ಪ್ರಾಣಿ ಪ್ರಪಂಚ

7

ಪ್ರಾಣಿ ಪ್ರಪಂಚ

Published:
Updated:

1. ಅತ್ಯಂತ ಪ್ರಸಿದ್ಧವಾಗಿರುವ ಬೆಕ್ಕುಗಳಲ್ಲೊಂದಾದ ‘ಹುಲಿ’ ಚಿತ್ರ–1ರಲ್ಲಿದೆ. ಈ ಕೆಳಗೆ ಪಟ್ಟಿಮಾಡಿರುವ ಬೆಕ್ಕುಗಳನ್ನೂ ಅವುಗಳ ನೈಸರ್ಗಿಕ ನೆಲೆಗಳಾಗಿರುವ ಭೂಖಂಡಗಳನ್ನೂ ಸರಿ ಹೊಂದಿಸಬಲ್ಲಿರಾ?

1. ಚೀನಾ ಅ. ಯೂರೋಪ್‌

2. ಪ್ಯೂಮಾ ಬ. ಏಷ್ಯಾ

3. ಲಿಂಕ್ಸ್ ಕ. ಆಫ್ರಿಕ

4. ಜಾಗ್ವಾರ್‌ ಡ. ಅಂಟಾರ್ಕ್ಟಿಕಾ

5. ಹಿಮಚಿರತೆ ಇ. ಉತ್ತರ–ದಕ್ಷಿಣ

     ಅಮೆರಿಕ

ಈ. ದಕ್ಷಿಣ ಅಮೆರಿಕ

ಉ. ಆಸ್ಟ್ರೇಲಿಯಾ

2. ಒಂಟೆಯನ್ನು ಹೋಲುವ ಆದರೆ ಆ್ಯಂಡಿಸ್‌ ಪರ್ವತ ಪ್ರದೇಶದ ಒಂದು ಸುಪ್ರಸಿದ್ಧ ಪ್ರಾಣಿ ಹಿಂಡು ಚಿತ್ರ–2 ರಲ್ಲಿದೆ. ಈ ಪ್ರಾಣಿ ಗೊತ್ತೇ?

ಅ. ಕ್ಯಾರಿಬೂ

ಬ. ವಿಕ್ಯೂನಾ

ಕ. ಯಾಕ್‌

ಡ. ಸ್ಪ್ರಿಂಗ್‌ ಬಾಕ್‌

3. ಒಂಟೆಯ ದ್ವಿವಿಧಗಳಲ್ಲೊಂದಾದ ‘ಬ್ಯಾಕ್ರ್ಟಿಯನ್‌ ಒಂಟೆ’ ಚಿತ್ರ–3 ರಲ್ಲಿದೆ. ಇದರ ವಾಸಕ್ಷೇತ್ರ ಇವುಗಳಲ್ಲಿ ಯಾವುದು?

ಅ. ಸಹರಾ ಮರುಭೂಮಿ

ಬ. ಅರೇಬಿಯನ್‌ ಮರುಭೂಮಿ

ಕ. ಕಲಹಾರೀ ಮರುಭೂಮಿ

ಡ. ಗೋಬಿ ಮರುಭೂಮಿ

ಇ. ಅಟಕಾಮಾ ಮರುಭೂಮಿ

4. ಚಿತ್ರ–4ರಲ್ಲಿರುವ ವಿಚಿತ್ರ ರೂಪದ ಮತ್ಸ್ಯವನ್ನು ಗಮನಿಸಿದಿರಾ?

ಅ. ಈ ಮೀನಿನ ಹೆಸರೇನು?

ಬ. ಅತ್ಯಂತ ದೈತ್ಯಗಾತ್ರದ ಮತ್ಸ್ಯ ಯಾವುದು?

5. ವಿಶ್ವಪ್ರಸಿದ್ಧ ಪ್ರಾಣಿ ‘ದೈತ್ಯ ಪಾಂಡಾ’ ಚಿತ್ರ–5 ರಲ್ಲಿದೆ. ಈ ಕೆಳಗೆ ಹೆಸರಿಸಿರುವ ಯಾವ ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಸಂಸ್ಥೆ ಈ ಪ್ರಾಣಿಯನ್ನು ತನ್ನ ಲಾಂಛನದಲ್ಲಿ ಹೊಂದಿದೆ?

ಅ. ಗ್ರೀನ್‌ ಪೀಸ್‌

ಬ. ಐ.ಯು.ಸಿ.ಎನ್‌.

ಕ. ಡಬ್ಲ್ಯೂ.ಡಬ್ಲ್ಯೂ.ಎಫ್‌.

ಡ. ಫ್ರೆಂಡ್ಸ್ ಆಫ್‌ ದಿ ಅರ್ತ್‌

6. ‘ಕಡಲಿನ ವೃಷ್ಟಿವನ’ ಎಂದೇ ಖ್ಯಾತವಾಗಿರುವ ಹವಳ ರಾಜ್ಯವೊಂದರ ದೃಶ್ಯ ಚಿತ್ರ–6 ರಲ್ಲಿದೆ. ಹವಳದ ಪ್ರಾಣಿ ಯಾವ ಜೀವಿ ವರ್ಗಕ್ಕೆ ಸೇರಿದೆ?

ಅ. ಸ್ನೈಡೇರಿಯನ್‌

ಬ. ಮೃದ್ವಂಗಿ

ಕ. ಕಂಟಕಚರ್ಮಿ

ಡ. ಕಡಲ ಹುಳು

7. ಅತ್ಯಂತ ಪರಿಚಿತ ಕೀಟ ‘ಪಾತರಗಿತ್ತಿ’ ಚಿತ್ರ–7ರಲ್ಲಿದೆ ಇಲ್ಲಿ ಹೆಸರಿಸಿರುವ ಕೀಟಗಳಲ್ಲಿ ಯಾವುದು ಪಾತರಗಿತ್ತಿಯ ಅತಿ ನಿಕಟ ಸಂಬಂಧಿ?

ಅ. ಜೇನ್ನೊಣ

ಬ. ದುಂಬಿ

ಕ. ಮಿಡತೆ

ಡ. ಪತಂಗ

8. ಸ್ತನಿ ವರ್ಗಕ್ಕೆ ಸೇರಿದ, ತುಂಡು ಸೊಂಡಿಲಿನ ಮರಿ ಆನೆ ರೂಪದ ಪ್ರಾಣಿ ಚಿತ್ರ–8ರಲ್ಲಿದೆ.

ಅ. ಈ ಪ್ರಾಣಿಯ ಹೆಸರೇನು?

ಬ. ಯಾವ ಭೂಖಂಡದಲ್ಲಿ ಇದರ ನೈಸರ್ಗಿಕ ನೆಲೆ ಇದೆ?

9. ವರ್ಣಮಯ ದಿವ್ಯಾಲಂಕರಣಗಳ ಪ್ರಣಯದುಡುಗೆ ಧರಿಸುವ ‘ಸ್ವರ್ಗ ಪಕ್ಷಿ’ಯೊಂದು ಚಿತ್ರ–9ರಲ್ಲಿದೆ. ಈ ಕೆಳಗಿನ ಯಾವ ಹಕ್ಕಿಗೆ ಸಗ್ಗವಕ್ಕಿ ಅತಿ ಹತ್ತಿರದ ಸಂಬಂಧಿ?

ಅ. ನವಿಲು

ಬ. ಕಾಗೆ

ಕ. ಗಿಣಿ

ಡ. ಪಾರಿವಾಳ

10. ಅಮೆಜೋನಿಯಾ ವೃಷ್ಟಿವನದ ಒಂದು ವಿಶಿಷ್ಟ ಮಂಗ ಚಿತ್ರ–10ರಲ್ಲಿದೆ. ‘ಅತ್ಯಂತ ದೊಡ್ಡ ಧ್ವನಿಯ ಮಂಗ’ ಎಂಬ ವಿಶ್ವದಾಖಲೆಯ ಈ ಮಂಗ ಯಾವುದು ಗೊತ್ತೇ?

ಅ. ಜೇಡಕೋತಿ

ಬ. ಉಪಕಾರೀ

ಕ. ಕಪೂಚಿನ್‌

ಡ. ಹೌಲರ್‌

11. ಗೊರಿಲ್ಲಗಳ ನೇರ ಅಧ್ಯಯನ ನಡೆಸಿ, ಅಡವಿಯಲ್ಲೇ ದುಷ್ಟ ಜನರಿಂದ ಕೊಲೆಯಾದ ಧೀಮಂತ ವಿಶ್ವವಿಖ್ಯಾತ ಮಹಿಳಾ ವಿಜ್ಞಾನಿ ಚಿತ್ರ–11 ರಲ್ಲಿದ್ದಾರೆ. ಈ ವಿಜ್ಞಾನಿ–ಸಂಶೋಧಕಿ ಯಾರು?

ಅ. ಡಿಯಾನ್‌ ಫಾಸ್ಸಿ

ಬ. ಜೇನ್‌ ಗುಡ್ಡಾಲ್‌

ಕ. ಗಾಲ್ಡಿಕಾಸ್‌

ಡ. ಮೇರಿ ಕ್ಯೂರೀ

12. ಚಿತ್ರ–12ರಲ್ಲಿರುವ ಪ್ರಾಣಿಯನ್ನು ಗಮನಿಸಿ. ಅದನ್ನು ಗುರುತಿಸಿ:

ಅ. ಹಸಿರು ಹಾವಿನ ಮರಿ

ಬ. ಪತಂಗದ ಮರಿ ಹುಳು

ಕ. ಹಸಿರು ಓತಿ

ಡ. ವಿಷ ಶರೀರದ ಕಪ್ಪೆಮರಿ.

ಉತ್ತರಗಳು:

1. 1–ಕ; 2–ಇ; 3–ಅ; 4–ಈ; 5–ಬ

2. ಬ– ವಿಕ್ಯೂನಾ

3. ಡ– ಗೋಬಿ ಮರುಭೂಮಿ

4. ಅ– ಹ್ಯಾಮರ್‌ ಹೆಡ್‌ ಶಾರ್ಕ್‌

    ಬ– ವ್ಹೇಲ್‌ ಶಾರ್ಕ್

5. ಕ– ವರ್ಲ್ಡ್ ವೈಡ್‌ ಫಂಡ್‌ ಫಾರ್ ನೇಚರ್‌ (ಡಬ್ಲ್ಯೂ.  ಡಬ್ಲ್ಯೂ. ಎಫ್‌).

6. ಅ– ಸ್ನೈಡೇರಿಯನ್‌

7. ಡ– ಪತಂಗ

8. ಅ– ಟೇಪರ್‌; ಬ– ದಕ್ಷಿಣ ಅಮೆರಿಕ

9. ಬ– ಕಾಗೆ

10. ಡ– ಹೌಲರ್‌

11.ಅ– ಡಿಯಾನ್‌ ಫಾಸ್ಸಿ

12. ಬ– ಪತಂಗದ ಮರಿ ಹುಳು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry