ಭಾನುವಾರ, ಮೇ 9, 2021
19 °C

ಪ್ರಾದೇಶಿಕ ಅಭಿವೃದ್ಧಿ ಕೇಂದ್ರ ಆರಂಭ

ಪ್ರಜಾವಾಣಿ ವಾರ್ತೆ/ ಶಿವರಂಜನ್ ಸತ್ಯಂಪೇಟೆ Updated:

ಅಕ್ಷರ ಗಾತ್ರ : | |

ಪ್ರಾದೇಶಿಕ ಅಭಿವೃದ್ಧಿ ಕೇಂದ್ರ ಆರಂಭ

ಗುಲ್ಬರ್ಗ: ಈ ಭಾಗದ ಶೈಕ್ಷಣಿಕ ಗುಣಮಟ್ಟವನ್ನು ಎತ್ತರಿಸುವ ಮೂಲಕ ಸೆಪ್ಟೆಂಬರ್ 1980ರಲ್ಲಿ ಗುಲ್ಬರ್ಗದಲ್ಲಿ ಸ್ಥಾಪಿಸಲಾಗಿರುವ ವಿಶ್ವವಿದ್ಯಾಲಯ ಗುರುವಾರ 32ನೇ ಸಂಸ್ಥಾಪನಾ ದಿನ ಆಚರಿಸಿಕೊಳ್ಳುತ್ತಿದೆ.ಆರಂಭದಿಂದ ಇಲ್ಲಿಯವರೆಗೆ ಡಾ. ಎಂ. ನಾಗರಾಜ, ಡಾ. ಹಾಮಾನಾ, ಪ್ರೊ. ಚಲುವರಾಜ, ಡಾ. ಎನ್.ರುದ್ರಯ್ಯ, ಡಾ. ಮುನಿಯಮ್ಮ, ಡಾ. ಎಂ.ವಿ. ನಾಡಕರ್ಣಿ, ಡಾ. ವಿ.ಬಿ. ಕುಟಿನ್ಹೊ, ಡಾ. ಬಿ.ಜಿ. ಮೂಲಿಮನಿ ಮತ್ತು ಈಗಿನ ಪ್ರೊ. ಈ.ಟಿ. ಪುಟ್ಟಯ್ಯ ಸೇರಿದಂತೆ  9 ಕುಲಪತಿಗಳು ಆಡಳಿತ ನಡೆಸಿದ್ದಾರೆ.ಈಗಿನ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಅವರ ಒಂದೂವರೆ ವರ್ಷದ ಅಧಿಕಾರಾವಧಿಯಲ್ಲಿ ಏನೇನು ಕೆಲಸಗಳಾಗಿವೆ ಎಂಬುದರ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ್ದಾರೆ.ಪರಿಸರ ವಿಜ್ಞಾನ, ಟೆಲಿವಿಷನ್, ಅನಿಮೇಷನ್ ಹೀಗೆ ಹಲವಾರು ಹೊಸ ಕೋರ್ಸ್‌ಗಳನ್ನು ಆರಂಭಿಸುವುದರ ಜೊತೆಗೆ ಸುಮಾರು 850 ಎಕರೆ ಪ್ರದೇಶದ ವಿಸ್ತಾರ ಹೊಂದಿದ ವಿಶ್ವವಿದ್ಯಾಲಯದ ಪರಿಸರವನ್ನು ಅಂದಗೊಳಿಸುವ ಕಾರ್ಯ ಜರುಗಿದೆ. ಇಲ್ಲಿನ ಪರಿಸರವನ್ನು ಸುಸ್ಥಿತಿಯಲ್ಲಿಡುವ ಉದ್ದೇಶದಿಂದ ಹತ್ತು ಸಾವಿರ ಸಸಿಗಳನ್ನು ನೆಡಲಾಗಿದೆ. ತ್ಯಾಜ್ಯವಸ್ತುಗಳನ್ನು ಎರೆಹುಳು ಘಟಕಕ್ಕೆ ನೀಡುವ ಮೂಲಕ ಅದರ ಮರುಬಳಕೆ ಮಾಡಲಾಗುತ್ತಿದೆ. ವಿವಿಯಲ್ಲಿ ಸ್ಥಾಪಿಸಲಾಗಿರುವ ಬಯೋಡೀಸಿಲ್ ಪಾರ್ಕ್‌ಗಾಗಿ ಸುಮಾರು ನೂರು ಎಕರೆ ಜಾಗದಲ್ಲಿ ಜತ್ರೊಪಾ, ಹೊಂಗೆ ಮುಂತಾದ ತೈಲ ಉತ್ಪಾದಿತ ಮರಗಳನ್ನು ಬೆಳೆಸಲಾಗುತ್ತಿದೆ.ಅಂತರರಾಷ್ಟ್ರೀಯ ಮಟ್ಟದ ಈಜುಕೊಳ, ಅಮೆರಿಕದ ಕೊಲರಡೋ ಸ್ಟೇಟ್ ವಿವಿಯ ಜೊತೆ ಸೇರಿ ವಿಶ್ವವಿದ್ಯಾಲಯದಲ್ಲಿ ಆಹಾರ, ನೀರು, ಶಕ್ತಿ ಉತ್ಪಾದನೆಗೆ ಸಂಬಂಧಿಸಿದಂತೆ ಸಂಸ್ಥೆ ಆರಂಭಿಸುವುದಕ್ಕಾಗಿ 116 ಕೋಟಿ ರೂಪಾಯಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸದ್ಯದಲ್ಲೇ ಅವುಗಳನ್ನು ಆರಂಭಿಸಲಾಗುವುದು.ಹೊಸದಾಗಿ ಪ್ರವೇಶ ಪಡೆದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಚಾಯ್ಸ, ವೇಸ್ಟ್, ಕ್ರೆಡಿಟ್ ಎಂಬ ವಿನೂತನ ಯೋಜನೆಯನ್ನು ರೂಪಿಸಲಾಗಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಈ ಯೋಜನೆ ನೆರವಾಗಲಿದೆ.ವಿಶ್ವವಿದ್ಯಾಲಯದಲ್ಲಿರುವ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ದೇಶಕ್ಕೆ ಮಾದರಿಯಾಗಿದ್ದು, ಸುಮಾರು ಮೂರೂವರೆ ಲಕ್ಷ ಪುಸ್ತಕಗಳ ಮಾಹಿತಿ ಇಲ್ಲಿ ದೊರೆಯುತ್ತಿದೆ. ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಲಾಭ ಪಡೆಯಲಿದ್ದಾರೆ.ಹೀಗೆ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗೆ ಸಂಬಂಧಿಸಿದಂತೆ ಅಲ್ಲಿಂದ ಇಲ್ಲಿಯವರೆಗೆ ಸಾಕಷ್ಟು ಪ್ರಗತಿ ಕಂಡಿದ್ದರೂ ಆಡಳಿತಾತ್ಮಕವಾಗಿ ಮತ್ತು ಅಭಿವೃದ್ಧಿ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ಕೊರತೆ ಹಾಗೂ ಅವ್ಯವಸ್ಥೆಯನ್ನು ವಿಶ್ವವಿದ್ಯಾಲಯದಲ್ಲಿ ಕಾಣಬಹುದು ಎಂಬುದು ಇಲ್ಲಿನ ಸಂಶೋಧನಾ ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.