ಸೋಮವಾರ, ಏಪ್ರಿಲ್ 19, 2021
31 °C

ಪ್ರಾಮಾಣಿಕತೆ ಮೆರೆದ ಯೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಚಿತ್ರದುರ್ಗ: ಜಿಲ್ಲೆಯಾದ್ಯಂತ ರಂಜಾನ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಆತ್ಮಶುದ್ಧೀಕರಣ, ಸನ್ನಡತೆಗೆ ಮಾರ್ಗ ತೋರಿಸುವ `ರಂಜಾನ್~ ಮುಸ್ಲಿಂ ಸಮುದಾಯಕ್ಕೆ ಪವಿತ್ರ ತಿಂಗಳು. ಈ ಪವಿತ್ರ ತಿಂಗಳಿನಲ್ಲಿ ಮುಸ್ಲಿಮರು ಉಪವಾಸ ವ್ರತ ಅತ್ಯಂತ ಮಹತ್ವದ್ದು. ಈ ವ್ರತ ಅಂತ್ಯಗೊಳಿಸುವ ಮೂಲಕ ಸೋಮವಾರ ರಂಜಾನ್‌ಆಚರಿಸಲಾಯಿತು.ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಹಿರಿಯೂರು ವರದಿ

ಬಡವ-ಬಲ್ಲಿದರೆಂಬ ವ್ಯತ್ಯಾಸವಿಲ್ಲದೆ, ನೋವು ಮರೆತು ಎಲ್ಲರೂ ಸಂತಸದಿಂದ ಆಚರಿಸುವ ಮೂಲಕ ಪರಸ್ಪರ ಸಹಕರಿಸುವ ಪವಿತ್ರ ಹಬ್ಬ ರಂಜಾನ್ ಎಂದು ಮುಸ್ಲಿಂ ಧರ್ಮಗುರು ಸಫೀವುಲ್ಲಾ ರೆಹಮಾನ್ ತಿಳಿಸಿದರು.

ನಗರದ ಜಾಮೀಯಾ ಮಸೀದಿಯಲ್ಲಿ ರಂಜಾನ್ ಉಪವಾಸ ಆರಂಭದ ದಿನದಿಂದ ಧರ್ಮ ಬೋಧನೆ ಮಾಡಿದ್ದ ಅವರು, ಸೋಮವಾರ ತಾಲ್ಲೂಕು ಕಚೇರಿ ಪಕ್ಕದ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಆಗಮಿಸಿದ್ದ ಮುಸ್ಲಿಂ ಬಾಂಧವರಿಗೆ ಹಬ್ಬದ ಸಂದೇಶ  ನೀಡಿದರು.ಜಾಮಿಯಾ ಮಸೀದಿಯ ಗುರು ಸಿಗ್ಬತ್‌ಉಲ್ಲಾ, ಶಾಸಕ ಡಿ. ಸುಧಾಕರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್, ಮುಖಂಡರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.ಹೊಳಲ್ಕೆರೆ ವರದಿ

ಪಟ್ಟಣದಲ್ಲಿ ಸೋಮವಾರ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ರಂಜಾನ್ ಆಚರಿಸಿದರು.

ದಾವಣಗೆರೆ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ನೂರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡಿದರು. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಶಾಸಕ ಎಂ. ಚಂದ್ರಪ್ಪ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿ, ಭಾರತ ಸರ್ವಧರ್ಮ ಸಮನ್ವಯದ ದೇಶವಾಗಿದ್ದು, ಇಲ್ಲಿ ಎಲ್ಲರೂ ಸಹೋದರರಂತೆ ಬಾಳಬೇಕು. ರಾಮಾಯಣ, ಮಹಾಭಾರತ, ಕುರಾನ್, ಬೈಬಲ್ ಗ್ರಂಥಗಳು ಮಾನವನ ಜೀವನದ ಮೌಲ್ಯಗಳ ಬಗ್ಗೆ ಹೇಳುತ್ತವೆ. ಜನಿಸಿದ ಮಣ್ಣಿನ ಋಣ ತೀರಿಸುವುದು ಪ್ರತಿವ್ಯಕ್ತಿಯ ಕರ್ತವ್ಯ ಎಂದರು.ಮೊದಲು ಇಲ್ಲಿನ ಈದ್ಗಾ ಮೈದಾನದಲ್ಲಿ ಯಾವುದೇ ಸೌಲಭ್ಯಗಳು ಇರಲಿಲ್ಲ. ಮುಳ್ಳಿನ ಪೊದೆಗಳನ್ನು ನಸುಳಿ ಹೋಗಿ ಪ್ರಾರ್ಥನೆ ಮಾಡುವ ಪರಿಸ್ಥಿತಿ ಇತ್ತು. ಇದನ್ನು ಮನಗಂಡು ರೂ 50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ, ಹೂವಿನ ಸಸಿಗಳನ್ನು ಹಾಕಿಸಿದ್ದೇನೆ. 2,500 ವಿಶೇಷ ಹೂಗಿಡಗಳನ್ನು ಹಾಕಿದ್ದು, ಮುಂದಿನ ವರ್ಷ ಇದು ನಂದನವನ ಆಗಲಿದೆ ಎಂದರು.ಮಾಜಿ ಶಾಸಕ ಎಚ್. ಆಂಜನೇಯ ಮಾತನಾಡಿ, ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.

ಬುರಾನ್ ಬೇಗ್, ಮುತುವಲ್ಲಿಗಳಾದ ಅಲ್ತಾಫ್ ಹುಸೇನ್ ಬೇಗ್, ಮಹಮದ್ ಖಾನ್, ಸಯದ್ ಹಸನ್ ಮಿಯಾ, ಸಯದ್ ಮುಸ್ತಪಾ, ಮಹಮದ್ ಹಯಾತ್, ಇನಾಯತ್ ಉಲ್ಲಾ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.ಹೊಸದುರ್ಗ ವರದಿ

ರಂಜಾನ್ ಅಂಗವಾಗಿ ಮುಸ್ಲಿಂ ಬಾಂಧವರು ಪಟ್ಟಣದ ವಿವಿಧೆಡೆ ಪ್ರಾರ್ಥನೆ ಸಲ್ಲಿಸಿ, ಎಲ್ಲಾ ಧರ್ಮದವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ಶಾಸಕ ಗೂಳಿಹಟ್ಟಿ ಡಿ. ಶೇಖರ್, ಪುರಸಭೆ ಸದಸ್ಯ ಶೀತಲ್ ಕುಮಾರ್ ಪಾಲ್ಗೊಂಡರು. ಹೊಳಲ್ಕೆರೆ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮಾಹಿಕ ಪ್ರಾರ್ಥನೆ ಸಲ್ಲಿಸಿದರು.ಮೊಳಕಾಲ್ಮುರು ವರದಿ


ತಾಲ್ಲೂಕಿನಾದ್ಯಂತ ಸೋಮವಾರ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬ ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ದರ್ಗಾ ಮಸೀದಿ, ಜಾಮಿಯಾ ಮಸೀದಿ, ಮುಬಾರಕ್ ಮೊಹಲ್ಲಾ ಮಸೀದಿಗೆ ಸಂಬಂಧಪಟ್ಟ ಮುಸ್ಲಿಂ ಬಾಂಧವರು ಕೆಇಬಿ ವೃತ್ತ ಸಮೀಪದ ಪ್ರಾರ್ಥನಾ ಸ್ಥಳದಲ್ಲಿ ಹಾಗೂ ರೆಹಮಾನಿಯಾ ಮಸೀದಿಗೆ ಸಂಬಂಧಪಟ್ಟ ಬಾಂಧವರು ರೈಲು ನಿಲ್ದಾಣ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನಾ ಸ್ಥಳದಲ್ಲಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಮುತವಲ್ಲಿಗಳಾದ ಜಾಮಿಯಾ ಮಸೀದಿಯ ಅಬ್ದುಲ್ ಜಲೀಲ್, ಮುಬಾರಕ್ ಮೊಹಲ್ಲಾ ಮಸೀದಿಯ ಸೈಯದ್ ನಭೀ, ದರ್ಗಾ ಮಸೀದಿಯ ಬಾಷಾ, ರೆಹಮಾನಿಯಾ ಮಸೀದಿಯ ರಿಯಾಜ್ ಅಹಮದ್ ಇದ್ದರು.

ತಾಲ್ಲೂಕಿನ ಕೊಂಡ್ಲಹಳ್ಳಿ, ಬಿ.ಜಿ. ಕೆರೆ, ಹಾನಗಲ್, ತುಮಕೂರ‌್ಲಹಳ್ಳಿ,  ನಾಗಸಮುದ್ರ, ರಾಂಪುರ, ಬೊಮ್ಮಕ್ಕನಹಳ್ಳಿ, ಸಂತೇಗುಡ್ಡ ಇತರೆಡೆ ರಂಜಾನ್ ಆಚರಣೆ ಮಾಡಲಾಯಿತು.ನಾಯಕನಹಟ್ಟಿ ವರದಿ


ಇಲ್ಲಿನ ಮುಸ್ಲಿಂ ಬಾಂಧವರು ಸೋಮವಾರ ಗ್ರಾಮದ ಹಳೇ ಮಸೀದಿಯಿಂದ ಘೋಷ ವಾಕ್ಯಗಳೊಂದಿಗೆ ಆಸ್ಪತ್ರೆ ಮುಂಭಾಗದ ಈದ್ಗಾಕ್ಕೆ ತೆರಳಿ, ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಮೌಲ್ವಿ ಶೋಯೆಬ್ ಮಾತನಾಡಿದರು. ಜಾಮೀಯ ಮಸೀದಿ ಅಧ್ಯಕ್ಷ ಯೂಸೂಪ್, ಕಾರ್ಯದರ್ಶಿ ಏಜ್‌ಬಾಷ, ಸಬ್ ಇನ್ಸ್‌ಪೆಕ್ಟರ್ ಅಬ್ದುಲ್ ವಹೀದ್, ತಾ.ಪಂ. ಮಾಜಿ ಸದಸ್ಯ ಸೈಯದ್ ಅನ್ವರ್, ಟೀಪುಸಾಬ್ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.ಚಿಕ್ಕಜಾಜೂರು ವರದಿ

ಗ್ರಾಮದ ಮುಸ್ಲಿಂ ಬಾಂಧವರು ಸಡಗರದಿಂದ ರಂಜಾನ್ ಆಚರಿಸಿದರು.ಜಾಮಿಯ ಮಸೀದಿಯಿಂದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಹೊರಟು ಈದ್ಗಾ ತಲುಪಿದರು. ನಂತರ ಪರಸ್ಪರ ಶುಭಾಶಯ ಕೋರಿದರು.ಇರ್ಫಾನ್, ಜಾಮೀಯಾ ಮಸೀದಿ ಅಧ್ಯಕ್ಷ ಜಫರುಲ್ಲಾ ಸಾಬ್, ಕಾರ್ಯದರ್ಶಿ ಹುಸೇನ್‌ಪೀರ್ ಸಾಬ್, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಜಮೀರ್ ಬಾಷಾ, ಗಾರೆ ಹುಸೇನ್‌ಸಾಬ್, ಅಪಲಾಲ್ ಸಾಬ್, ಹುಸೇನ್‌ಪೀರ್ ಸಾಬ್, ಮಹಮ್ಮದ್ ಇದ್ದರು.ಇದಕ್ಕೂ ಮುನ್ನ, ಶಾಸಕ ಎಂ. ಚಂದ್ರಪ್ಪ ಅವರು ಬೆಳಿಗ್ಗೆ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಗೆ ರಂಜಾನ್ ಶುಭಾಶಯ ಕೋರಿದರು.ಗ್ರಾಮ ಪಂಚಾಯ್ತಿ ಅಧ್ಯಕ್ಷ ಡಿ.ಸಿ. ಮೋಹನ್ ಹಾಗೂ ಹೊಳಲ್ಕೆರೆ ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಸಿ. ರಮೇಶ್ ಪಾಲ್ಗೊಂಡಿದ್ದರು.ಸಮೀಪದ ಹಿರಿಯೂರು ಗ್ರಾಮದಲ್ಲಿ ಜಾಮೀಯ ಮಸೀದಿಯಿಂದ ಹಿರಿಯೂರು, ಅಂದನೂರು ಹಾಗೂ ಮುತ್ತುಗದೂರು ಗ್ರಾಮಗಳ ಮುಸ್ಲಿಂ ಬಾಂಧವರು ಮೆರವಣಿಗೆ ಹೊರಟು ಈದ್ಗಾ ತಲುಪಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.  ಹಜರತ್ ಮುಕ್ತಿಹಾರ್, ಜಾಮೀಯಾ ಮಸೀದಿಯ ಅಧ್ಯಕ್ಷ ಹೊನ್ನೂರ್‌ಸಾಬ್, ಎಚ್.ಬಿ. ರಜಾಕ್ ಸಾಬ್, ಜಬೀವುಲ್ಲಾ, ಟೀಪುಸಾಬ್, ಎಚ್.ಬಿ. ಹೊನ್ನೂರ್‌ಸಾಬ್, ಗ್ರಾಮ ಪಂಚಾಯ್ತಿ ಸದಸ್ಯ ಬಸೀರ್ ಸಾಬ್, ಫಯಾಸ್ ಸಾಬ್ ಪಾಲ್ಗೊಂಡಿದ್ದರು.ಧರ್ಮಪುರ ವರದಿ

ಮುಸ್ಲಿಂ ಬಾಂಧವರು ಸಮಾಜದಲ್ಲಿ ಶಾಂತಿ ಸಹಬಾಳ್ವೆಯಿಂದ ಜೀವನ ಸಾಗಿಸಬೇಕು. ರಂಜಾನ್ ಪವಿತ್ರ ಹಬ್ಬ, ಪ್ರತಿಯೊಬ್ಬರು ಬಡವರಿಗೆ, ನಿರ್ಗತಿಕರಿಗೆ ದಾನ ಕೊಡಬೇಕು ಎಂದು ಜಾಮೀಯ ಮಸೀದಿಯ ಇಮಾಮ್ ಮಹಮ್ಮದ್ ತಸ್ಲೀಂ ಉದ್ದೀನ್ ತಿಳಿಸಿದರು.ಇಲ್ಲಿನ ಈದ್ಗಾ ಮೈದಾನದಲ್ಲಿ ರಂಜಾನ್ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಅವರು ಮಾತನಾಡಿದರು. ಜಾಮೀಯ ಮಸೀದಿಯ ಮುತುವಲ್ಲಿ ಡಿ. ಸೈಯದ್ ಬಾಷ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.