ಪ್ರಾಮಾಣಿಕತೆ ಅಳವಡಿಕೆಗೆ ಸಲಹೆ

7

ಪ್ರಾಮಾಣಿಕತೆ ಅಳವಡಿಕೆಗೆ ಸಲಹೆ

Published:
Updated:

ಹುಬ್ಬಳ್ಳಿ: ‘ಎಂಜಿನಿಯರ್‌ಗಳು ವೃತ್ತಿ ಬದುಕಿನಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ಪರಿಶ್ರಮ ರೂಢಿಸಿಕೊಂಡರೆ ಸರ್.ಎಂ.ವಿಶ್ವೇಶ್ವರಯ್ಯ ಅವರಂತೆ ಉನ್ನತ ಸಾಧನೆ ಮಾಡಬಹುದು’ ಎಂದು ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಸಂಜೀವ ಮಿತ್ತಲ್‌ ಅಭಿಪ್ರಾಯಪಟ್ಟರು.



ಇಲ್ಲಿನ ಬಿ.ವಿ.ಬಿ.ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಭಾನುವಾರ ಅಸೋಸಿ­ಯೇಶನ್‌ ಆಫ್‌ ಕನ್ಸಲಿ್ಟಂಗ್‌ ಎಂಜಿನಿ­ಯರ್ಸ್ ಸಂಸ್ಥೆ (ಎಸಿಸಿಇ) ಆಶ್ರಯ­ದಲ್ಲಿ ನಡೆದ ಎಂಜಿನಿಯರ್‌ಗಳ ದಿನಾ­ಚರಣೆ ಹಾಗೂ ಸರ್‌ ಎಂ.ವಿಶ್ವೇಶ್ವ­ರಯ್ಯ ಅವರ 153ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.



‘ವಿಶ್ವೇಶ್ವರಯ್ಯ ಅವರ ನಂತರ ದೇಶದಲ್ಲಿ ಮತ್ತೊಬ್ಬ ಅಂತಹ ಎಂಜಿನಿ­ಯರ್‌ ಹುಟ್ಟಲಿಲ್ಲ ಎಂಬ ಮಾತು ಸರಿಯಲ್ಲ. ಮೇಲಿನ ಗುಣಗಳನ್ನು ಅಳವಡಿಸಿಕೊಂಡಲ್ಲಿ ಪ್ರತಿಯೊಬ್ಬರೂ ವಿಶ್ವೇಶ್ವ­ರಯ್ಯ ಆಗಬಹುದು. ದೆಹಲಿ ಮೆಟ್ರೋ ರೈಲು ಯೋಜನೆ ಹಾಗೂ ಕೊಂಕಣ ರೈಲ್ವೆ ಯೋಜನೆ ಅನು­ಷ್ಠಾನಕ್ಕೆ ತಂದ ಇ.ಶ್ರೀಧರನ್‌ ಆಧುನಿಕ ಭಾರತದಲ್ಲಿ ಅಂತಹದ್ದೇ ಸಾಧನೆ­ಗಳನ್ನು ಮಾಡಿದ್ದಾರೆ’ ಎಂದರು.



ಸರ್ಕಾರಿ ವ್ಯವಸ್ಥೆಯಲ್ಲಿನ ಎಲ್ಲಾ ಅಡೆ–ತಡೆಗಳನ್ನು ನಿವಾರಿಸಿಕೊಂಡು, ನಿಧಾನಗತಿಯ ತೀರ್ಮಾನಗಳನ್ನು ಸಹಿ­ಸಿ­ಕೊಂಡು ಆಧುನಿಕ ತಾಂತ್ರಿಕತೆ­ಯನ್ನು ಅಳವಡಿಸುವ ಮೂಲಕ ಕೃಷ್ಣನ್‌ ಆ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.



ವಿಶ್ವೇಶ್ವರಯ್ಯ ಅವರ ಕ್ರಿಯಾಶಕ್ತಿಗೆ ಕೃಷ್ಣರಾಜ ಅಣೇಕಟ್ಟೆಯೇ ಸಾಕ್ಷಿ. ಆಗ ಸಂಪೂರ್ಣ ದೇಸಿ ತಂತ್ರ­ಜ್ಞಾನ ಬಳಸಿ ಕೇವಲ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದರು. ಆಗಿನ ಸರ್ಕಾರ ಕೇವಲ 80 ಅಡಿ ಎತ್ತರದ ಅಣೇಕಟ್ಟು ಕಟ್ಟಲು ಮಾತ್ರ ಹಣ ಹೊಂದಿಸಲು ಶಕ್ತವಾಗಿತ್ತು. ಅದರಿಂದ ಭವಿಷ್ಯದಲ್ಲಿ ಯಾವುದೇ ಉಪಯೋಗ­ವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಟ್ಟ ವಿಶ್ವೇಶ್­ವರಯ್ಯ ಸರ್ಕಾರಿ ಬಾಂಡ್‌ಗಳ ಮೂಲಕ ಹಣ ಸಂಗ್ರಹಿಸಿ 130 ಅಡಿ ಎತ್ತರದ ಅಣೇಕಟ್ಟು ಕಟ್ಟಿದರು ಎಂಬುದನ್ನು ಮಿತ್ತಲ್‌ ಸ್ಮರಿಸಿದರು.



ಉದ್ಯಮಿ ಡಾ.ವಿ.ಎಸ್.ವಿ. ಪ್ರಸಾದ್‌, ಸಿವಿಲ್‌ ಎಂಜಿನಿಯ­ರಿಂಗ್‌ ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲಿ ಮಹಿಳೆ­ಯರೂ ಆಸಕ್ತಿ ತೋರುತ್ತಿರುವುದು ಸಕಾರಾತ್ಮಕ ಬೆಳವಣಿಗೆ ಎಂದರು.



ಹುಬ್ಬಳ್ಳಿ ಭಾಗದಲ್ಲಿ ಸಿವಿಲ್ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಅತ್ಯಾಧುನಿಕ ಪ್ರಯೋಗ ಶಾಲೆ ಇಲ್ಲವಾ­­ಗಿದೆ. ಎಲ್ಲಾ ತಾಂತ್ರಿಕ ಅಂಶ­ಗಳನ್ನು ಒಳ­ಗೊಂಡ ಪ್ರಯೋಗಶಾಲೆ ಆರಂಭಕ್ಕೆ ಅಸೋಸಿ­ಯೇಶನ್‌ ಆಫ್‌ ಕನ್ಸಲಿ್ಟಂಗ್‌ ಎಂಜಿನಿಯರ್ಸ್ ಸಂಸ್ಥೆ ಮುಂದಾಗಲಿ. ಮುಂದಿನ ವರ್ಷ ಎಂಜಿನಿಯ­ರ್‌ಗಳ ದಿನಾಚರಣೆ ವೇಳೆಗೆ ಪ್ರಯೋಗ ಶಾಲೆ ಸ್ಥಾಪನೆಯಾಗಲಿ ಎಂದು ಹಾರೈಸಿದರು.



ಇದೇ ಸಂದರ್ಭದಲ್ಲಿ ಹಿರಿಯ ಎಂಜಿನಿಯರ್‌­ಗಳಾದ ಎಂ.ಆರ್‌.­ಪಾಟೀಲ ಹಾಗೂ ಆರ್.ಬಿ.­ಸಾಲಿ ಅವರನ್ನು ಎಸಿಸಿಇ ವತಿಯಿಂದ ಸನ್ಮಾನಿಸ­ಲಾಯಿತು. ಸಮಾರಂಭದಲ್ಲಿ ಇಸ್ಕಾನ್‌ ಸಂಸ್ಥೆಯ ಅಧ್ಯಕ್ಷ ರಾಜೀವ ಲೋಚನ­ದಾಸ, ಎಸಿಸಿಇ ಅಧ್ಯಕ್ಷ ಸುರೇಶ ಕಿರೇಸೂರ, ಜೇಪಿ ಸಿಮೆಂಟ್ಸ್ ನ ವಿ.­ಗಣೇಶ್, ಎಸಿಸಿ ಸಿಮೆಂಟ್ಸ್‌ನ ಸುನಿಲ್‌ ಶಿಂಧೆ, ಎಸಿ­ಸಿಇ ಪದಾಧಿಕಾರಿ­ಗಳಾದ ಅಶೋಕ ಬಸವಾ, ಎಸ್.ಎಂ.­­ಶಿರೂರ, ವಸಂತ ನಾಡಜೋಶಿ, ಜಯಶ್ರೀ ಗರಗದ, ಎನ್‌.ಎ.­ಪಾಠಕ್, ಎನ್‌.­ಎಸ್‌. ­ನಾಡಿಗೇರ, ಎಸ್‌.ಪಿ.­ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry