ಪ್ರಾಣಿ ಪ್ರಪಂಚ ಎಷ್ಟು ಪರಿಚಿತ?

1. ಚಿತ್ರ–1ರಲ್ಲಿರುವ ಸುಪ್ರಸಿದ್ಧ ಪ್ರಾಣಿಯನ್ನು ಗಮನಿಸಿ. ತೀವ್ರ ಚಳಿಯನ್ನು ಸಹಿಸುವ ಸಾಮರ್ಥ್ಯದ ದೃಢ ಶರೀರದ, ಭಾರೀ ಗಾತ್ರದ ಈ ಪ್ರಾಣಿ ಗೊತ್ತೇ?
ಅ. ಕಾಡೆಮ್ಮೆ ಬ. ಮಸ್ಕ್ ಆಕ್ಸ್
ಕ. ಯಾಕ್ ಡ. ಬೈಸಾನ್
ಇ. ಗೌರ್
2. ತುಂಬ ಪರಿಚಿತವಾದ ದ್ವಿವಿಧ ಹಕ್ಕಿಗಳು ಚಿತ್ರ–2 ಮತ್ತು ಚಿತ್ರ–3ರಲ್ಲಿವೆ. ಈ ಹಕ್ಕಿಗಳನ್ನು ಕೆಳಗಿನ ಪಟ್ಟಿಯಲ್ಲಿ ಗುರುತಿಸಬಲ್ಲಿರಾ?
ಅ. ಬೊಳಿ ಕೊಕ್ಕರೆ ಬ. ರೋಡ್ ರನ್ನರ್
ಕ. ಫೆಮಿಂಗೋ ಡ. ರಣಹದ್ದು
ಇ. ಈಗ್ರೆಟ್ ಈ. ಸೆಕ್ರೆಟರಿ ಹಕ್ಕಿ
ಉ. ಪೆಲಿಕನ್
3. ಹವಳದ ದಿಬ್ಬಗಳಲ್ಲಿನ ವರ್ಣಮಯ, ಅತ್ಯಾಕರ್ಷಕ ಮತ್ಸ್ಯಗಳ ‘ಕಳ್ಳ ಬೇಟೆ’ಯ ಒಂದು ದೃಶ್ಯ ಚಿತ್ರ–4ರಲ್ಲಿದೆ. ಅಂತಹ ಅಪರೂಪದ ಮೀನುಗಳನ್ನು ತಲ್ಲಣಗೊಳಿಸಿ, ಪ್ರಜ್ಞೆ ತಪ್ಪಿಸಿ ಜೀವಂತ ಸಂಗ್ರಹಿಸುವ ಈ ಅಪಾಯಕರ, ವಿನಾಶಕರ ಕೃತ್ಯದಲ್ಲಿ ಬಳಸಲಾಗುವ ಉಗ್ರ ವಿಷಯ ಯಾವುದು?
ಅ. ಸಯನೈಡ್ ಬ. ಪಾದರಸ
ಕ. ಹೈಡ್ರೋಜನ್ ಸಲ್ಪೈಡ್
ಡ. ಎಂಡೋಸಲ್ಫಾನ್
4. ಆಧುನಿಕ ಮಾನವರ, ಎಂದರೆ ನಮ್ಮ, ಪೂರ್ವಜ ಪ್ರಭೇದವೊಂದು ಚಿತ್ರ–5ರಲ್ಲಿದೆ. ಮಾನವ ಪೂರ್ವಜರ ಎಲ್ಲ ಪ್ರಭೇದಗಳಲ್ಲೂ ‘ಅತ್ಯಂತ ಕಡಿಮೆ ಎತ್ತರ’ದ ಈ ವಿಶಿಷ್ಟ’ ಗಿಡ್ಡ ಪ್ರಭೇದ’ ಯಾವುದು?
ಅ. ಹೋಮೋ ಇರೆಕ್ಟಸ್
ಬ. ಹೋಮೋ ಫ್ಲಾರೆಸಿಯೆನ್ಸಿಸ್
ಕ. ಹೋಮೋ ಎರ್ಗಾಸ್ಟರ್
ಡ. ಹೋಮೋ ಸೇಪಿಯಸ್
5. ಕೃಷಿ ಬೆಳೆಗಳನ್ನು ತಿಂದು ಹಾನಿಗೊಳಿಸಿ, ಹಲವಾರು ಜಾಡ್ಯಗಳನ್ನೂ ಹರಡುವ ‘ಪಿಡುಗಿನ ಪ್ರಾಣಿ’ಯೊಂದು ಚಿತ್ರ–6ರಲ್ಲಿದೆ.
ಅ. ಈ ಪಿಡುಗುಕಾರಕ ಯಾವುದು?
ಬ. ಇದು ಯಾವ ಜೀವಿ ವರ್ಗಕ್ಕೆ ಸೇರಿದೆ?
ಕ. ನಮ್ಮ ದೇಶದ ಯಾವ ರಾಜ್ಯದಲ್ಲಿ ಈ ಪಿಡುಗಿನ ಹಾವಳಿ ಗರಿಷ್ಠ ಪ್ರಮಾಣದಲ್ಲಿದೆ?
6. ತಿಮಿಂಗಿಲಗಳ ಒಂದು ಪ್ರಭೇದ– ‘ಗೂನು ಬೆನ್ನಿನ ತಿಮಿಂಗಿಲ’ ಚಿತ್ರ–7ರಲ್ಲಿದೆ. ಇಡೀ ತಿಮಿಂಗಿಲ ವರ್ಗದಲ್ಲಿ ಯಾವ ಲಕ್ಷಣ–ಸಾಮರ್ಥ್ಯ ಈ ಪ್ರಭೇದ ಅತ್ಯಂತ ಪ್ರಸಿದ್ಧ ಗೊತ್ತೇ?
ಅ. ಶರೀರದ ಗಾತ್ರ
ಬ. ವಲಸೆ ಪಯಣದ ವಿಕ್ರಮ
ಕ. ಬಹು ಸಂಕೀರ್ಣ ಶಬ್ದ–ಧ್ವನಿ ಸಂಪರ್ಕ ಕ್ರಮ
ಡ. ದೇಹದ ಬಣ್ಣ
7. ಚಿತ್ರ–8ರಲ್ಲಿರುವ ವಿಶಿಷ್ಟ ಸಾಗರವಾಸಿ ‘ಸ್ಕ್ವಿಡ್’ ಗೊತ್ತಲ್ಲ? ಈ ಪ್ರಾಣಿಯ ಅತ್ಯಂತ ಸನಿಹದ ಸಂಬಂಧಿಗಳ ಈ ಪಟ್ಟಿಯಲ್ಲಿ ಯಾವುದು ಗುಂಪಿಗೆ ಸೇರಿಲ್ಲ?
ಅ. ಅಕ್ಟೋಪಸ್ ಕ. ಕಟ್ಲ್ ಮೀನು
ಬ. ನಕ್ಷತ್ರ ಮೀನು ಡ. ನಾಟಿಲಸ್
8. ಗಾಢ ವರ್ಣಗಳ, ಎದ್ದು ಕಾಣುವ ಶರೀರ ಚಿತ್ತಾರಗಳ ಕಪ್ಪೆಯೊಂದು ಚಿತ್ರ–9 ರಲ್ಲಿದೆ. ಈ ಬಗೆಯ ಕಪ್ಪೆಗಳ–ವಿಷಮಯ ಶರೀರದ ಕಪ್ಪೆಗಳ–ಸೈಸರ್ಗಿಕ ನೆಲೆ ಯಾವುದು?
ಅ. ಭಾರತದ ಪಶ್ಚಿಮ ಘಟ್ಟ ಪ್ರದೇಶ
ಬ. ಮಲೇಶಿಯನ್ ವೃಷ್ಟಿವನ
ಕ. ದಕ್ಷಿಣ ಅಮೆರಿಕದ ಅಮೆಜಾನ್ ಅರಣ್ಯ
ಡ. ಆಫ್ರಿಕದ ಮಳೆಕಾಡು.
9. ಹತ್ತನೇ ಚಿತ್ರದಲ್ಲಿರುವ ಪುರಾತನ ಪ್ರಾಣಿಯನ್ನು ಗಮನಿಸಿ. ಈಗಿನ ಜಗತ್ತಿನ ಯಾವ ಪ್ರಸಿದ್ಧ ಪ್ರಾಣಿಯ ಪೂರ್ವಜರು ಇವು, ಊಹಿಸಬಲ್ಲಿರಾ?
ಅ. ಪ್ಯಾಂಗೋಲಿನ್ ಬ. ಮುಳ್ಳು ಹಂದಿ
ಕ. ಮೊಸಳೆ ಡ. ಮುಂಗುಸಿ
10. ಬಹು ವರ್ಣಗಳ ಸುಂದರ ಗರಿ–ಪುಕ್ಕಗಳ ಹಕ್ಕಿಯೊಂದು ಚಿತ್ರ–11ರಲ್ಲಿದೆ. ಹಕ್ಕಿಗಳ ಪುಕ್ಕ ಗರಿಗಳಿಗೆ ವಿವಿಧ ವರ್ಣಗಳನ್ನೊದಗಿಸುವ ‘ವರ್ಣವಸ್ತು’ಗಳು ಇವುಗಳಲ್ಲಿ ಯಾವುವು?
ಅ. ಮೆಲನಿನ್ ಬ. ಕೆರಟನ್
ಕ. ಪಾರ್ಫೆರಿನ್ ಡ. ಕೆರೋಟಿನಾಯಿಡ್ಸ್
11. ತುಂಬ ಪರಿಚಿತ ಮಾಂಸಾಹಾರಿ ಪ್ರಾಣಿಯೊಂದು ಚಿತ್ರ–12ರಲ್ಲಿದೆ. ಯಾವುದು ಈ ಪ್ರಾಣಿ?
ಅ. ನಾಯಿ ಕ. ನರಿ
ಬ. ತೋಳ ಡ. ಕಿರುಬ
12. ಪ್ರಾಚೀನ ಕಾಲದಲ್ಲಿದ್ದ ದೈತ್ಯ ಪೆಂಗ್ವಿನ್ನೊಡನೆ ಹೋಲಿಸಿದಂತೆ ಈಗಿನ ಅತ್ಯಂತ ದೊಡ್ಡ ಮತ್ತು ಅತ್ಯಂತ ಪುಟ್ಟ ಪೆಂಗ್ವಿನ್ ಪ್ರಭೇದಗಳನ್ನು ಚಿತ್ರ–13 ರಲ್ಲಿ ತೋರಿಸಿದೆ. ಈಗಿನ ಈ ಎರಡೂ ಪ್ರಭೇದಗಳನ್ನು ಕೇಳಗಿನ ಪಟ್ಟಿಯಲ್ಲಿ ಗುರುತಿಸಿ:
ಅ. ಅಡೆಲೀ ಪೆಂಗ್ವಿನ್
ಬ. ಕಿಂಗ್ ಪೆಂಗ್ವಿನ್
ಕ. ಫೇರೀ ಪೆಂಗ್ವಿನ್ ಡ. ಜೆಂಟೂ ಪೆಂಗ್ವಿನ್
ಇ. ಎಂಪರರ್ ಪೆಂಗ್ವಿನ್
13. ಸುಪ್ರಸಿದ್ಧ ಪ್ರಾಣಿ ‘ಶಾರ್ಕ್’ನ ಒಂದು ವಿಧ ಚಿತ್ರ–14ರಲ್ಲಿದೆ:
ಅ. ಶಾರ್ಕ್ಗಳು ಯಾವ ಪ್ರಾಣಿ ವರ್ಗಕ್ಕೆ ಸೇರಿವೆ?
ಬ. ಅತ್ಯಂತ ದೈತ್ಯಗಾತ್ರದ ಶಾರ್ಕ್ ಯಾವುದು?
ಕ. ಅತ್ಯಂತ ಉಗ್ರ ಬೇಟೆಗಾರ ಶಾರ್ಕ್ ಯಾವುದು?
14. ಹೊಂದಿಸಿ ಕೊಡಿ:
1. ಗವಿಯಲ್ ಅ. ಹಕ್ಕಿ
2. ಥಾರ್ನೀ ಡೆವಿಲ್ ಬ. ಮೀನು
3. ಆರಿಯೋಲ್ ಕ. ಸರೀಸೃಪ
4. ಮುಳ್ಳು ಹಂದಿ ಡ. ಜೇಡ
5. ಟರಾಂಟ್ಯುಲಾ ಇ. ಮೊಸಳೆ
6. ಸ್ವೀಟ್ ಲಿಪ್ಸ ಈ. ಸ್ತನಿ
ಉತ್ತರಗಳು
1. ಕ. ಯಾಕ್
2. ಚಿತ್ರ–2. ಈಗ್ರೇಟ್; ಚಿತ್ರ–3 ರೋಡ್ ರನ್ನರ್
3. ಅ. ಸಯನೈಡ್
4. ಬ. ಹೋಲೋ ಫಾರೆಸಿಯೆನ್ಸಿಸ್
5. ಅ. ‘ಬಸವನ ಹುಳು’;
ಬ. ಮೃದ್ವಂಗಿ; ಕ. ಕೇರಳ
6. ಕ. ಶಬ್ದ–ಧ್ವನಿ ಸಂಪರ್ಕ
7. ಬ. ನಕ್ಷತ್ರ ಮೀನು
8. ಕ. ಅಮೇಜಾನ್ ಅರಣ್ಯ
9. ಅ. ಪ್ಯಾಂಗೋಲಿನ್
10. ಅ. ಕ. ಮತ್ತು ಡ.
11. ಡ. ಕಿರುಬ
12. ಅತ್ಯಂತ ದೊಡ್ಡದು. ಎಂಪರರ್ ಪೆಂಗ್ವಿನ್ ಅತ್ಯಂತ ಚಿಕ್ಕದು. ಫೇರೀ ಪೆಂಗ್ವಿನ್
13. ಅ. ಮತ್ಸ್ಯ ವರ್ಗ; ಕ. ದಿ ಗ್ರೇಟ್ ವೈಟ್; ಬ. ವ್ಹೇಲ್ ಶಾರ್ಕ್.
14. 1–ಇ; 2–ಕ; 3–ಅ; 4–ಈ; 5–ಡ; 6–ಬ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.