ಮಂಗಳವಾರ, ನವೆಂಬರ್ 12, 2019
28 °C

ಪ್ರಶ್ನೆ ಉತ್ತರ

Published:
Updated:

ಚಂದನ ಜಿ.ಪಿ.

ನಾನು ತುಮಕೂರಿನ ಎಸ್.ಐ.ಟಿ. ಕಾಲೇಜಿನಲ್ಲಿ ಮಾಹಿತಿ ವಿಜ್ಞಾನ ವಿಷಯದಲ್ಲಿ ಎರಡನೇ ವರ್ಷದ ಬಿ.ಇ. ಮಾಡುತ್ತಿದ್ದೇನೆ. ಭವಿಷ್ಯದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಯಾವುದಾದರೂ ಕೋರ್ಸುಗಳಿದ್ದರೆ ತಿಳಿಸಿ. ಜೊತೆಗೆ ವಿದೇಶದಲ್ಲಿ ಎಂ.ಎಸ್. ಮಾಡಬೇಕು ಎಂದುಕೊಂಡಿದ್ದೇನೆ. ಹಾಗಾಗಿ ಜಿ.ಆರ್.ಇ. ಪರೀಕ್ಷೆ ತಯಾರಿ ಹಾಗೂ ಇದಕ್ಕಾಗಿ ತರಬೇತಿ ನೀಡುವ ಸಂಸ್ಥೆಗಳ ಬಗ್ಗೆ ತಿಳಿಸಿ.
- ಮಾಹಿತಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತರ ನಿಮಗೆ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳು ಇರುತ್ತವೆ. ಆದ್ದರಿಂದ ಭವಿಷ್ಯದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಇದೇ ಕ್ಷೇತ್ರದಲ್ಲಿ ಸ್ಯಾಪ್, ಜಾವಾ, ಮೈಕ್ರೋಸಾಫ್ಟ್, ಒರಾಕಲ್ ಇತ್ಯಾದಿ ನಿಮಗೆ ಆಸಕ್ತಿ ಇರುವ ಯಾವುದಾದರೂ ಒಂದು ವಿಷಯದಲ್ಲಿ ಸರ್ಟಿಫಿಕೇಷನ್ ಕೋರ್ಸ್ ಮಾಡುವುದು ಉತ್ತಮ. ಬಿ.ಇ ಪದವಿಯ ನಂತರ ವಿದೇಶದಲ್ಲಿ ಎಂ.ಎಸ್. ಮಾಡಲು ಆಸಕ್ತಿ ಇದ್ದರೆ ಅದಕ್ಕೆ ಸಂಬಂಧಪಟ್ಟ ಜಿ.ಆರ್.ಇ. ಮತ್ತು ಟೋಫೆಲ್ ಪರೀಕ್ಷೆಗಳ ಪೂರ್ವ ಸಿದ್ಧತೆಗೆ ಬೇಕಾದ ಮಾಹಿತಿ ಮತ್ತು ತರಬೇತಿಗೆಂದೇ ಬರೆದ ಅನೇಕ ಪುಸ್ತಕಗಳು ದೊರೆಯುತ್ತವೆ. ಅವುಗಳಲ್ಲಿ ಪ್ರಮುಖವಾಗಿ ಬ್ಯಾರೋ (Barrow) ಎನ್ನುವ ಲೇಖಕರ ಪುಸ್ತಕವನ್ನು ನೀವು ಈ ತಯಾರಿಗೆ ಉಪಯೋಗಿಸಬಹುದು.

ಭುವನೇಶ್ವರಿ ಪಾಟೀಲ, ಹುನಗುಂದ ಜಿಲ್ಲೆ, ಬಾಗಲಕೋಟೆ

ನಾನು ಬಿ.ಕಾಂ. ಎರಡನೇ ವರ್ಷದಲ್ಲಿ ಓದುತ್ತಿದ್ದೇನೆ. ಇದರ ಜೊತೆಗೆ ಸಿ.ಎ. ಕೋರ್ಸನ್ನೂ ಮಾಡಬೇಕೆಂಬ ಆಸೆ. ಆದರೆ ಇದರ ಕುರಿತಾಗಿ ಯಾವ ಮಾಹಿತಿಯೂ ನನಗೆ ತಿಳಿದಿಲ್ಲ. ಅಲ್ಲದೆ ಮುಂದೆ ಬಿ.ಕಾಂ. ನಂತರ ಎಂ.ಬಿ.ಎ. ಮಾಡಬೇಕೆಂದಿದ್ದೇನೆ. ಹಾಗಾಗಿ ದಯಮಾಡಿ ಈ ಎರಡೂ ಕೋರ್ಸುಗಳ ಕುರಿತಾದ ಸೂಕ್ತ ಮತ್ತು ಸಮಗ್ರ ಮಾಹಿತಿ ನೀಡಿ ಮಾರ್ಗದರ್ಶನ ಕೊಡಿ.
-ಸಿ.ಎ. ಕೋರ್ಸ್‌ನ್ನು ಮಾಡುವ ಅಭಿಲಾಷೆ ಇರುವ ನೀವು ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ವೆಬ್‌ಸೈಟ್‌ನಲ್ಲಿ(http://www.icai.org,   http://www.icai.org.in)  ಪಡೆಯಬಹುದು. ಬಿ.ಕಾಂ. ನಂತರ ಎಂ.ಬಿ.ಎ. ಮಾಡಲು ಅನೇಕ ಕಾಲೇಜುಗಳಲ್ಲಿ ಅವಕಾಶ ಇರುತ್ತದೆ. ಅವುಗಳೆಂದರೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯೋನೇಜ್‌ಮೆಂಟ್ ವಿಶ್ವವಿದ್ಯಾಲಯಗಳ ಮಾನ್ಯತೆ ಪಡೆದ ಕಾಲೇಜುಗಳು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಕಾಲೇಜುಗಳು ಇವೆ. ಪ್ರತಿ ಸಂಸ್ಥೆಯೂ ತನ್ನದೇ ಆದ ಪ್ರವೇಶ ಪರೀಕ್ಷೆಯನ್ನು ನಡೆಸುತ್ತದೆ. ಈ ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ನಿಮಗೆ ಪ್ರವೇಶ ದೊರಕಲು ಸಾಧ್ಯ. ವಿವರಗಳನ್ನು ಸಂಬಂಧಪಟ್ಟ ಸಂಸ್ಥೆಗಳ ಅಂತರ್ಜಾಲದಲ್ಲಿ ಪಡೆಯಬಹುದು. (www.iimb.ernet.in,  ww.vtu.ac.in,   www.bangaloreuniversity.ac.in )

ನಾಗರಾಜು.ಸಿ, ಕನಕಪುರ

ನಾನು 1997ರಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿಕೊಂಡಿದ್ದೇನೆ. ಈಗ ಒ.ಎಫ್.ಸಿ. ಟೆಕ್ನೀಶಿಯನ್ನಾಗಿ ಕೆಲಸ ಮಾಡುತ್ತಿದ್ದೇನೆ. ಕೆಲಸದಲ್ಲಿ ಇದ್ದುಕೊಂಡೇ ಉನ್ನತ ವಿದ್ಯಾಭ್ಯಾಸ ಮಾಡಬಹುದೇ? ಹಾಗೆಯೇ ನಾನು ಏನನ್ನು ಓದಬಹುದು ತಿಳಿಸಿ.
-ನಿಮ್ಮ ವಯಸ್ಸಿಗೆ ಅನುಗುಣವಾಗಿ ದೂರಶಿಕ್ಷಣದ ಮೂಲಕ ಪದವಿ ಅಭ್ಯಾಸ ಮಾಡಿ. ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಗಳಿಸಬಹುದು. ಆದ್ದರಿಂದ ನಿಮಗೆ ಆಸಕ್ತಿ ಇರುವ ವಿಷಯದಲ್ಲಿ, ಪ್ರಮುಖವಾಗಿ ಕಲಾ ವಿಭಾಗ ಅಥವಾ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆಯಲು ಬೆಂಗಳೂರು, ಮೈಸೂರು ಅಥವಾ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಳ್ಳಬಹುದು.

ನಾಜಿರ್, ಮಂಗಳೂರು

ನಾನು ಕಳೆದ ವರ್ಷ ಪಿ.ಯು.ಸಿ. ಮುಗಿಸಿದ್ದೇನೆ. ನನಗೆ ಗಣಿತ ಕಷ್ಟ ಎನಿಸುತ್ತದೆ. ಆದರೆ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಆಸಕ್ತಿ ಇದೆ. ನನ್ನ ಗೆಳೆಯರು ಬಿ.ಎಸ್ಸಿ. ಬಯೋಟೆಕ್ನಾಲಜಿ ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಆದರೆ ನನಗೆ ಏನೂ ಸರಿಯಾಗಿ ತೋಚುತ್ತಿಲ್ಲ. ದಯಮಾಡಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಕೊಡಿ.
- ಗಣಿತ ವಿಷಯ ಕಷ್ಟ ಎನಿಸುವ ನಿಮಗೆ, ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆಯುವುದು ಸಾಧ್ಯವಾಗಲಾರದು. ಆದ್ದರಿಂದ ಹೆಚ್ಚು ಗಣಿತದ ಬಳಕೆ ಇಲ್ಲದ ಬಿ.ಸಿ.ಎ, ಬಿ.ಬಿ.ಎಂ. ಅಥವಾ ಬಿ.ಕಾಂ. ಪದವಿಗೆ ಪ್ರವೇಶ ಪಡೆದು ವಿದ್ಯಾಭ್ಯಾಸವನ್ನು ಮುಂದುವರಿಸಬಹುದು. ಸದ್ಯದ ಪರಿಸ್ಥಿತಿಯಲ್ಲಿ ಬಯೋಟೆಕ್ನಾಲಜಿ ಸೂಕ್ತವಾದ ಆಯ್ಕೆ ಆಗಲಾರದು.

ಮಹಾಲಕ್ಷ್ಮಿ, ಹಂಚಿನಹಾಳ

ನಾನು ಮಾಹಿತಿ ವಿಜ್ಞಾನದಲ್ಲಿ ಡಿಪ್ಲೊಮಾ ಮಾಡಿದ್ದೇನೆ. ಆದರೆ ಸೂಕ್ತ ಉದ್ಯೋಗ ಯಾವುದು ಎಂದು ತಿಳಿಯುತ್ತಿಲ್ಲ. ಎಲ್ಲಾದರೂ ಉದ್ಯೋಗಕ್ಕೆ ಅರ್ಜಿ ಹಾಕಿದರೆ ಅವರು ಬಿ.ಪಿ.ಒ.ಗೆ ಕಳುಹಿಸುತ್ತಿದ್ದಾರೆ. ಆದ್ದರಿಂದ ಸೂಕ್ತ ಉದ್ಯೋಗವನ್ನು ಎಲ್ಲಿ, ಹೇಗೆ ಅರಸಬಹುದು?
- ನಿಮ್ಮ ಡಿಪ್ಲೊಮಾ ಆಧಾರದ ಮೇಲೆ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಇರುತ್ತದೆ. ಬಿ.ಪಿ.ಒ. ಒಂದು ಮಾನ್ಯತೆ ಇರುವ ಉದ್ಯೋಗ. ಆದ್ದರಿಂದ ಬಿ.ಪಿ.ಒ ಉದ್ಯೋಗಿಯಾಗಿ ಕೆಲಸ ಮಾಡುವುದು ಯಾವುದೇ ತರಹದ ಕೀಳರಿಮೆಯನ್ನು ತರುವುದಿಲ್ಲ. ಬಿ.ಪಿ.ಒ ಕೆಲಸದ ಅನುಭವದ ಜೊತೆಗೆ ಕೆಲವು ಅರೆಕಾಲಿಕ ಕೋರ್ಸ್‌ಗಳನ್ನು ಮಾಡಬಹುದು. ಅನುಭವ ಮತ್ತು ಅರೆಕಾಲಿಕ ಕೋರ್ಸ್‌ಗಳ ಅಧಾರದ ಮೇಲೆ ಉನ್ನತ ಹುದ್ದೆಗೆ ಹೋಗಲು ಸಾಧ್ಯ.

ಪ್ರವೀಣ್ ನಾಯಕ್

ದೂರಶಿಕ್ಷಣ ಮಾಧ್ಯಮದಲ್ಲಿ ಬಿ.ಎಸ್ಸಿ. ಮೈಕ್ರೋಬಯಾಲಜಿ ಪದವಿ ನೀಡುವ ವಿಶ್ವವಿದ್ಯಾಲಯಗಳಿದ್ದರೆ ತಿಳಿಸಿಕೊಡಿ.
- ದೂರಶಿಕ್ಷಣ ಮಾಧ್ಯಮದಲ್ಲಿ ಬಿ.ಎಸ್ಸಿ. ಮೈಕ್ರೋಬಯಾಲಜಿಗೆ ನೀವು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಅಥವಾ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚಿನ ಪೂರಕ ಮಾಹಿತಿಯನ್ನು ಆಯಾಯ ವಿಶ್ವವಿದ್ಯಾಲಯಗಳ ಅಂತರ್ಜಾಲ ತಾಣಗಳಲ್ಲಿ ಪಡೆಯಬಹುದು. ಠಿಠಿ://ಟ್ಠ್ಞಛಿಛಿ.್ಚಟಞ, ಡಿಡಿಡಿ.ಜಿಜ್ಞಟ್ಠ.ಚ್ಚ.ಜ್ಞಿ

ಪ್ರವೀಣ್ ಸಿ.

ನಾನು ಬಿ.ಬಿ.ಎಂ. ಮುಗಿಸಿ ಎರಡು ವರ್ಷಗಳಿಂದ ಉದ್ಯೋಗದಲ್ಲಿದ್ದೇನೆ. ಬಿ.ಬಿ.ಎಂ. ಅತ್ಯುತ್ತಮ ದರ್ಜೆಯಲ್ಲಿ ಪಾಸು ಮಾಡಿಕೊಂಡಿದ್ದರಿಂದ ಫಲಿತಾಂಶ ಬಂದ ನಂತರದ ತಿಂಗಳಿನಲ್ಲೇ ಉದ್ಯೋಗ ಪಡೆದು ಉತ್ತಮವಾದ ಸಂಬಳವನ್ನೂ ಪಡೆಯುತ್ತಿದ್ದೇನೆ. ಆದರೆ ನನಗೆ ಇನ್ನೂ ಓದಬೇಕು ಎನಿಸುತ್ತಿದೆ. ಮನೆಯ ಆರ್ಥಿಕ ಪರಿಸ್ಥಿತಿಯ ಕಾರಣ ಉದ್ಯೋಗ ಬಿಡಲು ಸಾಧ್ಯವಿಲ್ಲ. ನನಗೆ ಎಂ.ಬಿ.ಎ. ಅಥವಾ ಸಿ.ಎ. ಮಾಡಬೇಕೆಂಬ ಮಹದಾಸೆ ಇದೆ. ಆದರೆ ಮಾಡುವುದು ಹೇಗೆ? ಎರಡರಲ್ಲಿ ಯಾವುದು ಉತ್ತಮ ಮತ್ತು ಯಾವುದಕ್ಕೆ ಹೆಚ್ಚು ಬೇಡಿಕೆ ಇದೆ  ತಿಳಿಸಿ.
-ಉದ್ಯೋಗ ದೊರೆತು ಉತ್ತಮವಾದ ಸಂಬಳ ಪಡೆಯುತ್ತಿದ್ದರೂ ಮುಂದೆ ಓದಬೇಕೆಂಬ ನಿಮ್ಮ ಹಂಬಲ ಪ್ರಶಂಸನೀಯವಾದುದು. ಸದ್ಯದ ಪರಿಸ್ಥಿತಿಯಲ್ಲಿ ನೀವು ಮುಂದಿನ ವಿದ್ಯಾಭ್ಯಾಸಕ್ಕಾಗಿ ಎಂ.ಬಿ.ಎ. ಪದವಿಯನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಈ ಪದವಿಯನ್ನು ಸಂಜೆ ಕಾಲೇಜು ಅಥವಾ ದೂರ ಶಿಕ್ಷಣದ ಮೂಲಕ ಅಭ್ಯಾಸ ಮಾಡಬಹುದು.

ಚೈತ್ರ

ನಾನು 2003ರಲ್ಲಿ ಸಿ.ಎಸ್. ವಿಭಾಗದಲ್ಲಿ ಡಿಪ್ಲೊಮಾ ಮುಗಿಸಿ, ನಂತರ 5 ವರ್ಷ ಉದ್ಯೋಗ ನಿರ್ವಹಿಸಿದ್ದೇನೆ. ಬಳಿಕ ಆರೋಗ್ಯದ ತೊಂದರೆಯಿಂದ ಉದ್ಯೋಗವನ್ನು ಬಿಟ್ಟು ಈಗ ಮನೆಯಲ್ಲೇ ಇದ್ದೇನೆ. ಮುಂದೆ ಓದಲು ಮನಸ್ಸಾಗುತ್ತಿದೆ. ಹಾಗಾಗಿ ಈಗ ನಾನು ಲ್ಯಾಟರಲ್ ಎಂಟ್ರಿ ಮೂಲಕ ಬಿ.ಸಿ.ಎ. ದ್ವಿತೀಯ ವರ್ಷಕ್ಕೆ ಸೇರಬಹುದೇ? ಭವಿಷ್ಯದ ದೃಷ್ಟಿಯಿಂದ ಇದು ಸೂಕ್ತವೇ?
- ಉದ್ಯೋಗ ಪಡೆದ ನಂತರವೂ ಮುಂದೆ ಓದಬೇಕೆಂಬ ನಿಮ್ಮ ಹಂಬಲ ಉತ್ತಮವಾದದ್ದು. ವಿಶ್ವವಿದ್ಯಾಲಯದಲ್ಲಿ ನಿಯಮಗಳ ಪ್ರಕಾರ ಆಯ್ಕೆ ಇದ್ದರೆ ಬಿ.ಸಿ.ಎ. ದ್ವಿತೀಯ ವರ್ಷಕ್ಕೆ ನೀವು ಪ್ರವೇಶ ಪಡೆಯಲು ಅಡ್ಡಿಯಿಲ್ಲ. ಭವಿಷ್ಯದ ದೃಷ್ಟಿಯಿಂದ ಬಿ.ಸಿ.ಎ. ನಂತರ ಸ್ನಾತಕೋತ್ತರ ಪದವಿಯನ್ನು ಎಂ.ಸಿ.ಎ. ಮೂಲಕ ಗಳಿಸಬಹುದು.

ಪ್ರತಿಕ್ರಿಯಿಸಿ (+)