ಶನಿವಾರ, ಮೇ 15, 2021
24 °C

ಪ್ರಸೂತಿ ತಜ್ಞರ ರ‍್ಯಾಂಪ್ ಶೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫೆಡರೇಷನ್ ಆಫ್ ಅಬ್‌ಸ್ಟೆಟ್ರಿಕ್ ಅಂಡ್ ಗೈನಕಾಲಜಿಕಲ್ ಸೊಸೈಟೀಸ್ ಆಫ್ ಇಂಡಿಯಾ (ಫೊಗ್ಸಿ) ನಗರದ ಲೀ ಮೆರಿಡಿಯನ್ ಹೋಟೆಲ್‌ನಲ್ಲಿ ಆಯೋಜಿಸಿದ್ದ `ವರ್ಲ್ಡ್ ಕಾಂಗ್ರೆಸ್ ಇನ್ ಅಬ್‌ಸ್ಟೆಟ್ರಿಕ್ಸ್ ಅಂಡ್ ಗೈನಕಾಲಜಿ' ಸಮಾರೋಪ ಸಮಾರಂಭದಲ್ಲಿ ವಿಶೇಷ ಫ್ಯಾಷನ್ ಶೋ ನಡೆಯಿತು.ವೈದ್ಯರು ರ‍್ಯಾಂಪ್ ಮೇಲೆ ನಡೆದು ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಗೆಗಳನ್ನು ಅನಾವರಣ ಮಾಡಿದ್ದು ಶೋನ ವಿಶೇಷವಾಗಿತ್ತು. ಸ್ತ್ರೀಯರೇ ಪುರುಷ ವೇಷಧಾರಿಗಳಾಗಿದ್ದು ಸೇರಿದಂತೆ ಬಗೆಬಗೆಯ ಬಣ್ಣದ ಉಡುಪು, ವಿನ್ಯಾಸ ನೋಡುಗರಿಗೆ ಖುಷಿ ನೀಡಿತು.ಮೂವತ್ತು ನಿಮಿಷಗಳ ಫ್ಯಾಷನ್ ಶೋಗೆ ಫೊಗ್ಸಿಯ ಜಂಟಿ ಕಾರ್ಯದರ್ಶಿ ಡಾ. ವಿದ್ಯಾ ಭಟ್ ಸಮನ್ವಯಕಾರರಾಗ್ದ್ದಿದರು. ಫ್ಯಾಷನ್ ಶೋಗೆ ಪೂರಕವಾದ ಸಂಗೀತ ಮತ್ತು ಬೆಳಕಿನ ಸಂಯೋಜನೆ ಮೆಚ್ಚುಗೆಗೆ ಪಾತ್ರವಾಯಿತು.ಫ್ಯಾಷನ್ ಶೋನಲ್ಲಿ ಇಷ್ಟು ಮಂದಿ ಸ್ತ್ರೀರೋಗ ತಜ್ಞರು ಮತ್ತು ಪ್ರಸೂತಿ ತಜ್ಞರು ಕಂಡುಬಂದಿದ್ದು ಇದೇ ಮೊದಲು ಎನ್ನಬಹುದು.`ವೈದ್ಯಕೀಯ ಕ್ಷೇತ್ರವಲ್ಲದೆ ತಜ್ಞರಲ್ಲಿ ಇರುವ ಇತರ ಪ್ರತಿಭೆಯನ್ನು ಉತ್ತೇಜಿಸಲು ಫ್ಯಾಷನ್ ಶೋ ಆಯೋಜಿಸಿದ್ದೆವು. ಎಲ್ಲರೂ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ನೀಡಿದರು.ವರ್ಲ್ಡ್ ಕಾಂಗ್ರೆಸ್ ಅತ್ಯಂತ ಯಶಸ್ವಿಯಾಗಿದ್ದು, ಫೊಗ್ಸಿ ಸ್ತ್ರೀಯರ ಆರೋಗ್ಯ ಸೇವೆಗಳನ್ನು ಸುಧಾರಿಸಲು ಹಲವಾರು ನಿರ್ಣಯಗಳನ್ನು ಕೈಗೊಂಡಿತು' ಎಂದು ಸಂಸ್ಥೆಯ ಅಧ್ಯಕ್ಷೆ ಡಾ. ಹೇಮಾ ದಿವಾಕರ್ ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.