ಪ್ರಾಚೀನ ನಾಗರಿಕತೆಯ ಕುರುಹು ಪತ್ತೆ

7

ಪ್ರಾಚೀನ ನಾಗರಿಕತೆಯ ಕುರುಹು ಪತ್ತೆ

Published:
Updated:

ಬೀಜಿಂಗ್ (ಐಎಎನ್‌ಎಸ್): ಚೀನಾದ ಮೂರನೆ ಅತಿದೊಡ್ಡ ಮರುಭೂಮಿ ಬಡೇನ್ ಜರನ್‌ನಲ್ಲಿ ಪ್ರಾಚೀನ ನಾಗರಿಕತೆಯ ಕುರುಹು ಹೊಂದಿರುವ 10 ಸ್ಥಳಗಳನ್ನು ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.ಪ್ರಾಚ್ಯವಸ್ತು ಇಲಾಖೆಯ 11 ಮಂದಿ ತಜ್ಞರು ಮಂಗೋಲಿಯ, ಬೀಜಿಂಗ್ ಮತ್ತು ಶಿಚುವಾನ್ ಒಳಭಾಗದಲ್ಲಿ ದೊಡ್ಡ ಗಾತ್ರದ ಕಲ್ಲುಗಳು ಮತ್ತು ಕೈಯಿಂದ ತಯಾರಿಸಿರುವ ಮಣ್ಣಿನ ಕಲಾಕೃತಿಗಳನ್ನು ಪತ್ತೆ ಹಚ್ಚಿದ್ದು, 5,000 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ನಾಗರಿಕತೆ ಇದ್ದಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry