ಪ್ರಾಣ ದೇವರು ಗೋವಿನದಿನ್ನೇಶ ಜಾತ್ರೆ ಇಂದು

7

ಪ್ರಾಣ ದೇವರು ಗೋವಿನದಿನ್ನೇಶ ಜಾತ್ರೆ ಇಂದು

Published:
Updated:
ಪ್ರಾಣ ದೇವರು ಗೋವಿನದಿನ್ನೇಶ ಜಾತ್ರೆ ಇಂದು

ಬೀಳಗಿ: ತಾಲ್ಲೂಕಿನ ಗೋವಿನದಿನ್ನಿ, ಟಕ್ಕಳಕಿ, ಕೊರ್ತಿ ಪುನರ್ವಸತಿ ಕೇಂದ್ರಗಳಲ್ಲೆಗ ಗೋವಿನದಿನ್ನಿಯ ಪ್ರಾಣ ದೇವರು ಗೋವಿನದಿನ್ನೇಶ ಜಾತ್ರೆ ಏ. 18ರಂದು ಸಂಜೆ ನಡೆಯಲಿದೆ.

ಅಂದಿನ ಮುಧೋಳ ಸಂಸ್ಥಾನಿಕರ ಆಳ್ವಿಕೆಗೊಳಪಟ್ಟಿದ್ದ ಈ ಪ್ರದೇಶದಲ್ಲಿ ಸುಮಾರು 36ಎಕರೆಯಷ್ಟು ಜಮೀನನ್ನು ಮುಧೋಳದ ಘೋರ್ಪಡೆ ಮಹಾರಾಜರು ದೇವಸ್ಥಾನಕ್ಕೆ ದಾನರೂಪವಾಗಿ ಕೊಟ್ಟಿದ್ದಾರೆಂದು ದಾಖಲೆಗಳು ಹೇಳುತ್ತವೆ. 1630ರಲ್ಲಿ ಪ್ರಾಣ ದೇವರಿಗೆ ದೇವಾಲಯ ಒಂದನ್ನು ನಿರ್ಮಿಸಲಾಯಿತೆಂದು ಹೇಳಲಾಗುತ್ತಿದೆ.

 

ಕೃಷ್ಣಾ ಮೇಲ್ದಂಡೆ ಯೋಜನೆಯಡಿ 36ಎಕರೆ ಜಮೀನಿನ ಮಾಲೀಕ ಗೋವಿನದಿನ್ನೇಶನೂ ತನ್ನ ಜಮೀನು, ದೇವಾಲಯ ಎಲ್ಲವನ್ನೂ ಕಳೆದುಕೊಂಡು ಈಗ ಬೀಳಗಿಯಿಂದ ಪೂರ್ವಕ್ಕೆ 2ಕಿ.ಮೀ.ಅಂತರದಲ್ಲಿರುವ ಗೋವಿನದಿನ್ನಿ ಪುನರ್ವಸತಿ ಕೇಂದ್ರದಲ್ಲಿ ಭವ್ಯವಾದ ದೇವಾಲಯದಲ್ಲಿ ಗ್ರಾಮಸ್ಥರ ನಿರಂತರ ಯತ್ನದಿಂದ ಪ್ರತಿಷ್ಠಾಪಿತನಾಗಿದ್ದಾನೆ. ಭಕ್ತರು ಸ್ವಾಮಿಗೆ ನಿರ್ಮಿಸಿದ ಅಂದವಾದ ರಥವನ್ನು ಆತನಿಗೆ ಸಮರ್ಪಿಸಲು ಉತ್ತರಾದಿ ಮಠದ ಸ್ವಾಮೀಜಿಯವರೇ ಕಳೆದ ವರ್ಷ ಆಗಮಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry