ಪ್ರಾಧಿಕಾರದ ಪ್ರಶಸ್ತಿ ಪ್ರದಾನ

7
ಬೌದ್ಧಿಕ ಸಾಮ್ರಾಜ್ಯ ವಿಸ್ತರಣೆಗೆ ಕೊಡುಕೊಳ್ಳುವಿಕೆ; ಜಿ. ರಾಮಕೃಷ್ಣ ಅಭಿಮತ

ಪ್ರಾಧಿಕಾರದ ಪ್ರಶಸ್ತಿ ಪ್ರದಾನ

Published:
Updated:
ಪ್ರಾಧಿಕಾರದ ಪ್ರಶಸ್ತಿ ಪ್ರದಾನ

ಮೈಸೂರು: ‘ಕನ್ನಡದಿಂದ ಅನ್ಯಭಾಷೆ ಗಳಿಗೆ ಹಾಗೂ ಅನ್ಯಭಾಷೆಗಳಿಂದ ಕನ್ನಡಕ್ಕೆ ಅನುವಾದಿಸುವ ಕೊಡುಕೊಳ್ಳು ವಿಕೆಯಿಂದ ನಮ್ಮ ಬೌದ್ಧಿಕ ಸಾಮ್ರಾಜ್ಯ ವಿಸ್ತರಿಸಿಕೊಳ್ಳೋಣ’ ಎಂದು ಸಾಹಿತಿ ಡಾ.ಜಿ. ರಾಮಕೃಷ್ಣ ಸಲಹೆ ನೀಡಿದರುಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ನಗರದ ರಾಣಿ ಬಹದ್ದೂರು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 2014ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ 2013ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಮಾಡಿ ಅವರು ಮಾತನಾಡಿದರು.ಅನೇಕ ವರ್ಷಗಳ ಹಿಂದೆ ಕಾವ್ಯ, ಕಾದಂಬರಿಗಳನ್ನು ಮಾತ್ರ ಅನುವಾದಿಸುವುದು ಹೆಚ್ಚಿತ್ತು. ಈಚಿನ ದಶಕಗಳಲ್ಲಿ ವಿವಿಧ ಸಾಹಿತ್ಯ ಪ್ರಕಾರಗಳು ಕನ್ನಡಕ್ಕೆ ಹಾಗೂ ಕನ್ನಡದಿಂದ ಅನ್ಯಭಾಷೆಗಳಿಗೆ ಅನುವಾದ ಕಾರ್ಯ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಪರಿಕರವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಜಾಗತಿಕ ಮಟ್ಟದ ಶ್ರೇಷ್ಠ ಸಾಹಿತ್ಯ ನಮ್ಮಲ್ಲಿದೆ. ಆದರೆ, ಜಗತ್ತಿಗೆ ತಿಳಿಸುವ ಸಂದರ್ಭ ರಚಿಸಿಕೊಂಡಿಲ್ಲ. ಇದರಿಂದ ಯಾರೂ ಗುರುತಿಸಿಲ್ಲ ಎನ್ನುವ ಕೊರಗು ಇದೆ. ಇದರೊಂದಿಗೆ ಕನ್ನಡ ಸಾಹಿತ್ಯದಲ್ಲಿ ಧೀಮಂತ ಕೆಲಸ ಮಾಡಿದವರಿದ್ದಾರೆ. ಆದರೆ, ನಮ್ಮ ಸಾಹಿತಿಗಳಿಗೆ ನೊಬೆಲ್ ಪ್ರಶಸ್ತಿ ಬಂದಿಲ್ಲವೆಂದರೆ ಜಗತ್ತಿಗೆ ಸರಿಯಾಗಿ ಅನುವಾದಿಸಿಲ್ಲ ಎನ್ನುವ ವಾದವೂ ಇದೆ. ಬೇರೆ ಭಾಷೆಗಳವರು ನಮ್ಮ ಸಾಹಿತ್ಯವನ್ನು ಅನುವಾದಿಸಿ  ಕೊಂಡಿಲ್ಲ ಎಂದಾದರೆ, ನಾವೇ ಅನುವಾದಿಸಿಕೊಡಬೇಕೆ? ಜಾಗತಿಕ ಮಟ್ಟದ ಶ್ರೇಷ್ಠವೆಂದು ತೀರ್ಮಾನಿಸು ವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಸಿಎನ್‌ಆರ್‌ ರಾವ್‌ ಅವರು ನ್ಯಾನೊ ತಂತ್ರಜ್ಞಾನ ಕುರಿತು ಕನ್ನಡದಲ್ಲಿ ಕೃತಿಯನ್ನು ಈಚೆಗೆ ಪ್ರಕಟಿಸಿದ್ದಾರೆ. ಆದರೆ, ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ವಿಜ್ಞಾನ ವಿಷಯವನ್ನು ಕಲಿಸಲು ಕಷ್ಟವಾಗುತ್ತದೆ ಎನ್ನುವ  ಪ್ರಾಧ್ಯಾಪಕರು ಇದ್ದಾರೆ. ಇದಕ್ಕಾಗಿ ಕನ್ನಡದಲ್ಲಿ ವಿಜ್ಞಾನವನ್ನು ಕಲಿಸುವ ಕಾರ್ಯ ಹೆಚ್ಚಬೇಕು ಎಂದರು.ನಂತರ ಸಾಹಿತಿ ರಾಜೇಂದ್ರ ಚೆನ್ನಿ ಮಾತನಾಡಿದರು. ಪ್ರಾಧಿಕಾರ ರಿಜಿಸ್ಟ್ರಾರ್ ಆರ್.ಎನ್‌. ಸುಶೀಲಾ ವಂದಿಸಿದರು. ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry