ಪ್ರಾಚೀನ ಕಲಾಕೃತಿ ಪರಂಪರೆ ಪ್ರತೀಕ

7

ಪ್ರಾಚೀನ ಕಲಾಕೃತಿ ಪರಂಪರೆ ಪ್ರತೀಕ

Published:
Updated:

ಸವದತ್ತಿ: `ಅಳಿದೂಳಿದ ಪ್ರಾಚೀನ ಕಲಾಕೃತಿಗಳು ನಮ್ಮ ಕಲೆ, ಸಾಹಿತ್ಯ, ಸಂಗೀತಗಳ ಗತ ವೈಭವ ಪರಂಪರೆ ಸಾರಿ ಹೇಳುವ ಕುರುಹುಗಳಾಗಿವೆ. ಅವುಗಳನ್ನು ಉಳಿಸಿಕೊಂಡು ಮುಂದಿನ ಪಿಳಿಗೆಗೆ ಅದರ ಅರಿವು ನೀಡುವ ಅಗತ್ಯವಿದೆ~ ಎಂದು ಪ್ರೊ. ಬಿ.ಪಿ. ಹಿರೇಮಠ ಸಲಹೆ ನೀಡಿದರು.ಗುರುವಾರ ಇಲ್ಲಿನ ಕೆ.ಎಲ್.ಇ. ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಕಾಲೇಜಿನಲ್ಲಿ ಬೆಂಗಳೂರಿನ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯೋಜಿಸಿದ್ದ ಪರಂಪರೆಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. `ಪುರಾತನ ಶಿಲ್ಪಕಲೆಯನ್ನು ನೋಡುವುದರ ಜೊತೆಗೆ ಅದರಲ್ಲಿನ ಕಲೆ ಯನ್ನು ಅಭ್ಯಾಸ ಮಾಡಬೇಕು~ ಎಂದರು.`ಒಂದು ಸಮಾಜ, ದೇಶ ಬೆಳೆಯಲು ತನ್ನದೆಯಾದ ಉತ್ತಮವಾದ ಸಂಸ್ಕಾರ, ಸಂಸ್ಕೃತಿಯೊಂದಿಗೆ  ಪರಂ ಪರೆಗಳನ್ನು ಹೊಂದಿರುತ್ತದೆ, ಅಲ್ಲಿ ಜಾತಿ, ಮತ, ಪಂಥಗಳನ್ನು ಮೆಟ್ಟಿ ನಿಂತಿರುವುದನ್ನು ಕಾಣಬಹುದು. ಇಂದು ನಮ್ಮನ್ನೆಲ್ಲಾ ಜಾತಿಯಿಂದ ವ್ಯವಸ್ಥಿತವಾಗಿ ಒಡೆಯುವ ಕಾರ್ಯ ನಡೆದಿದ್ದು, ಯುವ ಜನಾಂಗ ಜಾಗೃತರಾಗಬೇಕಾಗಿದೆ~ ಎಂದರು.ಪ್ರಾ. ಎಸ್.ಎಚ್. ಅಂದೂರ ಮಾತನಾಡುತ್ತ, ನಮ್ಮ ಸಂಸ್ಕೃತಿ, ಪರಂಪರೆ, ನಾಡು, ನುಡಿಗಳ ಅಭಿಮಾನ ಬೆಳೆಸಿಕೊಂಡು ಪುರಾತನ ಕಲಾ ಕೃತಿಗಳನ್ನು ಸಂರಕ್ಷಿಸುವುದರ ಜೊತೆಗೆ ದೇಶಪ್ರೇಮ ಬೆಳೆಸಿಕೊಳ್ಳಿ ಎಂದರು.

ವಿಜಯಲಕ್ಷ್ಮಿ ಪ್ರಾರ್ಥನೆ ಹಾಡಿದರು. ಪ್ರೊ. ಎಸ್.ಬಿ. ಕಿಲ್ಲೇದಾರ ಸ್ವಾಗತಿಸಿದರು. ಡಾ. ಅರುಂಧತಿ ಬದಾಮಿ ನಿರೂಪಿಸಿದರು. ಡಾ. ಎಸ್.ಎಂ. ಪಾನಬುಡೆ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry