ಬುಧವಾರ, ಮೇ 12, 2021
27 °C

ಪ್ರಾಣಭೀತಿಯಲ್ಲಿ ಪ್ರಯಾಣಿಕರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಾಣಭೀತಿಯಲ್ಲಿ ಪ್ರಯಾಣಿಕರು!

ಕಾಳಗಿ: ಒಂದೂರಿಂದ ಇನ್ನೊಂದೂರಿಗೆ ಸಂಚರಿಸಲು ಟಂಟಂ, ಟ್ರ್ಯಾಕ್ಟರ್, ಲಾರಿ, ಟೆಂಪೋಗಳಿವೆ ಎಂದರೆ ಹೆದರುವ ಪ್ರಯಾಣಿಕರು, ಇದೀಗ ಕಾಳಗಿ ಬಸ್ ಘಟಕದ ಬಸ್ಸುಗಳು ಬರುವುದು ನೋಡಿ ಪ್ರಾಣಭೀತಿಯಲ್ಲಿ ತೇಲಾಡುತ್ತಿರುವ ಪ್ರಸಂಗ ಸುತ್ತಲಿನ ಎಲ್ಲೆಡೆ ಸೃಷ್ಟಿಯಾಗಿದೆ.ಹೌದು! ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಇಲ್ಲಿನ ಬಸ್ ಘಟಕದ ಅವ್ಯವಸ್ಥೆಯೇ ಮುಖ್ಯ ಕಾರಣ ಎನ್ನುತ್ತದೆ ವಲಯದ ಜೈ ಕರ್ನಾಟಕ ರಕ್ಷಣಾ ವೇದಿಕೆ. ಒಂದುವರೇ ವರ್ಷದ ಹಿಂದೆ ಜನ್ಮತಾಳಿದ ಸ್ಥಳೀಯ ಬಸ್ ಘಟಕವು ಆರಂಭದಲ್ಲಿ ಉತ್ತಮ ಬಸ್ಸುಗಳು ಹೊಂದಿ ಒಳ್ಳೆರೀತಿಯ ಸಂಚಾರದ ವ್ಯವಸ್ಥೆ ಕಲ್ಪಿಸಿಕೊಟ್ಟಿತ್ತು. ಬರುಬರುತ್ತ ಎಲ್ಲೆಲ್ಲಿಂದೋ ಬಂದ ಹಳೆ ಬಸ್ಸುಗಳು ಹೊಸ ಬಸ್ಸುಗಳಿಗೆ ಓಡಿಸಿಕೊಟ್ಟು ತಮ್ಮ ದರ್ಬಾರ್ ಶುರುಮಾಡಿವೆ.ಹೆಚ್ಚು ಕಡಿಮೆ ಚಿಂಚೋಳಿ, ಗುಲ್ಬರ್ಗ, ಹೊಸಪೇಟ್, ಪುಣೆ, ಲಾತೂರ್ ಚಲಿಸುವ ಬಸ್ಸುಗಳು ಹೊರತು ಪಡಿಸಿದರೆ ಇದ್ದಿರುವ ಎಲ್ಲ ಬಸ್ಸುಗಳು ದುರಸ್ತಿಯ ಗುಂಗಿನಲ್ಲಿ ಜೋಲಿ ಹೊಡೆಯುವಾಗಿವೆ. ಸೇಡಂ, ಚಿತ್ತಾಪುರ, ಶಹಾಬಾದ, ಮಂಗಲಗಿ ಕಡೆಗಳಿಗೆ ಸಂಚರಿಸುವ ಬಸ್ಸುಗಳಂತೂ ಎಲ್ಲೆಂದರಲ್ಲಿ ನಿಂತುಕೊಳ್ಳುತ್ತ ದಡ ಸೇರಿಸದ ವಾಹನಗಳಾಗಿವೆ.ತಿಪ್ಪೆಗುಂಡಿಯಂತೆ ಕಾಣುವ ಬಸ್ಸಿನ ಒಳಭಾಗ ಕಸಮುಸುರಿಯ ತಾಣವಾಗಿವೆ. ಒಂದು ಟೈರ್ ಚೆನ್ನಾಗಿದ್ದರೆ ಮತ್ತೊಂದು ಟೈರ್ ಢಂ, ಠುಸ್ ಎಂಬ ಶಬ್ದ ಕೇಳಿಸುವುದಾಗಿದೆ. ಹೊರಹಾಕುವ ನೀರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಯಿಲ್ ಸೋರತೊಡಗಿ ಮೂಕ ಪ್ರಾಣಿಗಳ ನಾಲಿಗೆಗೆ ನೋವುಂಟು ಮಾಡುತ್ತಿವೆ.ಕೆಲವು ಬಸ್ಸುಗಳಿಗೆ ಗ್ಲಾಸ್‌ಗಳೇ ಇಲ್ಲದಂತಾಗಿ ಗಾಳಿ, ಬಿಸಿಲು, ಮಳೆ ಒಂದೇ ಸಮಾನೆ ಒಳನುಗ್ಗಿ ಪ್ರಯಾಣಿಕರ ಮೈ ಕೈ ಎಲ್ಲ ಧೂಳಾಗುತ್ತಿದ್ದಲ್ಲದೇ ಇಡೀ ಶರೀರದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಇಂಥ ಬಸ್ಸುಗಳು ಕಂಡೊಡನೆ ಪ್ರಯಾಣಿಕರ ಎದೆ ಢಬ ಢಬ ಎನ್ನತೊಡಗಿ ಪ್ರಾಣಭೀತಿ ಎದುರಾಗಿದೆ.ಪ್ರಯಾಣದ ಚಿಂತೆಯಾಗಿ ಘಟಕದ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ. ಇದಕ್ಕೆಲ್ಲ ಸಂಬಂಧಿಸಿದ ವ್ಯವಸ್ಥಾಪಕರ ನಿರ್ಲಕ್ಷ್ಯವೇ ನೇರ ಕಾರಣ ಎಂದಿರುವ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಶೇಖರ ಪಾಟೀಲ, ಕಾರ್ಯಾಧ್ಯಕ್ಷ ಸುರೇಶ ಮೋರೆ, ಉಪಾಧ್ಯಕ್ಷ ಪ್ರಶಾಂತ ಕದಂ, ಮೇಲಧಿಕಾರಿಗಳು ಶೀಘ್ರದಲ್ಲಿ ಗಮನಹರಿಸಿ ಬಸ್ಸುಗಳ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.