ಪ್ರಾಂಶುಪಾಲ ಪ್ರೊ. ಬಿ.ವಿ.ಕೃಷ್ಣಪ್ಪ ವಿರುದ್ಧ ಆರೋಪ

7

ಪ್ರಾಂಶುಪಾಲ ಪ್ರೊ. ಬಿ.ವಿ.ಕೃಷ್ಣಪ್ಪ ವಿರುದ್ಧ ಆರೋಪ

Published:
Updated:

ಚಿಕ್ಕಬಳ್ಳಾಪುರ: `ಬೆಂಗಳೂರು ವಿಶ್ವ ವಿದ್ಯಾಲಯದ ಪ್ರಸಕ್ತ ಸಾಲಿನ ಪದವಿ ಪರೀಕ್ಷೆಗಳು ನಡೆಯುವ ಪರೀಕ್ಷಾ ಕೇಂದ್ರ ಬದಲಾಗಿದ್ದು, ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬದಲು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಕೇಂದ್ರ ಬದಲಾಗಿರುವ ಮತ್ತು ಇನ್ನಿತರ ಕಾರಣಗಳಿಂದಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಬಿ.ವಿ.ಕೃಷ್ಣಪ್ಪ ಪರೀಕ್ಷೆ ಕಾರ್ಯಗಳಿಗೆ ಸಹಕಾರ ನೀಡುತ್ತಿಲ್ಲ~ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.`ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳ ಪದವಿ ಪರೀಕ್ಷೆಗಳು ಅಕ್ಟೋಬರ್ 12 ರಿಂದ ನವೆಂಬರ್ 9ರವರೆಗೆ ನಡೆಯಲಿದ್ದು, ಕುಲಪತಿಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರವನ್ನು ಬದಲಿಸಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ವರ್ಗಾಯಿಸಿದ್ದಾರೆ. ಪರೀಕ್ಷಾ ಉಸ್ತುವಾರಿ ನನಗೆ ವಹಿಸಿದ್ದಾರೆ. ಎರಡೂ ಕಾಲೇಜುಗಳ ಒಂದೇ ಆವರಣದಲ್ಲಿದ್ದರೂ ಕೃಷ್ಣಪ್ಪ ಅವರು ಸಹಕಾರ ನೀಡದಿರುವ ಕಾರಣ ಜೂನಿಯರ್ ಕಾಲೇಜಿನಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ~ ಎಂದು ಅವರು ಭಾನುವಾರ `ಪ್ರಜಾವಾಣಿ~ಗೆ ತಿಳಿಸಿದರು.`ಪರೀಕ್ಷೆ ನಡೆಸಲು  ಕೊಠಡಿಗಳನ್ನು, ಶಿಕ್ಷಕ ಸಿಬ್ಬಂದಿಗಳನ್ನು ಮತ್ತು ಪರೀಕ್ಷಾರ್ಥಿಗಳ ಪಟ್ಟಿಯನ್ನು ನೀಡುವಂತೆ ಪತ್ರದ ಮೂಲಕ ಸೆಪ್ಟೆಂಬರ್ 9ರಂದು ಕೃಷ್ಣಪ್ಪ ಅವರಿಗೆ ಕೋರಲಾಗಿತ್ತು. ಆದರೆ ಇದಕ್ಕೆ ತಡವಾಗಿ ಉತ್ತರಿಸಿದ ಅವರು ಪತ್ರದ ಮೂಲಕ ಮಾತ್ರವೇ ಸಹಕಾರ ನೀಡದರೇ ಪತ್ರದಲ್ಲಿನ ಮಾತುಗಳನ್ನು ಪಾಲಿಸಲಿಲ್ಲ. ಕೊಠಡಿಗಳ ಬೀಗಗಳನ್ನು ಹಸ್ತಾಂತರಿಸಲಿಲ್ಲ, ಶಿಕ್ಷಕ ಸಿಬ್ಬಂದಿಗಳ ಹೆಸರುಗಳನ್ನು ಮಾತ್ರವೇ ನೀಡಿದರೆ ಹೊರತು ಅವರ ಸಂಪರ್ಕ ದೂರವಾಣಿ ಸಂಖ್ಯೆಗಳನ್ನು ನೀಡಲಿಲ್ಲ. ಅಷ್ಟೇ ಅಲ್ಲದೇ ಪರೀಕ್ಷಾರ್ಥಿಗಳ ಸಂಪೂರ್ಣವಾದ ವಿವರಣೆಯನ್ನೂ ಸಹ ನೀಡಿಲ್ಲ~ ಎಂದು ಅವರು ತಿಳಿಸಿದರು. `ಕೃಷ್ಣಪ್ಪ ಅವರು ಸಹಕಾರ ನೀಡದಿರುವ ಕುರಿತು ವಿಶ್ವ ವಿದ್ಯಾಲಯದ ಕುಲಪತಿಗಳ ಗಮನಕ್ಕೆ ತಂದು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಕರ ಸಿಬ್ಬಂದಿಗಳ ಕೊರತೆಯಿದ್ದರೂ ಮತ್ತು ಪರೀಕ್ಷಾರ್ಥಿಗಳ ಸಂಪೂರ್ಣ ಮಾಹಿತಿ ಇಲ್ಲದಿದ್ದರೂ ಪರೀಕ್ಷೆ ನಡೆಸ ಲಾಗುವುದು. ಜೂನಿಯರ್ ಕಾಲೇಜು ಆವರಣದಲ್ಲಿನ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ ಮತ್ತು ಉರ್ದು ಶಾಲೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಕುಲಪತಿ ಅನುಮತಿ ನೀಡಿದ್ದಾರೆ~  ಎಂದು ಡಾ.ಎಂ.ನಾರಾಯಣಸ್ವಾಮಿ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry