ಪ್ರಸಾರ ಸಂಸ್ಥೆಗಳ ಜತೆ ಶೀಘ್ರ ಸಭೆ: ಸೋನಿ

7

ಪ್ರಸಾರ ಸಂಸ್ಥೆಗಳ ಜತೆ ಶೀಘ್ರ ಸಭೆ: ಸೋನಿ

Published:
Updated:

ನವದೆಹಲಿ, (ಐಎಎನ್‌ಎಸ್): ಟಿ.ವಿ ವಾಹಿನಿಗಳ ಪ್ರಸಾರ ಸಂಸ್ಥೆಗಳ ಅಹವಾಲು ಆಲಿಸಲು ಶೀಘ್ರ ಸಭೆ ಕರೆಯುವುದಾಗಿ ವಾರ್ತಾ ಮತ್ತು ಪ್ರಸಾರ ಸಚಿವೆ ಅಂಬಿಕಾ ಸೋನಿ ಸೋಮವಾರ ಹೇಳಿದ್ದಾರೆ.ಮಿತಿಮೀರಿ ತಲೆ ಎತ್ತುತ್ತಿರುವ ಟಿ.ವಿ ವಾಹಿನಿಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಶುಕ್ರವಾರ ಪ್ರಸಾರ ನಿಯಮಾವಳಿ ಮತ್ತು ಮಾರ್ಗಸೂಚಿಗಳಿಗೆ ಬದಲಾವಣೆ ತಂದಿದೆ. ಹೊಸ ಟಿ.ವಿ ವಾಹಿನಿಗಳನ್ನು ಆರಂಭಿಸಲು ಈ ಮೊದಲು ಇದ್ದ ನಿಯಮಾವಳಿಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಇದಕ್ಕೆ ಸಚಿವ ಸಂಪುಟದ ಅನುಮೋದನೆಯೂ ದೊರೆತಿದೆ.ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಪ್ರಸಾರ ಸಂಸ್ಥೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.  ಇದಕ್ಕೆ ಪ್ರತಿಕ್ರಿಯಿಸಿರುವ ಸೋನಿ, ಪ್ರಸಾರ ಸಂಸ್ಥೆಗಳು ಸ್ವಯಂ ಕಟ್ಟಳೆ ವಿಧಿಸಿಕೊಳ್ಳುವುದನ್ನು ಸರ್ಕಾರ ಬಯಸುತ್ತದೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry