ಸೋಮವಾರ, ಮೇ 10, 2021
27 °C

ಪ್ರಸನ್ನ ಮುಡಿಗೆ ಗ್ರ್ಯಾಂಡ್ ಮಾಸ್ಟರ್ ಪದವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲ್ಬೇನಾ, ಬಲ್ಗೇರಿಯಾ (ಪಿಟಿಐ): ಭಾರತದ ವಿ. ವಿಷ್ಣು ಪ್ರಸನ್ನ ಅವರು ಗ್ರ್ಯಾಂಡ್ ಮಾಸ್ಟರ್ ಪದವಿ ಗೌರವಕ್ಕೆ ಪಾತ್ರರಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ಗ್ರ್ಯಾಂಡ್ ಯುರೋಪ್ ಅಲ್ಬೇನಾ ಚೆಸ್ ಟೂರ್ನಿಯಲ್ಲಿ ಬಲ್ಗೇರಿಯಾದ ಬೊರಿಸ್ ಚಟಲ್‌ಬಶೆವ್ ಅವರನ್ನು ಮಣಿಸು ಮೂಲಕ ಈ ಸಾಧನೆ ಮಾಡಿದ್ದಾರೆ. `ಫಿಡೆ'ಯ ನಿಯಮಗಳ ಪ್ರಕಾರ 2500 ರೇಟಿಂಗ್ಸ್ ದಾಟಿದ ಕಾರಣ ಪ್ರಸನ್ ಅವರಿಗೆ ಗ್ರ್ಯಾಂಡ್ ಮಾಸ್ಟರ್ ಪದವಿ ಲಭಿಸಿದೆ. ಈ ಟೂರ್ನಿಯಲ್ಲಿ ನಾಲ್ಕನೇ ಸುತ್ತಿನ ಅಂತ್ಯಕ್ಕೆ ಒಟ್ಟು ನಾಲ್ಕು ಪಾಯಿಂಟ್ ಹೊಂದಿರುವ ಅವರು ಅರ್ಜೆಂಟೀನಾದ ಸ್ಯಾಂಡ್ರೊ ಮರೆಕೋಅವರೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.