ಪ್ರಶಸ್ತಿ ಸನಿಹ ತ್ರಿಶೂಲ್

7

ಪ್ರಶಸ್ತಿ ಸನಿಹ ತ್ರಿಶೂಲ್

Published:
Updated:

ಬೆಂಗಳೂರು: ಅಮೋಘ ಪ್ರದರ್ಶನ ಮುಂದುವರಿಸಿರುವ ಸ್ಥಳೀಯ ಗಾಲ್ಫರ್‌ ತ್ರಿಶೂಲ್‌ ಚಿಣ್ಣಪ್ಪ ಟಾಟಾ ಸ್ಟೀಲ್‌ ಸದರ್ನ್‌ ಇಂಡಿಯಾ ಅಮೆಚೂರ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಸನಿಹ ದಾಪುಗಾಲಿಟ್ಟಿದ್ದಾರೆ.ಕರ್ನಾಟಕ ಗಾಲ್ಫ್‌ ಸಂಸ್ಥೆ ಕೋರ್ಸ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ಮೂರನೇ  ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ತ್ರಿಶೂಲ್‌ ಕೇವಲ 67 ಅವಕಾಶ ಬಳಸಿಕೊಂಡಿದ್ದು ವಿಶೇಷ. ಅವರೀಗ ಒಟ್ಟು 208 (69, 72, 67) ಸ್ಕೋರ್‌ಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 17ರ ಹರೆಯದ ಈ ಗಾಲ್ಫರ್‌ ಆರಂಭದಿಂದಲೇ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಸದ್ಯ ಅವರು 4 ಷಾಟ್ಸ್‌ಗಳಿಂದ ಮುಂದಿದ್ದಾರೆ.70 ಅವಕಾಶ ಬಳಸಿಕೊಂಡ ಉದಯನ್‌ ಮಾನೆ ಎರಡನೇ ಸ್ಥಾನಲ್ಲಿದ್ದಾರೆ. ಅವರು ಕೂಡ ಮೂರನೇ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿದರು. ಅವರ ಒಟ್ಟು ಸ್ಕೋರ್‌ 212. ಅನೀಶ್‌ ಅಹ್ಲುವಾಲಿಯಾ (ಒಟ್ಟು ಸ್ಕೋರ್‌ 216) ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.  ನಂತರ ಅಂಕೂರ್‌ ಚಡ್ಡಾ (217), ವಿಕ್ರಮ್‌ ರಾಣಾ (217), ಅಮನ್‌ರಾಜ್‌ (217), ಜೈಬೀರ್‌ ಸಿಂಗ್‌ (218) ನಂತರದ ಸ್ಥಾನದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry