ಪ್ರಾಚಾರ್ಯರಿಗೆ ಬರಗಾಲವೇ?

7

ಪ್ರಾಚಾರ್ಯರಿಗೆ ಬರಗಾಲವೇ?

Published:
Updated:

2009ರ ಡಿಸೆಂಬರ್‌ನಿಂದೀಚೆಗೆ ಯಾವುದೇ ಸರ್ಕಾರಿ ಮತ್ತು ಅನುದಾನಿತ ಖಾಸಗಿ ಕಾಲೇಜುಗಳಲ್ಲಿ ಖಾಯಂ ಪ್ರಾಚಾರ್ಯರ ನೇಮಕವಾಗಿಲ್ಲ. ಈ ಹುದ್ದೆಗೆ ಯುಜಿಸಿ ಕೆಲವು ಅರ್ಹತೆಗಳನ್ನು ನಿಗದಿಗೊಳಿಸಿದೆ. ಅರ್ಹತೆಯುಳ್ಳ ಅಭ್ಯರ್ಥಿಗಳಿಲ್ಲವೋ ತಿಳಿಯುತ್ತಿಲ್ಲ.ಶೇಕಡ ತೊಂಬತ್ತಕ್ಕಿಂತ ಹೆಚ್ಚು ಕಾಲೇಜುಗಳಲ್ಲಿ ಡ್ರಾಯಿಂಗ್ ಆಫೀಸರ್‌ಗಳಿಲ್ಲದೆ ಶೈಕ್ಷಣಿಕ ಚಟುವಟಿಕೆಗಳು, ವೇತನ, ಅನುದಾನ ಮತ್ತು ಇತರೆ ಕೆಲಸಗಳು ಜರುಗುತ್ತಿಲ್ಲ. ಪರಿಶಿಷ್ಟಜಾತಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನ ಸಕಾಲಕ್ಕೆ ತಲುಪುತ್ತಿಲ್ಲ.ಯುಜಿಸಿ ನೀಡುವ ಹೆಚ್ಚುವರಿ ಅನುದಾನವನ್ನು ಬಳಸಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಎಲ್ಲಾ ಕಾಲೇಜುಗಳಲ್ಲಿ ಪ್ರಭಾರಿ ಪ್ರಾಚಾರ್ಯರೇ ಇದ್ದು, ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವ ವೇಳೆಯಲ್ಲಿ ತಮಗೆ ಅಧಿಕಾರವಿಲ್ಲವೆಂದು ನುಣುಚಿಕೊಳ್ಳುತ್ತಿರುವುದರಿಂದ ಇಡೀ ಶಿಕ್ಷಣ ಇಲಾಖೆಯೇ ದುರ್ಬಲಗೊಳ್ಳುತ್ತಿದೆ.

 

ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ಕೂಡಲೇ ಗಮನಹರಿಸಿ ಯುಜಿಸಿ ನಿಯಾಮಾವಳಿ ಪ್ರಕಾರ ಪ್ರಾಚಾರ್ಯರ, ಸಹ ಪ್ರಾಧ್ಯಾಪಕರ ಹಾಗೂ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಆರಂಭಿಸಲಿ.

               

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry