ಪ್ರಾಣಿ ಬೇಟೆಗೆ ಹೊಂಚು;9 ಆರೋಪಿಗಳ ಬಂಧನ

7

ಪ್ರಾಣಿ ಬೇಟೆಗೆ ಹೊಂಚು;9 ಆರೋಪಿಗಳ ಬಂಧನ

Published:
Updated:
ಪ್ರಾಣಿ ಬೇಟೆಗೆ ಹೊಂಚು;9 ಆರೋಪಿಗಳ ಬಂಧನ

ಕಡೂರು:  ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಪಂಚನಹಳ್ಳಿ ಹೋಬಳಿ  ತಿಮ್ಲಾಪುರ-ಬಿಟ್ಟೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಹೊಂಚುಹಾಕುತ್ತಿದ್ದ ಹಾಸನ ಜಿಲ್ಲೆ ಅಲೂರು ಮೂಲದ 9 ಆರೋಪಿಗಳನ್ನು ಪಂಚನಹಳ್ಳಿ ಪೊಲೀಸರು ಭಾನುವಾರ ತಡರಾತ್ರಿ ಬಂಧಿಸಿದರು.ಬೇಟೆಗಾರರ ತಂಡ ತಂದಿದ್ದ ಟಾಟಾ ಸುಮೊ, 4 ನಾಡಕೋವಿ, 2 ಕತ್ತಿ, ಬ್ಯಾಟರಿ, ಮದ್ದು ಗುಂಡು ಹಾಗೂ 8 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಕಡೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನಂತರ ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು ಎಂದು ಸಬ್ ಇನ್ಸ್‌ಪೆಕ್ಟರ್ ಗೀತಾಬಾಯಿ ಪ್ರಜಾವಾಣಿಗೆ ವಿವರ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry