿಂತಿಸುವುದಿಲ್ಲ. ಟೆನಿಸ್ ಆಡುವ ಮೂಲಕ ಖುಷಿ ಅನುಭವಿಸುವುದಷ್ಟೇ ನನಗೆ ಗೊತ್ತು' ವಾವ್ರಿಂಕಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry