ಪ್ರಶ್ನೆ- ಉತ್ತರ

7

ಪ್ರಶ್ನೆ- ಉತ್ತರ

Published:
Updated:

ಮಂಜುನಾಥ್

-ನಾನು 2010ರಲ್ಲಿ ಬಿಎ (ಮಾರ್ಕೆಟಿಂಗ್) ಮುಗಿಸಿದ್ದೇನೆ. ಈಗ ಖಾಸಗೀ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಮುಂದೆ ಪೋಲೀಸ್ ಅಧಿಕಾರಿ ಆಗುವ ಆಸೆ ಇದೆ. ಜೊತೆಗೆ ಎಂಎ ಮಾಡಬೇಕೆಂದಿದ್ದೇನೆ. ಎಂಎಯನ್ನು ಇಂಗ್ಲಿಷ್ ಅಥವಾ ಅರ್ಥಶಾಸ್ತ್ರ ಇವೆರಡರಲ್ಲಿ ಯಾವುದರಲ್ಲಿ ಮಾಡಿದರೆ ಒಳ್ಳೆಯದು? ದಯಮಾಡಿ ಮಾರ್ಗದರ್ಶನ ಕೊಡಿ.ಎಂಎ ಪದವಿಯನ್ನು ಆಂಗ್ಲಭಾಷೆ ಅಥವಾ ಅರ್ಥಶಾಸ್ತ್ರದಲ್ಲಿ ನೀವು ದೂರಶಿಕ್ಷಣದ ಮೂಲಕ ಪಡೆಯಲು ಸಾಧ್ಯ. ನಿಮಗೆ ಅತ್ಯಂತ ಆಸಕ್ತಿ ಇರುವ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಉದ್ಯೋಗದ ಜೊತೆಗೆ ಈ ಪದವಿಗೆ ಅಭ್ಯಾಸ ಮಾಡಿ ಉತ್ತೀರ್ಣರಾಗಿ. ನಿಮ್ಮ ಮುಂದಿನ ಕನಸಿನ ಯೋಜನೆಯಾದ ಪೋಲೀಸ್ ಅಧಿಕಾರಿಯಾಗಲು ಬೇಕಾದ ಪರೀಕ್ಷೆಗಳನ್ನು ತೆಗೆದುಕೊಳ್ಳಿ. ಕೆಎಎಸ್ ಪರೀಕ್ಷೆಯಿಂದ ನೇರವಾಗಿ ಡಿವೈಎಸ್‌ಪಿ ಆಗಲು ಮತ್ತು ಐಎಎಸ್ ಪರೀಕ್ಷೆಯಿಂದ ನೇರವಾಗಿ ಎಸ್‌ಪಿ ಆಗಲು ಸಾಧ್ಯ.

ವಿಶ್ವನಾಥ್ ಜಿ. ಬೆಂಗಳೂರು

-ನಾನು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಬಿಇ ಮುಗಿಸಿದ್ದೇನೆ. ಈಗ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸ್ನಾತಕೋತ್ತರ ಪದವಿಯನ್ನು ಅರೆಕಾಲಿಕ ಅಥವಾ ದೂರಶಿಕ್ಷಣದ ಮೂಲಕ ಮಾಡಬೇಕೆಂದಿದ್ದೇನೆ. ಅಲ್ಲದೆ Computer Application in Industrial Drive ವಿಷಯದಲ್ಲಿ ಹೆಚ್ಚಿನ ಪರಿಣತಿ ಪಡೆಯಬೇಕೆಂದಿದ್ದೇನೆ. ದಯಮಾಡಿ ಮಾರ್ಗದರ್ಶನ ಕೊಡಿ.ದೂರಶಿಕ್ಷಣದ ಮೂಲಕ ಸ್ನಾತಕೋತ್ತರ ಎಂಎಸ್ ಅಥವಾ ಎಂಟೆಕ್ ಪಡೆಯಲು ಅವಕಾಶ ಇದೆ. ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ, ಬಿಟ್ಸ್, ಮಾಹೆ ಇನ್ನಿತರ ಸಂಸ್ಥೆಗಳು ಈ ಶಿಕ್ಷಣ ನೀಡುತ್ತವೆ. ವಿವರಗಳನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ವೆಬ್‌ಸೈಟ್‌ನಲ್ಲಿ ಪಡೆಯಬಹುದು. ನೀವು ತಿಳಿಸಿರುವ ವಿಶೇಷ ಪರಿಣತಿ ಜೊತೆಗೆ ಈ ಪದವಿಯನ್ನು ನೆಟ್‌ವರ್ಕಿಂಗ್, ರೋಬೋಟಿಕ್ಸ್ ಇನ್ನಿತರ ವಿಷಯಗಳಲ್ಲೂ ಪಡೆಯಬಹುದು.

ಶಿವಕುಮಾರ್

-ನಾನು ದ್ವಿತೀಯ ಪಿಯು ಫೇಲಾಗಿದ್ದೇನೆ. ನನಗೆ ಈಗ 22 ವರ್ಷ. ನಾನು ಈಗ ವಯಸ್ಸಿನ ಆಧಾರದ ಮೇಲೆ ಮುಂದೆ ಓದಬಹುದೇ?


ನಿಮಗೆ 22 ವರ್ಷ ವಯಸ್ಸಾಗಿರುವುದರಿಂದ ದೂರ ಶಿಕ್ಷಣದ ಮೂಲಕ ಪದವಿಯನ್ನು ನೇರವಾಗಿ ಗಳಿಸಲು ಸಾಧ್ಯ. ಇದಕ್ಕೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಇಂದಿರಾಗಾಂಧಿ ವಿಶ್ವವಿದ್ಯಾಲಯವೂ ಸೇರಿದಂತೆ ಹಲವಾರು ವಿವಿಗಳಲ್ಲಿ ಅವಕಾಶ ಇದೆ. ವಿವರಗಳನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪಡೆಯಬಹುದು.

ಅಭಿಷೇಕ್‌ಗೌಡ, ತುಮಕೂರು

-ನಾನು ಬಿಎಸ್ಸಿ (ಸಿಬಿಝಡ್) ಓದುತ್ತಿದ್ದೇನೆ. ಪರಿಸರ ವಿಜ್ಞಾನದಲ್ಲಿ ಎಂಎಸ್ಸಿ ಮಾಡಬಯಸಿದ್ದೇನೆ. ಇದರ ಸೌಲಭ್ಯವಿರುವ ಯಾವುದಾದರೊಂದು ಕಾಲೇಜಿನ ಕುರಿತು ಮಾಹಿತಿಕೊಡಿ. ಜೊತೆಗೆ ಈ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿದರೆ ಉತ್ತಮ ಭವಿಷ್ಯ ಮತ್ತು ಉದ್ಯೋಗಾವಕಾಶಗಳಿವೆಯೇ ತಿಳಿಸಿಕೊಡಿ.ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ನೀವು ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಪರಿಸರ ವಿಜ್ಞಾನಕ್ಕೆ ಸಾಕಷ್ಟು ಪ್ರಾಮುಖ್ಯತೆ ದೊರೆಯುತ್ತಿದೆ. ಈ ವಿಷಯದಲ್ಲಿ ಪದವಿ ಗಳಿಸಿದವರಿಗೆ ಉದ್ಯೋಗಾವಕಾಶ ಸಾಕಷ್ಟಿವೆ.

 

ಮಾನಸ, ಕುಣಿಗಲ್

-ನಾನು ಅಂತಿಮ ವರ್ಷದ ಬಿಕಾಂನಲ್ಲಿದ್ದೇನೆ. ನಂತರ ಎಂಬಿಎ ಮಾಡು ಅಂತ ಕೆಲವರು ಹೇಳುತ್ತಾರೆ; ಮತ್ತೆ ಕೆಲವರು ಸಿಎ ಮಾಡು ಎನ್ನುತ್ತಿದ್ದಾರೆ. ಯಾವುದಾದರೂ ನಾನು ಮಾಡಲು ಸಿದ್ಧ. ಆದರೆ ಯಾವುದನ್ನು ಮಾಡಿದರೆ ಉತ್ತಮ ಎಂಬ ಗೊಂದಲದಲ್ಲಿದ್ದೇನೆ. ದಯಮಾಡಿ ಸೂಕ್ತ ಮಾರ್ಗದರ್ಶನ ಕೊಡಿ.ಬಿಕಾಂ ಪದವಿಯ ನಂತರ ಭವಿಷ್ಯದ ದೃಷ್ಟಿಯಿಂದ ಸಿಎ ಮಾಡುವುದು ಸೂಕ್ತ. ಸಿಎ ನಂತರ ಭವಿಷ್ಯದಲ್ಲಿ ಉದ್ಯೋಗಾವಕಾಶ ಹೇರಳವಾಗಿ ಇರುತ್ತದೆ.

ಫಕೀರ್‌ಗೌಡ ಪಾಟೀಲ

-ನಾನು ಈಗ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾ ಓದುತ್ತಿದ್ದೇನೆ. ಮುಂದೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಬೇಕೆಂದಿದ್ದೇನೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಇ ಮಾಡಿದರೆ ಬೆಲೆ ಇಲ್ಲ ಅಂತ ನನ್ನ ಗೆಳೆಯರು ಹೇಳುತ್ತಿದ್ದಾರೆ. ಆದ್ದರಿಂದ ಮೆಕ್ಯಾನಿಕಲ್ ಒಳ್ಳೆಯದೇ? ದಯಮಾಡಿ ಸೂಕ್ತ ಮಾರ್ಗದರ್ಶನ ಕೊಡಿ.ಕಂಪ್ಯೂಟರ್ ವಿಜ್ಞಾನದಲ್ಲಿ ಡಿಪ್ಲೊಮಾ ಪಡೆದ ನಂತರ ಅದೇ ವಿಷಯದಲ್ಲಿ ಬಿಇ ಪದವಿ ಪಡೆಯುವುದು ಸೂಕ್ತ. ಗಣಕ ಯಂತ್ರ ವಿಭಾಗದಲ್ಲಿ ಪಡೆದ ಪದವಿಗೆ ನಿಮ್ಮ ಸ್ನೇಹಿತರು ತಿಳಿಸುವಂತೆ ಹೆಚ್ಚು ಬೆಲೆ ಇಲ್ಲ ಎನ್ನುವುದು ನಿರಾಧಾರ. ಎಲ್ಲಾ ಕಾಲಕ್ಕೂ ಎಲ್ಲಾ ವಿಷಯಗಳಿಗೂ ನೀವು ಪಡೆಯುವ ಪದವಿ ಯಾವ ದರ್ಜೆಯಲ್ಲಿ ಇರುತ್ತದೆ ಎನ್ನುವುದರ ಮೇಲೆ ಬೆಲೆ ಇರುತ್ತದೆ.

ಪ್ರಿಯಾ

-ನಾನು ಎಂಬಿಬಿಎಸ್ ಮುಗಿಸಿದ್ದೇನೆ. ನಾನು ರೈಲ್ವೆ ಇಲಾಖೆಗೆ ಕೆಲಸಕ್ಕೆ ಸೇರಬಹುದೇ? ಅಲ್ಲಿ ಉದ್ಯೋಗಾವಕಾಶಗಳು ಹೇಗಿವೆ? ಅಲ್ಲಿ ಕೆಲಸಕ್ಕೆ ಸೇರಿಯೂ ವಿದ್ಯಾಭ್ಯಾಸ ಮುಂದುವರಿಸಬಹುದೇ ದಯಮಾಡಿ ತಿಳಿಸಿ.ವೈದ್ಯ ವೃತ್ತಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಇಚ್ಛೆ ಇದ್ದರೆ ಇದಕ್ಕಾಗಿ ಅವರು ನಡೆಸುವ ಪರೀಕ್ಷೆ ಮತ್ತು ಇತರ ವಿವರಗಳನ್ನು ಇಲಾಖೆಯ ಅಂತರ್ಜಾಲದಲ್ಲಿ ಪಡೆಯಬಹುದು (www.railwayrecruitment.co.in , http://rrcb.gov.in

 

ಕೀರ್ತಿನಾಯಕ್

-ನಾನು ಅಂತಿಮ ವರ್ಷದ ಬಿಸಿಎ ಓದುತ್ತಿದ್ದೇನೆ. ನಾನು ಮುಂದೆ ಎಂಬಿಎ ಮಾಡಬೇಕೆಂದಿದ್ದೇನೆ. ಇದರಲ್ಲಿ ಮಾನವ ಸಂಪನ್ಮೂಲ ವಿಭಾಗ ಉತ್ತಮವೋ ಅಥವಾ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಉತ್ತಮವೋ? ಯಾವುದಕ್ಕೆ ಹೆಚ್ಚಿನ ಆದ್ಯತೆ? ಬೇಡಿಕೆ? ದಯಮಾಡಿ ಮಾರ್ಗದರ್ಶನ ಕೊಡಿ.ಬಿಸಿಎ ಪದವಿಯ ನಂತರ ಎಂಬಿಎ ಮಾಡುವ ಇಚ್ಛೆ ಇದ್ದರೆ ಈ ಪದವಿಯನ್ನು ಮಾನವ ಸಂಪನ್ಮೂಲ ವಿಷಯದಲ್ಲಿ ಮಾಡುವುದು ಸೂಕ್ತ.

ಮನೋಜ್, ತುಮಕೂರು

-ನಾನು ಎರಡನೇ ವರ್ಷದ ಬಿಎಸ್ಸಿ (ಮೈಕ್ರೋಬಯಾಲಜಿ) ಓದುತ್ತಿದ್ದೇನೆ. ಮುಂದೆ ಎಂಎಸ್ಸಿ ಮಾಡಬೇಕೆಂದಿದ್ದೇನೆ. ಇದಕ್ಕೆ ಯಾವ ವಿಷಯ ಸೂಕ್ತ? ನನಗೆ ಶಿಕ್ಷಕ ವೃತ್ತಿಗೆ ಹೋಗಬೇಕೆಂಬ ಆಸೆ ಇದೆ. ಯಾವ ವಿಶ್ವವಿದ್ಯಾಲಯ ಆಯ್ಕೆ ಮಾಡಿಕೊಳ್ಳಲಿ?ಉದ್ಯೋಗಾವಕಾಶಗಳು ಯಾವುದಕ್ಕೆ ಅಧಿಕ. ದಯಮಾಡಿ ಮಾರ್ಗದರ್ಶನ ಕೊಡಿ.

ಉದ್ಯೋಗಾವಕಾಶಗಳ ದೃಷ್ಟಿಯಿಂದ ಬಿಎಸ್ಸಿ ನಂತರ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವುದು ಒಳ್ಳೆಯದು. ಈ ಪದವಿಯ ನಂತರ ಅಧ್ಯಾಪಕರಾಗಿ ಕೆಲಸ ಮಾಡಲು ಹೆಚ್ಚು ಅವಕಾಶಗಳು ಇರುತ್ತವೆ.ಈ ಪದವಿಗಾಗಿ ನೀವು ಬೆಂಗಳೂರು ಅಥವಾ ಮೈಸೂರು ವಿಶ್ವವಿದ್ಯಾಲಯ ಆಯ್ಕೆ ಮಾಡಿಕೊಳ್ಳಬಹುದು. ಪ್ರವೇಶ ಪಡೆಯಲು ನೀವು ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ಪದವಿಯಲ್ಲಿ ಗಳಿಸಿದ ಸರಾಸರಿ ಅಂಕಗಳ ಜೊತೆಗೆ ವಿವಿ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ನೀವು ಗಳಿಸುವ ಅಂಕಗಳು ಆಧಾರವಾಗಿರುತ್ತವೆ.

ಸುಜಾತಾ

-ನಾನು ಬಿಇ ಮೊದಲನೇ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ಯಾಕೋ ಇದರಲ್ಲಿ ಆಸಕ್ತಿ ಇಲ್ಲ. ನಾನು ಈಗ ಬಿಎಸ್ಸಿ ಕಂಪ್ಯೂಟರ್ ಓದಬಹುದೇ ಅಥವಾ ಬೇರೆ ಯಾವುದಾದರೂ ಕೋರ್ಸುಗಳಿವೆಯೇ? ದಯವಿಟ್ಟು ಮಾರ್ಗದರ್ಶನ ಕೊಡಿ.ಬಿಇ ಪದವಿಯಲ್ಲಿ ಆಸಕ್ತಿ ಇಲ್ಲ ಎನ್ನುವ ಬದಲು ಆ ಪದವಿಯನ್ನು ಗಳಿಸಲೇಬೇಕೆಂಬ ದೃಢನಿರ್ಧಾರ ಮಾಡಿ, ಬೇಕಾದ ಪರಿಶ್ರಮವನ್ನು ಹಾಕುವುದು ಸೂಕ್ತ. ಏಕೆಂದರೆ ಬೇರೆ ಯಾವುದೇ ಪದವಿಗಾದರೂ ನೀವು ಪೂರಕ ಪರಿಶ್ರಮವನ್ನು ಹಾಕಲೇಬೇಕು. ಯಾವುದೇ ಪದವಿಯು ತಾನಾಗಿಯೇ ಕೈಗೆ ಬರುವುದಿಲ್ಲ. ಇದರ ಹೊರತಾಗಿಯೂ ನೀವು ಬೇರೆ ಪದವಿಗೆ ಸೇರ ಬಯಸುವುದಾದರೆ ಬಿಎಸ್ಸಿ ಅಥವಾ ಬಿಸಿಎ ಪದವಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಪ್ರಶ್ನೆ ಕಳಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂಜಿ ರಸ್ತೆ, ಬೆಂಗಳೂರು 560001 ಪ್ರಶ್ನೆಗಳನ್ನು ಇಮೇಲ್‌ನಲ್ಲೂ ಕಳಿಸಬಹುದು: shikshana@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry