ಪ್ರಸಾದ ಸ್ವೀಕರಿಸಿದ 26 ಮಂದಿ ಅಸ್ವಸ್ಥ

7

ಪ್ರಸಾದ ಸ್ವೀಕರಿಸಿದ 26 ಮಂದಿ ಅಸ್ವಸ್ಥ

Published:
Updated:

ಬೆಂಗಳೂರು: ‘ಗಣೇಶ ಮೂರ್ತಿ ವಿಸ­ರ್ಜನೆ ವೇಳೆ ಪ್ರಸಾದ ಸ್ವೀಕರಿಸಿದ್ದ 26ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿರುವ ಘಟನೆ ಪುಲಿಕೇಶಿ ನಗರದಲ್ಲಿ ಬುಧವಾರ ಸಂಜೆ ನಡೆದಿದೆ.  ಅಸ್ವಸ್ಥಗೊಂಡಿರುವವರನ್ನು ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್  ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸ­ಲಾಗಿದ್ದು,  ಪ್ರಾಣಾಪಾ­ಯದಿಂದ ಪಾರಾ­ಗಿದ್ದಾರೆ.ಘಟನೆ: ಪುಲಿಕೇಶಿ ನಗರದ ಬೆಸ್ಕಾಂ ಕಚೇರಿ ಆವರಣದಲ್ಲಿ ಗಣೇಶೋತ್ಸವ  ನಡೆಸ­ಲಾಗಿತ್ತು. ಅದರ ವಿಸರ್ಜನಾ ಕಾರ್ಯ­ಕ್ರಮದ ಪ್ರಯುಕ್ತ ಪುಳಿ­ಯೊಗರೆ, ಪಾಯಸವನ್ನು ಭಕ್ತರಿಗೆ ಹಂಚಿ, ಉಳಿದ ಪ್ರಸಾದವನ್ನು ಲೇಜರ್ ರಸ್ತೆಯಲ್ಲಿರುವ ಕೊಳೆಗೇರಿಗಳಿಗೆ ನೀಡ­ಲಾಯಿತು. ಇದನ್ನು ಸೇವಿಸಿದ 26 ಮಂದಿ  ವಾಂತಿ ಭೇದಿಯಿಂದ ಅಸ್ವಸ್ಥ­ರಾ­ದರು. ಅಸ್ವಸ್ಥರ ಪೈಕಿ 21 ಮಂದಿ ಮಕ್ಕಳಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.‘ಪಾಯಸ ಸೇವಿಸಿದ್ದರಿಂದ ವಾಂತಿ ಹಾಗೂ ಭೇದಿಯಾಗಿದೆ. ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಿದ್ದು, ವಿಷಯುಕ್ತ ಆಹಾರ ಸೇವನೆಯಿಂದ ಹೀಗಾಗಿದೆ ಎಂಬುದು ದೃಢಪಟ್ಟಿದೆ’ ಎಂದು ಅಸ್ವಸ್ಥಗೊಂಡ  ನಿವಾಸಿ ಆರತಿ ‘ಪ್ರಜಾವಾಣಿ’ಗೆ ತಿಳಿಸಿ­ದರು.‘ಪಾಯಸ ಸೇವಿಸಿದ ತಕ್ಷಣವೇ ಹೊಟ್ಟೆನೋವಿನಿಂದ ಬಳಲುವಂ­ತಾ­ಯಿತು.  ಇದರಿಂದ ಮನೆ ಮಂದಿ­ಯೆಲ್ಲ  ಅಸ್ವಸ್ಥರಾದರು’ ಎಂದು ಮುರುಗನ್ ಹೇಳಿದರು. ಬೌರಿಂಗ್ ಆಸ್ಪತ್ರೆಯ ಸ್ಥಾನಿಕ ವೈದ್ಯ ಅಧಿಕಾರಿ ಡಾ.ರಾಜಣ್ಣ, ‘ಸಿದ್ಧಪಡಿಸಿ ಹಲವು ಗಂಟೆಗಳ  ನಂತರ ಪ್ರಸಾದ ಹಂಚಿರುವುದರಿಂದ ಅಸ್ವಸ್ಥತೆ­ಯಾಗಿರ­ಬಹುದು.  ಅಲ್ಲದೇ ಬಹುತೇಕ ಯುವ­ಕರಿಗೆ ರಕ್ತದೊತ್ತಡ ಅಸಹಜವಾಗಿದೆ’ ಎಂದು ತಿಳಿಸಿದರು.‘ಅಸ್ವಸ್ಥರಾಗಿ ದಾಖಲಾಗಿರುವವರ ಪ್ರಾಣಾಪಾಯಕ್ಕೆ ಯಾವುದೇ ತೊಂದ­ರೆ­ಯಿಲ್ಲ’ ಎಂದರು.ನಿರ್ಲಕ್ಷ್ಯ ಆರೋ­ಪದ ಮೇಲೆ ಬೆಸ್ಕಾಂ ಅಧಿಕಾರಿಗಳ ವಿರುದ್ಧ  ಪುಲಿಕೇಶಿ  ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂಚಲಾದ ಪ್ರಸಾದವನ್ನು ವಿಧಿವಿಜ್ಞಾನ ಪ್ರಯೋ­ಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry