ಮಂಗಳವಾರ, ಮೇ 11, 2021
27 °C

ಪ್ರಶಸ್ತಿ ಹಂತಕ್ಕೆ ನಿಖಿತ್ ಲಕ್ಷ್ಮಣ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಬ್ಲ್ಯುಪಿಬಿಎ ಕ್ಲಬ್‌ನ ನಿಖಿತ್ ಲಕ್ಷ್ಮಣ್ ಅವರು ಸುರೇಶ್ ಕುಮಾರ್ ಸ್ಮಾರಕ ರಾಜ್ಯ ರಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಬಾಲಕರ 15 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.



ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಕೋರ್ಟ್‌ನಲ್ಲಿ ಸೋಮವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನಿಖಿತ್ 25-23, 21-10ರಲ್ಲಿ ಎನ್‌ಜಿವಿ ಕ್ಲಬ್‌ನ ನಿಖಿಲ್‌ಶ್ಯಾಮ್ ಶ್ರೀರಾಮ್ ಅವರನ್ನು ಮಣಿಸಿ ಪ್ರಶಸ್ತಿ ಜಯಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟರು. ನಿಖಿತ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 21-15, 21-13ರಲ್ಲಿ ಇಸಿಎ ಕ್ಲಬ್‌ನ ಸಾಯಿ ಪ್ರತೀಕ್ ಕೆ. ಎದುರು ಗೆಲುವು ಸಾಧಿಸಿದ್ದರು. ಇನ್ನೊಂದು ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಅಕ್ಷಯ್ ಶ್ರೀನಿವಾಸ್ 21-13, 21-19ರಲ್ಲಿ ಅಭಿ ಅಮುದನ್ ಅವರನ್ನು ಮಣಿಸಿ ಅಂತಿಮ ಘಟ್ಟಕ್ಕೆ ಲಗ್ಗೆ ಇಟ್ಟರು.

ಡಬಲ್ಸ್‌ನಲ್ಲೂ ಮಿಂಚು: ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ನಿಖಿಲ್ ಶ್ಯಾಮ್ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.



ರೋಹನ್ ಕಾಮತ್ ಜೊತೆಗೂಡಿ ಆಡಿದ ನಿಖಿಲ್ ಫೈನಲ್ ಪಂದ್ಯದಲ್ಲಿ 21-12, 18-21, 21-18ರಲ್ಲಿ ಅಭಿರಾಮ್ ಕೆ. ಹಾಗೂ ಕಿರಣ್ ಬಿ. ಜೋಡಿಯನ್ನು ಮಣಿಸಿತು.



ಅಪೇಕ್ಷಾಗೆ ಪ್ರಶಸ್ತಿ: ಬಾಲಕಿಯರ 15 ವರ್ಷದೊಳಗಿನವರ ವಿಭಾಗದ ಡಬಲ್ಸ್‌ನಲ್ಲಿ ಪಿಪಿಬಿಎ ಕ್ಲಬ್‌ನ ಅಪೇಕ್ಷಾ ನಾಯಕ್-ಧೃತಿ ಯತೀಶ್ ಜೋಡಿ ಪ್ರಶಸ್ತಿ ಗೆದ್ದುಕೊಂಡಿತು. ಫೈನಲ್ ಪಂದ್ಯದಲ್ಲಿ ಈ ಜೋಡಿ 21-18, 21-15ರಲ್ಲಿ ಅರ್ಚನಾ ಪೈ-ರೇಣು ತಿರುಮಲ ಎದುರು ಗೆಲುವು ಪಡೆದರು.



ಇದೇ ವಿಭಾಗದ ಸಿಂಗಲ್ಸ್‌ನ ಸೆಮಿಫೈನಲ್ ಪಂದ್ಯಗಳಲ್ಲಿ ಅಪೇಕ್ಷಾ 17-21, 21-11, 21-12ರಲ್ಲಿ ಧೃತಿ ಯತೀಶ್ ಮೇಲೂ, ಅರ್ಚನಾ ಪೈ 21-17, 21-16ರಲ್ಲಿ ಮಿಥುಲಾ ಯು.ಕೆ. ಎದುರು ಗೆಲುವು ಪಡೆದು ಪ್ರಶಸ್ತಿ ಹಂತ ಪ್ರವೇಶಿಸಿದರು. ಪ್ರಾರ್ಥನಾ ಜೋಡಿ ಚಾಂಪಿಯನ್: ಬಾಲಕಿಯರ 13 ವರ್ಷದೊಳಗಿನವರ ವಿಭಾಗದ ಡಬಲ್ಸ್‌ನ ಫೈನಲ್ ಪಂದ್ಯದಲ್ಲಿ ಪ್ರಾರ್ಥನಾ ವಾಸುದೇವನ್-ಶಿವಾನಿ ಎ. ಪಾಠಿ ಅವರು 21-17, 22-20ರಲ್ಲಿ ಶೀತಲ್ ಡಿ.-ತ್ರಿಶಾ ಹೆಗ್ಡೆ ಅವರನ್ನು ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದರು.



13 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಕಾರ್ತಿಕ್ ವಿ. ಹಾಗೂ ಸಾಕೇತ್ ಸಿ.ಎಸ್. ಅವರು 22-24, 21-14, 21-16ರಲ್ಲಿ ಅಜಿಂಕ್ಯ ಜೋಶಿ-ತೇಜಸ್ ಸಂಜಯ್ ಕೆ. ಎದುರು ಗೆಲುವು ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.